Site icon Vistara News

Jalebi Baba | 120 ಮಹಿಳೆಯರನ್ನು ರೇಪ್ ಮಾಡಿದ್ದ ಜಿಲೇಬಿ ಬಾಬಾಗೆ 14 ವರ್ಷ ಜೈಲು ಶಿಕ್ಷೆ ಪ್ರಕಟ

Jalebi Baba Rape Case

ನವದೆಹಲಿ: ಹರಿಯಾಣದ ತೊಹಾನದಲ್ಲಿರುವ ಬಾಬಾ ಬಾಲಕನಾಥ್‌ ದೇವಾಲಯದ ಅರ್ಚಕ, ಜಿಲೇಬಿ ಬಾಬಾ (Jalebi Baba) ಎಂದೇ ಖ್ಯಾತಿಯಾದ, ಸುಮಾರು 120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಅಮರ್‌ಪುರಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ಹರ್ಯಾಣದ ಫತೇಹಾಬಾದ್ ಫಾಸ್ಟ್ ಟ್ರ್ಯಾಕ್ ಕೋರ್ಟ್ ಪ್ರಕಟಿಸಿದೆ. ಈತ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅದರ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಲ್ವಂತ್ ಸಿಂಗ್ ಅವರು 63 ವರ್ಷದ ಅಮರಪುರಿ ಅವರಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಅಪ್ರಾಪ್ತ ವಯಸ್ಕರನ್ನು ಎರಡು ಬಾರಿ ಅತ್ಯಾಚಾರಕ್ಕಾಗಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಾಗೆಯೇ, ಸೆಕ್ಷನ್ 376 ರ ಅಡಿಯಲ್ಲಿ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಭಾರತೀಯ ದಂಡ ಸಂಹಿತೆಯ ಸಿ ಮತ್ತು ಐಟಿ ಕಾಯಿದೆಯ ಸೆಕ್ಷನ್ 67-ಎ ಅಡಿಯಲ್ಲಿ 5 ವರ್ಷ ಜೈಲು ನೀಡಲಾಗಿದೆ. ಆದರೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಯಿತು.

ಯಾರು ಈ ಜಿಲೇಬಿ ಬಾಬಾ?
ಜಿಲೇಬಿ ಬಾಬಾ ಎಂದೇ ಖ್ಯಾತನಾಗಿರುವ ಈ ಅಮರ್‌ಪುರಿ ಎಂಬಾತ ಹರಿಯಾಣದ ತೊಹಾನದಲ್ಲಿರುವ ಬಾಬಾ ಬಾಲಕನಾಥ್‌ ದೇವಾಲಯದ ಅರ್ಚಕನಾಗಿದ್ದ. ಹೆಣ್ಣುಮಕ್ಕಳಿಗೆ ಮತ್ತು ಬರುವ ಔಷಧ ನೀಡಿ, ಬ್ಲ್ಯಾಕ್‌ ಮ್ಯಾಜಿಕ್‌ ಹೆಸರಿನಲ್ಲಿ ಅವರ ಮೇಲೆ ಅತ್ಯಾಚಾರ ಎಸಗುವ ಜತೆಗೆ ಅತ್ಯಾಚಾರದ ವಿಡಿಯೊ ರೆಕಾರ್ಡ್‌ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಪಂಜಾಬ್‌ನ ಮಾನ್ಸಾದಿಂದ ಹರಿಯಾಣದ ಫತೇಹಾಬಾದ್‌ಗೆ ಆಗಮಿಸಿದ್ದ ಅಮರ್‌ಪುರಿ, ಆರಂಭದಲ್ಲಿ ತೊಹಾನ ರೈಲ್ವೆ ರೋಡ್‌ನಲ್ಲಿ ಜಿಲೇಬಿ ಅಂಗಡಿ ಇಟ್ಟಿದ್ದ. ತನ್ನ ಹೆಂಡತಿ ತೀರಿಕೊಂಡ ಬಳಿಕ ತಾಂತ್ರಿಕನಾಗಿ ಬದಲಾಗಿದ್ದ. ಬ್ಲ್ಯಾಕ್‌ ಮ್ಯಾಜಿಕ್‌ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಈತನನ್ನು 2018ರಲ್ಲಿ ಫತೇಹಾಬಾದ್‌ ಡಿಎಸ್‌ಪಿ ಆಗಿದ್ದ ಕ್ರಿಕೆಟರ್‌ ಜೋಗಿಂದರ್‌ ಶರ್ಮಾ ಅವರು ಬಂಧಿಸಿದ್ದರು.

ಇದನ್ನೂ ಓದಿ | Jalebi Baba | 120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಜಿಲೇಬಿ ಬಾಬಾ ದೋಷಿ, ಅರ್ಚಕನಾಗಿದ್ದ ಈತನ ಕತೆಯೇ ರೋಚಕ

Exit mobile version