Site icon Vistara News

Farooq Abdullah | ಕಾಶ್ಮೀರದಲ್ಲಿ ಎಲ್ಲಿಯ ತನಕ ಕೊಲೆಗಳಾಗಲಿವೆ? ಫಾರೂಖ್ ಅಬ್ದುಲ್ಲಾ ಹೇಳಿದ್ದೇನು?

Article 370 may came back in 200 years Says Farooq Abdullah

ನವದೆಹಲಿ: ನ್ಯಾಯ ಸಿಗುವವರೆಗೂ ಹತ್ಯೆಗಳು ನಿಲ್ಲುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ನಾಯಕ ಫಾರೂಖ್ ಅಬ್ದುಲ್ಲಾ (Farooq Abdullah) ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಈಗ ಕಣಿವೆ ರಾಜ್ಯದಲ್ಲಿ 370 ಆರ್ಟಿಕಲ್ ಕೂಡ ಇಲ್ಲ. ಆದರೂ ಏಕೆ ಹತ್ಯೆಗಳು ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಶೋಪಿಯಾನ್ ಪ್ರದೇಶದಲ್ಲಿ ಹಾಡಹಗಲೇ ಕಾಶ್ಮೀರ ಪಂಡಿತ ಪೂರನ್ ಕೃಷ್ಣ ಭಟ್ ಅವರ ಭೀಕರ ಹತ್ಯೆ ನಡೆದ ಎರಡು ದಿನಗಳ ಬೆನ್ನಲ್ಲೇ ಫಾರೂಖ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ನ್ಯಾಯ ಸಿಗುವವರೆಗೂ ಹತ್ಯೆಗಳು ನಿಲ್ಲುವುದಿಲ್ಲ. ಈ ಮೊದಲು ಅವರು(ಬಿಜೆಪಿ) ಕಣಿವೆ ರಾಜ್ಯದಲ್ಲಾಗುವ ಎಲ್ಲ ಅವಘಡಗಳಿಗೂ ಆರ್ಟಿಕಲ್ 379 ಮೇಲೆ ಗೂಬೆ ಕೂರಿಸುತ್ತಿದ್ದರು. ಈಗ 370 ಆರ್ಟಿಕಲ್ ತೆಗೆದು ಹಾಕಲಾಗಿದೆಯಲ್ಲ, ಈಗಲೂ ಅಂಥ ಘಟನೆಗಳು ಏಕೆ ಕಣಿವೆ ರಾಜ್ಯದಲ್ಲಾಗುತ್ತಿವೆ? ಇದಕ್ಕೆ ಯಾರು ಜವಾಬ್ದಾರರು ಹೇಳಿ ನೋಡೋಣ? ಅವರು ಹೇಳಿದ ಹಾಗೇ ಕಣಿವೆ ರಾಜ್ಯದಲ್ಲಿ ನಿಜವಾಗಲೂ ಪರಿಸ್ಥಿತಿ ಸುಧಾರಿಸಿದ್ದರೆ ಪಂಡಿತರ ಕೊಲೆಗಳು ಏಕೆ ನಡೆಯುತ್ತಿವೆ ಎಂದು ಫಾರೂಖ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಫಾರೂಖ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರ ಅವಾಮಿ ನ್ಯಾಷನಲ್ ಕಾನ್ಫರೆನ್ಸ್(ಜೆಕೆಎಎನ್‌ಸಿ) ಬೆಂಬಲಿಸಿದೆ. ಅಬ್ದುಲ್ಲಾ ಅವರು ಹೇಳಿದ್ದು ಸಂಪೂರ್ಣವಾಗಿ ಸರಿಯಾಗಿದೆ. 370 ಆರ್ಟಿಕಲ್ ತೆಗೆದು ಹಾಕಿದರೂ ಟಾರ್ಗೆಟ್ ಕಿಲ್ಲಿಂಗ್ ಏಕೆ ನಡೆಯುತ್ತಿದೆ ಎಂದು ಪಕ್ಷದ ಹಿರಿಯ ನಾಯಕ ಮುಝ್ಪಪರ್ ಅಹ್ಮದ್ ಅವರು ಹೇಳಿದ್ದಾರೆ.

ಕಳೆದ ಬಾರಿ ಕುಟುಂಬದ ಸದಸ್ಯರ ಭದ್ರತೆಯನ್ನು ಕೇಳಿದ್ದರೂ ಭದ್ರತೆಯನ್ನು ಒದಗಿಸಲಿಲ್ಲ. ಕೊನೆಗೆ ಪಂಡಿತ ಗುಂಡಿಗೆ ಬಲಿಯಾಗಬೇಕಾಯಿತು. ಆದರೆ, ಮತ್ತೊಂದೆಡೆ, ಬಿಜೆಬಿ ನಾಯಕರು ಮತ್ತು ಆಡಳಿತದಲ್ಲಿ ಇರುವವರಿಗೆ ಭದ್ರತಾ ಸಿಬ್ಬಂದಿಯ ಶೇ.30 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸರ್ಕಾರ ಏನೂ ಮಾಡುತ್ತಿಲ್ಲ. ಇದು ಅನ್ಯಾಯದ ಪರಮಾವಧಿ. 2010ರಿಂದ ಯಾವ ನಾಗರಿಕರು ಕಣಿವೆ ರಾಜ್ಯದಲ್ಲಿ ಸತ್ತಿರಲಿಲ್ಲ. ಆದರೆ, ರಾಜ್ಯಪಾಲರ ಆಡಳಿತದಲ್ಲಿ ಕಣಿವೆ ತುಂಬ ಹತ್ಯೆಗಳಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ ಉಗ್ರರು; ಆತನ ಸಹೋದರನಿಗೆ ಗಂಭೀರ ಗಾಯ

Exit mobile version