ನವದೆಹಲಿ: ಭಾರತೀಯ ಉಡುಗೆಯನ್ನು ಬಿಟ್ಟು ನಮ್ಮ ಹುಡುಗಿಯರೇಕೆ ಪಾಶ್ಚಿಮಾತ್ಯ ಉಡುಗೆಗೆ ಮಾರುಹೋಗಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಭಾರತೀಯ ಉಡುಗೆಯೇ ಮೊದಲ ಆದ್ಯತೆಯಾಗಲಿ ಎಂದು ಸಂಸದೆಯೂ ಆಗಿರುವ ನಟಿ ಜಯಾ ಬಚ್ಚನ್ (Jaya Bachchan) ಹೇಳಿದ್ದಾರೆ. ತಮ್ಮ ಮೊಮ್ಮಗಳ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿ, ಈ ವಿಷಯ ತಿಳಿಸಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಪತ್ನಿಯೂ ಆಗಿರುವ ಜಯಾ, ಆಗಾಗ ತಮ್ಮ ನೇರ ಮತ್ತು ನಿಷ್ಠುರ ಮಾತುಗಳಿಂದ ಸುದ್ದಿಯಲ್ಲಿರುತ್ತಾರೆ. ಅವರು ಯಾವಾಗಲೂ ಮಹಿಳಾ ಪರ ಧ್ವನಿ ಎತ್ತುತ್ತಾರೆ.
ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್ ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಪುರುಷರಷ್ಟೇ ಸಮಾನರು ಎಂಬ ಮನಸ್ಥಿತಿ ಬರಲು ಅವರು ಪಾಶ್ಚಿಮಾತ್ಯ ಉಡುಗೆಯನ್ನು ತೊಡುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ. ಆದರೆ, ಮಹಿಳೆ ಮಹಿಳಾ ಶಕ್ತಿಯಾಗಿಯೇ ಕಾಣಬೇಕೆಂದು ನಾನು ಬಯಸುತ್ತೇನೆ. ಅದರರ್ಥ ಸೀರೆಯನ್ನೇ ಉಟ್ಟುಕೊಳ್ಳಬೇಕು ಎಂದಲ್ಲ ಎಂದು ಅವರು ತಿಳಿಸಿದ್ದಾರೆ.
ಜಯಾ ಅವರ ಪುತ್ರಿ ಶ್ವೇತಾ ಬಚ್ಚನ್ ಅವರು ತಮ್ಮ ತಾಯಿಯ ಈ ಬಿರುನುಡಿಗೆ ತಕ್ಷಣವೇ ಪ್ರತಿಕ್ರಿಯಿಸಿದ್ದು, ಇಂದಿನ ಬಹುತೇಕ ಮಹಿಳೆಯರ ವೃತ್ತಿನಿರತರು. ಕೆಲಸ ಮಾಡುವಾಗ ಸುಲಭವಾಗಲಿ ಎಂದು ಪಾಶ್ಚಿಮಾತ್ಯ ಉಡುಗೆಯನ್ನು ತೊಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Jaya Bachan | ಮದ್ವೆ ಆಗದೇ ಮೊಮ್ಮಗಳು ಮಗು ಮಾಡಿಕೊಂಡ್ರೆ ತಕರಾರಿಲ್ಲ: ಜಯಾ ಬಚ್ಚನ್