ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಜವಾಹರ ಲಾಲ್ ನೆಹರು (JNU) ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳು ಬರೆದಿರುವ ಪ್ರಕರಣವು ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಬ್ರಾಹ್ಮಣ ವಿರೋಧಿ ಬರಹಗಳಿಗೆ ಪ್ರತಿಯಾಗಿ, ಜಿಹಾದಿಗಳು ಹಾಗೂ ಕಮ್ಯುನಿಸ್ಟ್ ವಿರೋಧಿ (Jihadis Quit India) ಗೋಡೆ ಬರಹಗಳು ಕಾಣಿಸಿಕೊಂಡಿವೆ. ಇದರಿಂದಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಗೋಡೆ ಬರಹ ಪ್ರಕರಣವು ಇನ್ನಷ್ಟು ದೊಡ್ಡದಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಜೆಎನ್‌ಯು ಗೋಡೆಗಳ ಮೇಲೆ, ‘ಕಮ್ಯುನಿಸ್ಟರೇ ಭಾರತ ಬಿಟ್ಟು ತೊಲಗಿ’, ‘ಕಮ್ಯುನಿಸ್ಟರು=ಐಸಿಸ್’, ‘ಜಿಹಾದಿಗಳೇ ಭಾರತ ಬಿಟ್ಟು ಹೊರಡಿ’ ಎಂಬ ಘೋಷಣೆಗಳನ್ನು ಬರೆಯಲಾಗಿದೆ. ಗೋಡೆ ಮೇಲೆಯೇ ಹಿಂದು ರಕ್ಷಾ ದಳ ಸಂಘಟನೆಯ ಹೆಸರು ಕೂಡ ಇರುವುದರಿಂದ ಇದೇ ಸಂಘಟನೆಯ ಕಾರ್ಯಕರ್ತರು ಗೋಡೆಗಳ ಮೇಲೆ ಇಂತಹ ಘೋಷಣೆಗಳನ್ನು ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಮ್ಯುನಿಸ್ಟರೇ ವಿವಿ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆ ಬರೆದಿದ್ದಾರೆ ಎಂಬ ಶಂಕೆಯಿಂದ ಹಿಂದು ರಕ್ಷಾ ದಳ ಕೂಡ ಹೀಗೆ ಮಾಡಿದೆ ಎನ್ನಲಾಗಿದೆ.
ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ, ವಿವಿ ಆವರಣದಿಂದ ಹೊರಡಿ, ನಿಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಕೆಲ ದಿನದ ಹಿಂದೆ ಗೋಡೆಗಳ ಮೇಲೆ ಬರೆಯಲಾಗಿತ್ತು. ಪ್ರಕರಣವನ್ನು ಎಬಿವಿಪಿ ಸೇರಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಇದನ್ನು ಖಂಡಿಸಿದ್ದವು. ಹಾಗೆಯೇ, ವಿವಿ ಕುಲಪತಿಯು ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ | Anti Brahmin Slogans | ಜೆಎನ್‌ಯುನಲ್ಲಿ ಬ್ರಾಹ್ಮಣ ವಿರೋಧಿ ಬರಹ, ಆಕ್ರೋಶದ ಬೆನ್ನಲ್ಲೇ ತನಿಖೆಗೆ ಆದೇಶಿಸಿದ ಕುಲಪತಿ