ನವದೆಹಲಿ: ಬುಧವಾರ ಸಾಯಂಕಾಲ ಜಾರ್ಖಂಡ್ ಮುಖ್ಯಮಂತ್ರಿ (Jharkhand Chief Minister) ಸ್ಥಾನಕ್ಕೆ ಹೇಮಂತ್ ಸೋರೆನ್ ರಾಜೀನಾಮೆ ನೀಡಿದ್ದಾರೆ(Hemant Soren Resigned). ಜಾರ್ಖಂಡ್‌ನ ಸಾರಿಗೆ ಸಚಿವ ಚಂಪಯಿ ಸೋರೆನ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ(Champai Soren new CM). ಈ ಮೊದಲು, ಹೇಮಂತ್ ಸೋರೆನ್ ಅವರ ಪತ್ನಿಯೇ ಸಿಎಂ ಆಗಲಿದ್ದಾರೆಂದು ಸುದ್ದಿಯಾಗಿತ್ತು. ಆದರೆ, ಈಗ ಬಂದಿರುವ ಮಾಹಿತಿಯ ಪ್ರಕಾರ, ಚಂಪಯಿ ಅವರು ಸಿಎಂ ಆಗಲಿದ್ದಾರೆ(Jharkhand Politics).
ಹೇಮಂತ್ ಸೋರೆನ್ ಮತ್ತು ಚಂಪಯಿ ಸೋರೆನ್ ಅವರು ಜಾರ್ಖಂಡ್ ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಹೇಮಂತ್ ಸೋರೆನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಪದವಿಯನ್ನು ತೊರೆದಿದ್ದಾರೆ. ಈ ಮಧ್ಯೆ, ಹೇಮಂತ್ ಸೋರೆನ್ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಜಾರಿ ನಿರ್ದೇಶನಾಲಯವು ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಇದು ಬ್ರೇಕಿಂಗ್ ಸುದ್ದಿಯಾಗಿದ್ದು, ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಿ