ಶ್ರೀನಗರ: ಶಂಕಿತ ಉಗ್ರನ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಡಿವೈಎಸ್‌ಪಿ (Kashmir DySP) ಶೇಖ್ ಆದಿಲ್ ಮುಷ್ತಾಕ್ ಅವರನ್ನು ಬಂಧಿಸಲಾಗಿದೆ. ಉಗ್ರನಿಗೆ ಸುಮಾರು 40 ಬಾರಿ ಕರೆ ಮಾಡಿರುವ, ಆತನಿಗೆ ಸೂಕ್ಷ್ಮ ಮಾಹಿತಿ ಒದಗಿಸುತ್ತಿರುವ ಹಾಗೂ ಕಾನೂನಿನ ಕಣ್ಣಿನಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ತರಬೇತಿ ಸೇರಿ ವಿವಿಧ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
“ಶಂಕಿತ ಉಗ್ರನ ಜತೆ ಶೇಖ್ ಆದಿಲ್ ಮುಷ್ತಾಕ್ ಅವರು ಸುಮಾರು 40 ಬಾರಿ ಫೋನ್‌ನಲ್ಲಿ ಮಾತನಾಡಿದ್ದಾರೆ. ಹೇಗೆ, ಪೊಲೀಸರ ಕಣ್ಣು ತಪ್ಪಿಸಿಕೊಂಡು ತಿರುಗಾಡಬೇಕು, ಹೇಗೆ ಬಂಧನದಿಂದ ತಪ್ಪಿಸಿಕೊಳ್ಳಬೇಕು, ಹಾಗೊಂದು ವೇಲೆ ಬಂಧನವಾದರೆ ಹೇಗೆ ಕಾನೂನಿನ ನೆರವು ಪಡೆಯಬೇಕು ಎಂಬುದು ಸೇರಿ ಹಲವು ಮಾಹಿತಿ ನೀಡಿದ್ದಾರೆ” ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧನದ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
This incident proves that Even a DSP RANK OFFICER Sheikh Adil Mushtaq is cooperating with the Terrorist operatives… what punishment should be given to this OFFICER… mention in the comment… JAIHIND pic.twitter.com/FyEj1543j1
— sivakumar (@kssivakumar) September 22, 2023
5 ಲಕ್ಷ ರೂ. ಲಂಚ
“ಶೇಖ್ ಆದಿಲ್ ಮುಷ್ತಾಕ್ ಅವರು ಉಗ್ರನಿಂದ 5 ಲಕ್ಷ ರೂಪಾಯಿ ಲಂಚವನ್ನೂ ಪಡೆದಿದ್ದಾರೆ. ಅಷ್ಟೇ ಏಕೆ, ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಹಣಕಾಸು ವಹಿವಾಟು ನೋಡಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆ ತೆರೆದಿದ್ದ ಮುಜಾಮಿಲ್ ಜಹೂರ್ ಜತೆಗೂ ಇವರು ಸಂಪರ್ಕ ಹೊಂದಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ. ಕಳೆದ ಮಾರ್ಚ್‌ನಲ್ಲೂ ಶೇಖ್ ಆದಿಲ್ ಮುಷ್ತಾಕ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದವು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇದನ್ನೂ ಓದಿ: Love Jihad : ಮಹಿಳಾ ಟೆಕ್ಕಿ ಜತೆ ಲೈಂಗಿಕ ಸಂಪರ್ಕ ಬೆಳೆಸಿ ಲವ್ ಜಿಹಾದ್‌ಗೆ ಪ್ರಯತ್ನ; ಕಾಶ್ಮೀರಿ ಯುವಕನ ಮೇಲೆ FIR
ಪೊಲೀಸ್ ಅಧಿಕಾರಿ ವಿರುದ್ಧ ಸುಳ್ಳು ಕೇಸ್
ಪ್ರಕರಣವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನೇ ಸಿಲುಕಿಸಲು ಸುಳ್ಳು ಕೇಸ್ ಹೆಣೆದ ಆರೋಪವೂ ಶೇಖ್ ಆದಿಲ್ ಮುಷ್ತಾಕ್ ವಿರುದ್ಧ ಕೇಳಿಬಂದಿದೆ. “ಜುಲೈನಲ್ಲಿ ಮುಜಾಮಿಲ್ ಜಹೂರ್ ಬಂಧನಕ್ಕೂ ಮೊದಲು ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ವಿರುದ್ಧ ಕೇಸ್ ದಾಖಲಾಗಿತ್ತು. ತನಿಖೆಯ ಬಳಿಕ ಈ ಪ್ರಕರಣವನ್ನು ಹೆಣೆದಿದ್ದೇ ಶೇಖ್ ಆದಿಲ್ ಮುಷ್ತಾಕ್ ಎಂಬುದಾಗಿ ಗೊತ್ತಾಯಿತು” ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.