Site icon Vistara News

Nitish Kumar | ಮಣಿಪುರದಲ್ಲಿ ಬಿಜೆಪಿ ಜತೆ ಜೆಡಿಯು ವಿಲೀನ, ನಿತೀಶ್‌ ಕುಮಾರ್‌ಗೆ ಭಾರಿ ಹಿನ್ನಡೆ

Nitish

ಇಂಫಾಲ: ಬಿಹಾರದಲ್ಲಿ ಬಿಜೆಪಿ ಜತೆಗಿನ ಹಲವು ವರ್ಷಗಳ ಮೈತ್ರಿ ತೊರೆದು, ಆರ್‌ಜೆಡಿ ಜತೆಗೂಡಿ ಸರಕಾರ ರಚಿಸಿರುವ ಜೆಡಿಯು ವರಿಷ್ಠರೂ ಆದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರಿಗೆ ಮಣಿಪುರದಲ್ಲಿ ಹಿನ್ನಡೆಯಾಗಿದೆ. ಮಣಿಪುರದಲ್ಲಿರುವ ಜೆಡಿಯುನ ಏಳು ಶಾಸಕರ ಪೈಕಿ ಐವರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗಾಗಿ, ಬಿಹಾರದಲ್ಲಿ ಬಿಜೆಪಿಗೆ ಸೆಡ್ಡೊಡೆದಿದ್ದ ನಿತೀಶ್‌ ಕುಮಾರ್‌ ಅವರಿಗೆ ಇದು ಮಣಿಪುರದಲ್ಲಿ ಉಂಟಾದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಾವುದೇ ಪಕ್ಷದ ಒಟ್ಟು ಶಾಸಕರ ಪೈಕಿ ಮೂರನೆ ಎರಡಷ್ಟು ಶಾಸಕರ ಬಲ ಇದ್ದರೆ ಬೇರೆ ಪಕ್ಷದ ಜತೆ ವಿಲೀನ ಮಾಡಿಕೊಳ್ಳಬಹುದಾದ ಕಾರಣ, ಆಡಳಿತಾರೂಢ ಪಕ್ಷವಾದ ಬಿಜೆಪಿ ಸೇರಿದ ಐವರೂ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯಿದೆಯು ಅನ್ವಯವಾಗುವುದಿಲ್ಲ.

ಕೆ.ಎಚ್.ಜಾಯ್‌ಕಿಶನ್‌, ಎನ್‌.ಸನಾತೆ, ಮೊಹಮ್ಮದ್‌ ಅಚಾಬ್‌ ಉದ್ದೀನ್‌, ಎಲ್‌.ಎಂ.ಖೌಟೆ ಹಾಗೂ ಥಂಗ್ಜಾಮ್‌ ಅರುಣ್‌ ಕುಮಾರ್‌ ಅವರು ಬಿಜೆಪಿ ಸೇರಿದ ಶಾಸಕರಾಗಿದ್ದಾರೆ. ಆದಾಗ್ಯೂ, ಏಕಾಏಕಿ ಬಿಜೆಪಿ ಸೇರ್ಪಡೆಯಾಗಲು ಕಾರಣವೇನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಮಂತ್ರಿಗಿರಿಯ ಆಸೆಗಾಗಿ ಬಿಜೆಪಿ ಸೇರ್ಪಡೆಯಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ | Floor Test | ಸಿಬಿಐ ದಾಳಿ, ಅಡೆತಡೆಯ ಮಧ್ಯೆ ವಿಶ್ವಾಸಮತ ಗೆದ್ದ ನಿತೀಶ್‌ ಕುಮಾರ್‌!

Exit mobile version