ಬಿಹಾರದ ಮುಂಗರ್ ಎಂಬಲ್ಲಿ ಜನತಾ ದಳ (ಯುನೈಟೆಡ್) ಅಧ್ಯಕ್ಷ ಲಲನ್ ಸಿಂಗ್ (Janata Dal (United) President Lalan Singh) ಅವರು ಇತ್ತೀಚೆಗೆ ಪಕ್ಷದ ಕಾರ್ಯಕರ್ತರಿಗಾಗಿ ಇತ್ತೀಚೆಗೆ ಒಂದು ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಮಾಂಸದ ಅಡುಗೆ ಮಾಡಲಾಗಿತ್ತು. ಬಿರ್ಯಾನಿ ಅದೂ-ಇದು ಸೇರಿ ಒಟ್ಟಿನಲ್ಲಿ ಭರ್ಜರಿ ಬಾಡೂಟವೇ ಇತ್ತು. ಈ ಬಾಡೂಟ ಮುಗಿದ ಮೇಲೆ ಈಗ ಬಿಜೆಪಿ ನಾಯಕ ವಿಜಯ್ ಕುಮಾರ್ ಅವರು ಲಲನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜೆಡಿಯು ನಾಯಕ ಆಯೋಜಿಸಿದ್ದ ಬಾಡೂಟದ ಪಾರ್ಟಿ ಮುಗಿದ ಮೇಲೆ ನಗರದಲ್ಲಿ ಇದ್ದ 100ಕ್ಕೂ ಹೆಚ್ಚು ನಾಯಿಗಳು ನಾಪತ್ತೆಯಾಗಿವೆ’ ಎಂದಿದ್ದಾರೆ.
‘ಇದೊಂದು ಗಂಭೀರವಾದ ವಿಷಯ. ಜೆಡಿಯು ನಾಯಕ ಆಯೋಜಿಸಿದ್ದ ಪಾರ್ಟಿ ಮುಗಿದ ಮೇಲೆ ನೂರಕ್ಕೂ ಹೆಚ್ಚು ನಾಯಿಗಳು ಕಾಣೆಯಾಗಿವೆ ಎಂಬ ವಿಷಯವನ್ನು ನನ್ನ ಬಳಿ ಹಲವರು ಹೇಳಿದ್ದಾರೆ. ಈ ಔತಣಕೂಟದಲ್ಲಿ ಕಾರ್ಯಕರ್ತರಿಗೆ ಹಲವು ಪ್ರಾಣಿಗಳ ಮಾಂಸಗಳನ್ನು ನೀಡಲಾಗಿದೆ. ಇನ್ನೆಂತೆಂಥಾ ಕಾಯಿಲೆಗಳು ಬರಲಿವೆಯೋ? ಪಾರ್ಟಿಯಲ್ಲಿ ಕಾರ್ಯಕರ್ತರಿಗೆ ಮದ್ಯ ನೀಡಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ತನಿಖೆಯಾಗಬೇಕು’ ಎಂದಿದ್ದಾರೆ.
ಅಂದರೆ ಜೆಡಿಯು ನಾಯಕ ಆಯೋಜಿಸಿದ್ದ ಮಾಂಸ-ಅನ್ನ ಪಾರ್ಟಿಯಲ್ಲಿ ಬಿಕರಿಯಾಗಿದ್ದು ನಾಯಿ ಮಾಂಸ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹಾಗೇ, ಸಾವಿರಾರು ಜನ ಇದನ್ನು ಊಟ ಮಾಡಲೆಂದು ಬಂದಿದ್ದರು. ಈ ವೇಳೆ ಗಲಾಟೆ ನಡೆದಿದೆ ಎಂದೂ ತಿಳಿಸಿದ್ದಾರೆ. ಅಂದಹಾಗೇ, ಜೆಡಿಯು ನಾಯಕ ವಾಸ್ತವದಲ್ಲಿ ಮಟನ್ ರೈಸ್ ಪಾರ್ಟಿ ಕೊಟ್ಟಿದ್ದರು. ಆದರೆ ಅದರ ಬದಲು ನಾಯಿ ಮಾಂಸದ ಅನ್ನ ತಯಾರಿಸಲಾಗಿದೆ ಎಂಬುದು ಆರೋಪ.
ಇದನ್ನೂ ಓದಿ: RCP Singh: ಭ್ರಷ್ಟಾಚಾರ ಆರೋಪ ಹೊತ್ತು ಜೆಡಿಯು ತೊರೆದಿದ್ದ ಆರ್ಸಿಪಿ ಸಿಂಗ್ ಬಿಜೆಪಿ ಸೇರ್ಪಡೆ
ಈ ಮಾತುಗಳನ್ನಾಡಿದ ಬಿಜೆಪಿ ನಾಯಕ ವಿಜಯ್ ಕುಮಾರ್ ವಿರುದ್ಧ ಜೆಡಿಯು ವಕ್ತಾರ್ ಅಭಿಷೇಕ್ ಝಾ ಅವರು ಕಿಡಿಕಾರಿದ್ದಾರೆ. ವಿಜಯ್ಕುಮಾರ್ ಬೌದ್ಧಿಕ, ಮಾನಸಿಕ ದಿವಾಳಿತನಕ್ಕೆ ಅವರ ಈ ಮಾತುಗಳು ಸಾಕ್ಷಿ ಎಂದಿದ್ದಾರೆ. ಅಷ್ಟೇ ಅಲ್ಲ, ಅವರು ಈ ಹಿಂದೆ ಆಯೋಜಿಸಿದ್ದ ಔತಣ ಕೂಟದಲ್ಲಿ ಯಾವ ಮಾಂಸದ ಊಟ ನೀಡಲಾಗಿತ್ತು ಎಂಬುದನ್ನು ಬಹಿರಂಗಪಡಿಸಲಿ ಎಂದಿದ್ದಾರೆ.