Site icon Vistara News

ಮೋದಿಗೆ ಕೃಷ್ಣನ ವರ್ಣಚಿತ್ರ ಕೊಟ್ಟ ಜಸ್ನಾ ಸಲೀಂ; ಇವರ ಮಗನಿಗೆ ಮದ್ರಸಾದಲ್ಲಿ ನೋ ಎಂಟ್ರಿ!

Narendra modi

ತ್ರಿಶೂರ್: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಗುರುವಾಯೂರಿನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿರುವ ಕಲಾವಿದೆ ಜಸ್ನಾ ಸಲೀಂ ಅವರಿಂದ ಅತ್ಯಾಕರ್ಷಕ ಬಾಲ ಕಷ್ಣದನ ಚಿತ್ರವೊಂದನ್ನು ಸ್ವೀಕರಿಸಿದರು. ಇದೇ ವೇಳೆ ಅವರು ಭಗವಾನ್ ಶ್ರೀ ಕೃಷ್ಣನ ಬಗ್ಗೆ ಜಸ್ನಾ ಅವರು ಹೊಂದಿರುವ ಅಚಲ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಪರ್ಯಾಸ ಎಂದರೆ ಪೂರ್ವಾಗ್ರಹವಿಲ್ಲದೇ ಕೃಷ್ಣನ ಮೇಲೆ ಭಕ್ತಿ ಇಟ್ಟಿರುವ ಇವರು ಇಸ್ಲಾಂ ಸಮುದಾಯದೊಳಗಿನಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಎಲ್ಲಿಯ ತನಕ ಎಂದರೆ, ಅವರ ಪುತ್ರನಿಗೆ ಮದ್ರಸಾ ಶಿಕ್ಷಣಕ್ಕೆ ಪ್ರವೇಶವೇ ನೀಡಿಲ್ಲವಂತೆ.

ಗುರುವಾಯೂರಿನಲ್ಲಿ ನಾನು ಜಸ್ನಾ ಸಲೀಂ ಅವರಿಂದ ಭಗವಾನ್ ಶ್ರೀ ಕೃಷ್ಣ ಚಿತ್ರಕಲೆಯನ್ನು ಸ್ವೀಕರಿಸಿದೆ. ಕೃಷ್ಣ ಭಕ್ತಿಯಲ್ಲಿ ಅವರ ಪ್ರಯಾಣವು ಭಕ್ತಿಯ ಪರಿವರ್ತಕ ಶಕ್ತಿಗೆ ಸಾಕ್ಷಿಯಾಗಿದೆ. ಅವರು ಪ್ರಮುಖ ಹಬ್ಬಗಳು ಸೇರಿದಂತೆ ಗುರುವಾಯೂರಿನಲ್ಲಿ ಭಗವಾನ್ ಶ್ರೀ ಕೃಷ್ಣನ ವರ್ಣಚಿತ್ರಗಳನ್ನು ವರ್ಷಗಳಿಂದ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಯಾರು ಜಸ್ನಾ ಸಲೀಂ?

ಕೊಯಿಲಾಂಡಿ ಮೂಲದ ಗೃಹಿಣಿ ಜಸ್ನಾ ಸಲೀಂ ಅವರು ಬಾಲಕೃಷ್ಣನ 500ಕ್ಕೂ ಹೆಚ್ಚು ಸೊಗಸಾದ ವರ್ಣಚಿತ್ರಗಳನ್ನು ಬಿಡಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅವರ ಕಲಾಕೃತಿಯು ಕೇರಳ ರಾಜ್ಯದೊಳಗೆ ಮತ್ತು ಹೊರಗೆ ಅಪಾಯ ಮೆಚ್ಚುಗೆ ಗಳಿಸಿದೆ. ಬೃಹತ್​​ ಸಂಖ್ಯೆಯ ಅಭಿಮಾನಿಗಳು ಮತ್ತು ಖರೀದಿದಾರರನ್ನು ಆಕರ್ಷಿಸಿದೆ.

ಜಸ್ನಾ ಹಲವಾರು ವರ್ಷಗಳಿಂದ ತ್ರಿಶೂರ್ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಬಾಲ ಕೃಷ್ಣನ ಭಾವಚಿತ್ರಗಳನ್ನು ಉದಾರವಾಗಿ ಉಡುಗೊರೆಯಾಗಿ ನೀಡುತ್ತಿದ್ದಾರೆ. ಆದಾಗ್ಯೂ, ದೇಗುಲದ ನಿಯಮಗಳು ಮತ್ತು ಪದ್ಧತಿಗಳಿಂದಾಗಿ ಅವರಿಗೆ ದೇವಾಲಯವನ್ನು ಪ್ರವೇಶಿಸಲು ಅಥವಾ ಗರ್ಭಗುಡಿಯ ಮುಂದೆ ತನ್ನ ಕಲಾಕೃತಿಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಪ್ರತಿ ವರ್ಷ ವಿಷು ಮತ್ತು ಜನ್ಮಾಷ್ಟಮಿಯ ದಿನಗಳಲ್ಲಿ, ಅವರು ತಮ್ಮ ಕಲಾಕೃತಿಯನ್ನು ದೇವಾಲಯದ ಪ್ರವೇಶದ್ವಾರದಲ್ಲಿರುವ ಹುಂಡಿಯ ಬಳಿ ಇಡುತ್ತಾರೆ.

