Site icon Vistara News

Rahul Gandhi: ಶ್ರಾವಣ ಮಾಸದಲ್ಲಿ ಮಟನ್‌ ತಿಂದ ‘ಜನಿವಾರಧಾರಿ ಬ್ರಾಹ್ಮಣ’ ರಾಹುಲ್‌ ಗಾಂಧಿ! ಬಿಜೆಪಿ ಟಾಂಗ್‌

Rahul Gandhi Mutton

Janeudhaari Brahmin Rahul Gandhi eats mutton in Sawan: BJP Taunts Congress Leader

ನವದೆಹಲಿ: ಆರ್‌ಜೆಡಿ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರ ದೆಹಲಿಯಲ್ಲಿರುವ ನಿವಾಸದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮಟನ್‌ ತಿಂದಿರುವ ವಿಡಿಯೊ ವೈರಲ್‌ ಆದ ಬೆನ್ನಲ್ಲೇ, ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ಟಾಂಗ್‌ ನೀಡಿದೆ. ಅದರಲ್ಲೂ, ರಾಹುಲ್‌ ಗಾಂಧಿ ಅವರು ಇದಕ್ಕೂ ಮೊದಲು ಹೇಳಿದ್ದ “ಜನಿವಾರಧಾರಿ ಬ್ರಾಹ್ಮಣ” ಎಂಬ ಹೇಳಿಕೆಯನ್ನು ಉಲ್ಲೇಖಿಸಿಯೇ ಟೀಕಿಸಿದೆ.

“ಲಾಲು ಪ್ರಸಾದ್‌ ಯಾದವ್‌ ಹಾಗೂ ರಾಹುಲ್‌ ಗಾಂಧಿ ಅವರು ಆಗಸ್ಟ್‌ 4ರಂದು ಮಟನ್‌ ಅಡುಗೆ ಮಾಡುತ್ತಾರೆ. ಅವರಿಬ್ಬರೂ ಮಾಸ್ಟರ್‌ಶೆಫ್‌ ಆಗಿ ಮಟನ್‌ ತಯಾರಿಸುತ್ತಾರೆ. ಆದರೆ, ಸಾವನ್‌ ಮಾಸ ಮುಗಿಯುವತನಕ ಕಾದು ರಾಹುಲ್‌ ಗಾಂಧಿ ಅವರು ವಿಡಿಯೊ ಅಪ್‌ಲೋಡ್‌ ಮಾಡುವ ಮೂಲಕ ತಮ್ಮ ಕೌಶಲ ಪ್ರದರ್ಶಿಸಿದ್ದಾರೆ. ಇದು ʼಜನಿವಾರಧಾರಿ ಬ್ರಾಹ್ಮಣʼ ನಾಟಕ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ತಿರುಗೇಟು ನೀಡಿದ್ದಾರೆ.

ಸಂಬಿತ್‌ ಪಾತ್ರ ಟಾಂಗ್

“ನಾನೂ ಜನಿವಾರಧಾರಿ ಬ್ರಾಹ್ಮಣ” ಎಂದು ಇದಕ್ಕೂ ಮೊದಲು ರಾಹುಲ್‌ ಗಾಂಧಿ ಹೇಳಿದ್ದರು. ಈಗ ಅವರ ಉಲ್ಲೇಖವನ್ನೇ ಪ್ರಸ್ತಾಪಿಸಿ ಟಾಂಗ್‌ ನೀಡಿದ್ದಾರೆ. ಹಿಂದುಗಳ ಪವಿತ್ರ ಸಾವನ್‌ ಮಾಸವು ಜುಲೈ 4ರಂದು ಆರಂಭವಾಗಿ ಆಗಸ್ಟ್‌ 31ರಂದು ಅಂತ್ಯವಾಗಿದೆ. ಈ ಅವಧಿಯಲ್ಲಿ ಹೆಚ್ಚಿನ ಜನ ಮಾಂಸಾಹಾರ ಸೇವಿಸುವುದಿಲ್ಲ. ಸಾವನ್‌ ಹಿನ್ನೆಲೆಯಲ್ಲಿಯೇ ರಾಹುಲ್‌ ಗಾಂಧಿ ಅವರು ಮಟನ್‌ ಅಡುಗೆಯ ವಿಡಿಯೊ ಪೋಸ್ಟ್‌ ಮಾಡಿರಲಿಲ್ಲ ಎಂಬುದು ಬಿಜೆಪಿ ಆರೋಪವಾಗಿದೆ.

ವೈರಲ್‌ ಆದ ವಿಡಿಯೊ

ಇದನ್ನೂ ಓದಿ: Politics with Meat Cooking: ರಾಹುಲ್ ಗಾಂಧಿ, ಲಾಲು, ಚಂಪಾರಣ್ ಮಟನ್ ಅಡುಗೆ ಮತ್ತು ರಾಜಕಾರಣ!

ಆಗಸ್ಟ್‌ 4ರಂದು ರಾಹುಲ್‌ ಗಾಂಧಿ ಅವರು ಲಾಲು ಪ್ರಸಾದ್‌ ಯಾದವ್‌ ನಿವಾಸಕ್ಕೆ ಭೇಟಿ ನೀಡಿದ್ದು, ಇದೇ ವೇಳೆ ಲಾಲು ಪ್ರಸಾದ್‌ ಯಾದವ್‌ ಹಾಗೂ ರಾಹುಲ್‌ ಗಾಂಧಿ ಅವರು ‘ಚಂಪಾರಣ್‌ ಮಟನ್’‌ ತಯಾರಿಸಿದ್ದಾರೆ. ಇದರ ವಿಡಿಯೊವನ್ನು ರಾಹುಲ್‌ ಗಾಂಧಿ ಅವರು ಶನಿವಾರ (ಸೆಪ್ಟೆಂಬರ್‌ 2) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಲಾಲು ಪ್ರಸಾದ್‌ ಯಾದವ್‌ ಅವರು ಹೇಗೆ ಮಟನ್‌ ಮಾಡಬೇಕು, ಯಾವುದನ್ನು ಎಷ್ಟು ಹಾಕಬೇಕು ಎಂಬುದು ಸೇರಿ ಹಲವು ಸಲಹೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ಲಾಲು ವಾಗ್ದಾಳಿ

ಅಡುಗೆ ಮಾಡುವಾಗ ಲಾಲು ಪ್ರಸಾದ್ ಯಾದವ್‌ ಹಾಗೂ ರಾಹುಲ್‌ ಗಾಂಧಿ ನಡೆಸಿದ ಮಾತುಕತೆ ವೇಳೆ, “ದೇಶದಲ್ಲಿ ಬಿಜೆಪಿ ಏಕೆ ದ್ವೇಷವನ್ನು ಹರಡುತ್ತಿದೆ” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲಾಲು ಪ್ರಸಾದ್ ಯಾದವ್‌, “ರಾಜಕೀಯದ ಹಸಿವು ಎಂದಿಗೂ ತೃಪ್ತಿ ನೀಡುವುದಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ರಾಹುಲ್‌ ಗಾಂಧಿ ಅವರು ಮಟನ್‌ ಮಾಡಿಕೊಟ್ಟ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ, ಸಹೋದರಿ ಪ್ರಿಯಾಂಕಾ ವಾದ್ರಾ ಅವರಿಗೂ ಅವರು ಚಂಪಾರಣ್‌ ಮಟನ್‌ ನೀಡಿದ್ದಾರೆ. ಮಟನ್‌ ಸೇವಿಸಿದ ಪ್ರಿಯಾಂಕಾ ವಾದ್ರಾ, ರುಚಿಕಟ್ಟಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version