ಸೂರತ್: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆಯು ದೇಶವಾಸಿಗಳಲ್ಲಿ ಸಾಕಷ್ಟು ಹುರುಪು ತುಂಬಿದೆ ಎನ್ನುವುದಕ್ಕೆ ಸೂರತ್‌ನ ವಜ್ರ ವ್ಯಾಪಾರಿಯೇ ಸಾಕ್ಷಿ (Jeweler From Surat). 5000 ಅಮೆರಿಕನ್ ವಜ್ರಗಳನ್ನು (American Diamond) ಬಳಸಿ ರಾಮ ಮಂದಿರದ ನೆಕ್ಲೇಸ್ (Ram Temple Necklace) ಅನ್ನು ತಯಾರಿಸಿ ಗಮನ ಸೆಳೆದಿದ್ದಾರೆ ಸೂರತ್‌ನ ವಜ್ರ ವ್ಯಾಪಾರಿಯು. ಈ ವಜ್ರದ ಹಾರವನ್ನು ಅವರು ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಲಿದ್ದಾರೆ.
ರಸೇಶ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಡಿಯಾ ಮಾತನಾಡಿ, 5000 ಕ್ಕೂ ಹೆಚ್ಚು ಅಮೆರಿಕನ್ ವಜ್ರಗಳನ್ನು ಬಳಸಲಾಗಿರುವ ಈ ವಜ್ರದ ಹಾರಕ್ಕೆ ಇದು 2 ಕೆಜಿ ಬೆಳ್ಳಿಯಿಂದ ಮಾಡಲಾಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಈ ವಜ್ರದ ಹಾರವನ್ನು ನಾವು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಿಲ್ಲ. ನಾವು ಅದನ್ನು ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ನಾವೂ ರಾಮಮಂದಿರಕ್ಕೆ ಏನಾದರೂ ಉಡುಗೊರೆ ಕೊಡಬೇಕು ಎಂಬ ಉದ್ದೇಶದಿಂದ ಮಾಡಿದ್ದೇವೆ ಈ ವಿಶಿಷ್ಟ ಹಾರವನ್ನು ಮಾಡಿದ್ದೇವೆ ಎಂದು ತಿಳಿದ್ದಾರೆ. ರಾಮಾಯಣ ಪ್ರಮುಖ ಪಾತ್ರಗಳನ್ನು ಹಾರಕ್ಕೆ ಬಳಸಲಾಗಿರವ ಬೆಳ್ಳಿ ದಾರದಲ್ಲಿ ಕೆತ್ತನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
#WATCH | Surat, Gujarat: A diamond merchant from Surat has made a necklace on the theme of the Ram temple using 5000 American diamonds and 2 kg silver. 40 artisans completed the design in 35 days. pic.twitter.com/nFh3NZ5XxE
— ANI (@ANI) December 18, 2023
ರಾಮ ಮಂದಿರ ಉದ್ಘಾಟನೆಯ ಪ್ರಕ್ರಿಯೆಗಳು ಜನವರಿ 16ರಿಂದ ಜನವರಿ 22ರ ವರೆಗೆ ನಡೆಯಲಿವೆ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಜತೆಗೆ, ದೇಶದ ಕ್ರಿಕೆಟ್, ಸಿನಿಮಾ, ವ್ಯಾಪಾರ ಸೇರಿದಂತೆ ವಿವಿಧ ವಲಯದ ಗಣ್ಯರಿಗೆ ಆಹ್ವಾನ ಕೂಡ ನೀಡಲಾಗಿದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಮಾಡಿರುವ ಅಂದಾಜಿನ ಪ್ರಕಾರ, ಅಯೋಧ್ಯೆಗೆ ಸುಮಾರು 10 ಸಾವಿರದಿಂದ 15 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಅಮೆರಿಕದಲ್ಲಿ ವಾರ ಪೂರ್ತಿ ಸಂಭ್ರಮ
ಜನವರಿ 22ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ (ram mandir inauguration) ಹಿನ್ನೆಲೆಯಲ್ಲಿ ಉತ್ತರ ಅಮೆರಿಕದ (North America) ಎಲ್ಲ ದೇವಾಲಯಗಳಲ್ಲಿ (hindu Temples) ಒಂದು ವಾರ ಕಾಲ ಸಂಭ್ರಮಾಚರಣೆ ಮಾಡಲು ಅಮೆರಿಕದ ಹಿಂದುಗಳು ನಿರ್ಧರಿಸಿದ್ದಾರೆ ಎಂದು ಹಿಂದು ದೇಗುಲಗಳನ್ನು ಪ್ರತಿನಿಧಿಸುವ ಉನ್ನತ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶತಮಾನಗಳ ಕಾಯುವಿಕೆಯ ಬಳಿಕ ರಾಮ ಮಂದಿರ ಸಾಧ್ಯವಾಗುತ್ತಿದೆ. ಈ ಪ್ರಕ್ರಿಯೆಯೆ ಭಾಗವಾಗುತ್ತಿರುವ ನಾವು ಸುದೈವಿಗಳು ಮತ್ತು ಆಶೀರ್ವದಿತರು. ಅಮೆರಿಕ ಮತ್ತು ಕೆನಡಾದಲ್ಲಿರುವ ಪ್ರತಿಯೊಬ್ಬರಿಗೂ ಭಾವನಾತ್ಮವಕ ಕ್ಷಣಗಳು ಎದುರಾಗಿವೆ. ಭಕ್ತಿಯು ಪರಾಕಾಷ್ಠೆ ತಲುಪಿದ್ದು, ಪ್ರತಿಯೊಬ್ಬರು ಭಗವಾನ್ ಶ್ರೀ ರಾಮ ಮಂದಿರ ಉದ್ಘಾಟನೆಗಾಗಿ ಎದುರು ನೋಡುತ್ತಿದ್ದಾರೆ ಎಂದು ಅಮೆರಿಕದ ಹಿಂದೂ ದೇವಾಲಯಗಳ ಸಬಲೀಕರಣ ಸಮಿತಿಯಯ ತೇಜಲ್ ಶಾ ಹೇಳಿದ್ದಾರೆ. ಹಿಂದೂ ಮಂದಿರಗಳ ಸಬಲೀಕರಣ ಸಮಿತಿಯು ಅಮೆರಿಕದಲ್ಲಿ 1,100 ಹಿಂದೂ ಮಂದಿರಗಳನ್ನು ಒಳಗೊಂಡಿರುವ ಪ್ರಮುಖ ಸಂಸ್ಥೆಯಾಗಿದೆ.
ಉತ್ತರ ಅಮೆರಿಕದಲ್ಲಿರುವ ಪ್ರತಿ ಸಣ್ಣ ಮತ್ತು ದೊಡ್ಡ ಹಿಂದೂ ಮಂದಿಗಳಲ್ಲಿ ಒಂದು ವಾರ ಕಾಲ ಸಂಭ್ರಮಾಚಾರಣೆಯನ್ನು ಆಯೋಜಿಸಲಾಗುತ್ತಿದೆ. ಜನವರಿ 15ರಿಂದಲೇ ಪ್ರಾರಂಭವಾಗಲಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ವರೆಗೂ ಇದು ಮುಂದುವರಿಯಲಿದೆ ಎಂದು ತೇಜಲ್ ಶಾ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Ram Mandir: ರಾಮ ಮಂದಿರ ಉದ್ಘಾಟನೆಗೆ ಆಡ್ವಾಣಿ, ಜೋಶಿಗೆ ವಿಹಿಂಪ ಆಹ್ವಾನ