ಅವಘಡದ ವೇಳೆ ಅರಳಿದ ಪ್ರತಿಭೆ

ಜಸ್ನಾ ಅವರ ಕಲಾತ್ಮಕ ಪ್ರಯಾಣದ ಒಂದು ಕುತೂಹಲಕಾರಿ ಅಂಶವೆಂದರೆ ಎಲ್ಲ ಚಿತ್ರವೂ ಕೃಷ್ಣನಿಗೆ ಸಂಬಂಧಿಸಿದ್ದು ಹಾಗೂ ಬೆಣ್ಣೆ ಕೃಷ್ಣನದ್ದು. “ನಾನು ಶ್ರೀಕೃಷ್ಣನನ್ನು ಮಾತ್ರ ಪರಿಪೂರ್ಣತೆಯಿಂದ ಚಿತ್ರಿಸಬಲ್ಲೆ. ಕಾರಣ ಏನೆಂದು ನನಗೆ ಗೊತ್ತಿಲ್ಲ. ನಾನು ನಿಜವಾಗಿಯೂ ಆಕಸ್ಮಿಕ ಕಲಾವಿದೆ. ವೃತ್ತಿಪರ ತರಬೇತಿ ಇಲ್ಲ. ಆರು ವರ್ಷಗಳ ಹಿಂದೆ ನಾನು ಗರ್ಭಿಣಿಯಾಗಿದ್ದಾಗ ಮತ್ತು ಅಪಘಾತವಾಯಿತು. ಬೆಡ್​ ರೆಸ್ಟ್​ ವೇಳೆ ಚಿತ್ರಕಲೆ ಮಾಡಲು ಪ್ರಾರಂಭಿಸಿದೆ.

ಇದನ್ನೂ ಓದಿ : Ayodhya Ram Mandir: ರಾಮ ಅಯೋಧ್ಯೆಗೆ ಮರಳಿ ಬರುವ ಸಂತಸದ ಹಾಡು ಸೋನು ನಿಗಮ್ ಧ್ವನಿಯಲ್ಲಿ!

ಪುಟ್ಟ ಶ್ರೀಕೃಷ್ಣನ ಮುಗ್ಧತೆಯನ್ನು ಚಿತ್ರಿಸುವಲ್ಲಿ ಜಸ್ನಾ ಸಲೀಂ ಅವರ ಅನನ್ಯ ಪ್ರತಿಭೆ ಮತ್ತು ಸಮರ್ಪಣೆ ಪ್ರಧಾನಿ ಮೋದಿಯವರ ಹೃದಯವನ್ನು ಸ್ಪರ್ಶಿಸಿದೆ. ಕಲಾ ಉತ್ಸಾಹಿಗಳು ಮತ್ತು ಭಕ್ತರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ಭಾರೀ ವಿರೋಧ

ಜಸ್ನಾ ಅವರಿಗೆ ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ಎದುರಿಸಿದ್ದಾರೆ. ಅವರ ಪುತ್ರನನ್ನು ಮದ್ರಸಾಕ್ಕೆ ಸೇರಿಸಿಕೊಳ್ಳಲು ಮುಸ್ಲಿಂ ಮುಖಂಡರು ಒಪ್ಪಿಲ್ಲ. ನನಗೆ ಮದ್ರಸಾ ಪ್ರಮಾಣಪತ್ರ ನೀಡಲು ಒಪ್ಪಿಲ್ಲ. ಪೋಷಕರ ಗುಣ-ನಡತೆಯನ್ನು ಪರಿಶೀಲಿಸಿ ನೀಡುತ್ತೇವೆ ಎಂದು ಕಾರಣಕೊಟ್ಟಿದ್ದಾರೆ. ಅದೇ ಕಾರಣಕ್ಕೆ ನನ್ನ ನನ್ನ ಪುತ್ರಿಯನ್ನು ಮದ್ರಸಾಗೆ ಕಳುಹಿಸಿಲ್ಲ. ಅವಳು ಆನ್​ಲೈನ್​ನಲ್ಲಿ ಕಲಿಯುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ.

ನನ್ನ ಕುಟುಂಬ ನನಗೆ ಬೆಂಬಲ ನೀಡುತ್ತಿದೆ. ನನ್ನ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೂ ಬೆಂಬಲಕ್ಕೆ ಇದ್ದಾರೆ. ಗುರುವಾಯೂರು ದೇವಸ್ಥಾನಕ್ಕೆ ಕೃಷ್ಣದ ಚಿತ್ರವನ್ನು ನೀಡಲು ಹೋದಾಗ ತಂದೆಯೂ ಬಂದಿದ್ದರು ಎಂದು ಜಸ್ನಾ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಅಲ್ಲಾನಷ್ಟೇ ಕೃಷ್ಣನ ಮೇಲೆಯೂ ಭಕ್ತಿ ಇಟ್ಟುಕೊಂಡಿದ್ದೇನೆ. ನಾನು ಇಸ್ಲಾಂ ಅನ್ನು ಇಷ್ಟಪಡುತ್ತೇನೆ. ಅಲ್ಲಾ ಮತ್ತು ಕೃಷ್ಣನ ಬಗ್ಗೆ ಭಕ್ತಿ ಇಡುವುದರಲ್ಲಿ ನನಗೆ ಯಾವುದೇ ವ್ಯತ್ಯಾಸ ಕಂಡಿಲ್ಲ ಎಂದು ಅವರು ಹೇಳುತ್ತಾರೆ.

Exit mobile version