Site icon Vistara News

Jio True 5G | ಗ್ವಾಲಿಯರ್, ಜಬಲ್ಪುರ್, ಲುಧಿಯಾನ, ಸಿಲಿಗುರಿ ಸೇರಿ 72 ನಗರಗಳಲ್ಲಿ ಈಗ ಜಿಯೋ 5ಜಿ ಸೇವೆ!

Jio True 5G @ Gwalior

ಮುಂಬೈ: ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆಯನ್ನು (Jio True 5G) ನಿಯಮಿತವಾಗಿ ವಿವಿಧ ನಗರಗಳಲ್ಲಿ ವಿಸ್ತರಿಸಲಾಗುತ್ತಿದೆ. ಇದೀಗ ಶುಕ್ರವಾರ ಕಂಪನಿಯು ತನ್ನ 5ಜಿ ಸೇವೆಯನ್ನು ಗ್ವಾಲಿಯರ್, ಜಬಲ್ಪುರ್, ಲುಧಿಯಾನ ಮತ್ತು ಸಿಲಿಗುರಿ ನರಗಳಲ್ಲೂ ಲಾಂಚ್ ಮಾಡಿದೆ. ಈ ನಗರಗಳೊಂದಿಗೆ ದೇಶದ ಒಟ್ಟು 72 ಸಿಟಿಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಈಗ ದೊರೆಯುತ್ತಿದೆ.

ಮಧ್ಯಪ್ರದೇಶದಲ್ಲಿ ಪ್ರವಾಸಿ ಭಾರತೀಯ ದಿವಸ್ ಮತ್ತು ಇಂದೋರ್‌ನಲ್ಲಿ ಇನ್ವೆಸ್ಟ್ ಎಂಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯಂತಹ ಕಾರ್ಯಕ್ರಮಗಳು ನಡೆಯಲಿವೆ. ಹಾಗಾಗಿ, ರಿಲಯನ್ಸ್ ಕಂಪನಿಯು, ಮಧ್ಯ ಪ್ರದೇಶದ ರಾಜಧಾನಿ, ಭೋಪಾಲ್ ಮತ್ತು ಇಂದೋರ್ ಸೇರಿದಂತೆ ಎಲ್ಲಾ ಪ್ರಮುಖ ದೊಡ್ಡ ನಗರಗಳಲ್ಲಿ 5G ಸೇವೆಗಳನ್ನು ನೀಡುತ್ತಿದೆ.

ಇನ್ನು ಪಂಜಾಬ್‌ ಲುಧಿಯಾನದಲ್ಲಿ 5ಜಿ ಸೇವೆ ಆರಂಭಿಸಿದ ಏಕೈಕ ಕಂಪನಿ ರಿಲಯನ್ಸ್ ಆಘಿದೆ. ಇದರೊಂದಿಗೆ ಪಂಜಾಬ್‌ನಲ್ಲಿ 5ಜಿ ಸೇವೆಯನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನು ಮಾಡಲಾಗುತ್ತದೆ. ಅದೇ ರೀತಿ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲೂ 5ಜಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ | Jio True 5G | ಮಹಾಕಾಲ ಮಹಾಲೋಕ, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಸೇವೆ

Exit mobile version