ಜೈಪುರ: ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಪಕ್ಷದ (Congress Party) ಹೀನಾಯ ಸೋಲಿನ ನಂತರ ಬದಲಾವಣೆಯ ಕಾಲ ಆರಂಭವಾಗಿತ್ತು. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಬದಲಿಗೆ ಜಿತು ಪಟ್ವಾರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಛತ್ತೀಸ್ ಗಢದಲ್ಲಿ ಚರಣ್ ದಾಸ್ ಮಹಂತ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಾಸ್ತವವಾಗಿ, ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯನ್ನು ಕಮಲ್ ನಾಥ್ ಅವರ ನಾಯಕತ್ವದಲ್ಲಿ ಎದುರಿಸಲಾಯಿತು. ಆದರೆ ಅದರಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದೆ. ಸೋಲಿನ ನಂತರ, ಕಮಲ್ ನಾಥ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನವನ್ನು ತೊರೆಯಬಹುದು ಎಂಬ ಊಹಾಪೋಹಗಳು ಇದ್ದವು. ಕಮಲ್ ನಾಥ್ ಅವರು ದೆಹಲಿಯಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿಯಾದರು. ಮೂಲಗಳ ಪ್ರಕಾರ, ಸಭೆಯ ನಂತರ, ಮಧ್ಯಪ್ರದೇಶದಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸುವಂತೆ ಹೈಕಮಾಂಡ್ ಕಮಲ್ ನಾಥ್ ಅವರಿಗೆ ಸೂಚನೆ ನೀಡಿತ್ತು.
कांग्रेस अध्यक्ष श्री @kharge द्वारा श्री @DrCharandas को छत्तीसगढ़ का CLP लीडर नियुक्त किया गया है।
— Congress (@INCIndia) December 16, 2023
आपको बधाई एवं भविष्य के लिए शुभकामनाएं। pic.twitter.com/UbQbhRx9F4
“ಕಾಂಗ್ರೆಸ್ ಅಧ್ಯಕ್ಷರು ಜಿತು ಪಟ್ವಾರಿ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ” ಎಂದು ಕಾಂಗ್ರೆಸ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ಗಮಿತ ಪಿಸಿಸಿ ಅಧ್ಯಕ್ಷ ಶ್ರೀ ಕಮಲ್ ನಾಥ್ ಅವರ ಕೊಡುಗೆಗಳನ್ನು ಪಕ್ಷ ಶ್ಲಾಘಿಸುತ್ತದೆ ಎಂದು ಅದು ಹೇಳಿದೆ.
कांग्रेस अध्यक्ष श्री @kharge द्वारा श्री @jitupatwari को मध्य प्रदेश कांग्रेस कमेटी का प्रदेश अध्यक्ष, श्री @UmangSinghar को CLP लीडर और श्री @HemantKatareMP
— Congress (@INCIndia) December 16, 2023
को डिप्टी लीडर नियुक्त किया गया है।
आपको नई जिम्मेदारी की बधाई एवं भविष्य के लिए शुभकामनाएं। pic.twitter.com/sF2A3ScvcK
ರೌ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಅವರು ಪಟ್ವಾರಿ ಅವರು ಮಧ್ಯಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಸೋತಿದ್ದರು.
ನಾನು ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ. ನನ್ನ ಕೊನೆಯ ಉಸಿರಿರುವವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಎಷ್ಟು ಹೆಚ್ಚಾಗುತ್ತದೆ ಎಂದು ನೋಡೋಣ ಕಮಲ್ ನಾಥ್ ನಿರ್ಧಾರದ ಬಳಿಕ ಹೇಳಿದ್ದಾರೆ.
2018ರಲ್ಲಿ ಕಮಲ್‌ನಾಥ್ ನೇಮಕ
2018 ರಲ್ಲಿ, ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಮುಖ್ಯಸ್ಥರನ್ನಾಗಿ ನೇಮಿಸಿದಾಗ, ಪಟ್ವಾರಿ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಏಪ್ರಿಲ್ 2020 ರಲ್ಲಿ, ಅವರನ್ನು ಕಾಂಗ್ರೆಸ್ನ ರಾಜ್ಯ ಮಾಧ್ಯಮ ಕೋಶದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದಾಗ್ಯೂ, 2023 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ಪಟ್ವಾರಿ ತಮ್ಮ ಭದ್ರಕೋಟೆಯನ್ನು ಬಿಜೆಪಿಯ ಮಧು ವರ್ಮಾ ವಿರುದ್ಧ ಕಳೆದುಕೊಂಡರು. ಅವರು ರೌ ಕ್ಷೇತ್ರದಲ್ಲಿ 35522 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಲೋಕ ಸಭೆ ಚುನಾವಣೆ ಖರ್ಚಿಗೆ ಕಾಂಗ್ರೆಸ್ನಿಂದ ಕ್ರೌಡ್ ಫಂಡಿಂಗ್
ನವದೆಹಲಿ: ಮುಂಬರುವ ಲೋಕಸಭಾ ಚುನಾವಣಾ ವೆಚ್ಚಕ್ಕಾಗಿ ಕ್ರೌಂಡ್ ಫಂಡಿಂಗ್ ಮಾಡಲು ಕಾಂಗ್ರೆಸ್ ಪಕ್ಷ (Congress Party) ನಿರ್ಧರಿಸಿದೆ. ಡಿಸೆಂಬರ್ 18ರಂದು ‘ದೇಶಕ್ಕಾಗಿ ದೇಣಿಗೆ’ ಎಂಬ ಹೆಸರಲ್ಲಿ ಆನ್ಲೈನ್ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಇದು 1920-21 ರಲ್ಲಿ ಮಹಾತ್ಮ ಗಾಂಧಿಯವರ ಐತಿಹಾಸಿಕ ‘ತಿಲಕ್ ಸ್ವರಾಜ್ ನಿಧಿ’ ಯಿಂದ ಸ್ಫೂರ್ತಿ ಪಡೆದುಕೊಂಡಿದೆ ಎಂಬುದಾಗಿಯೂ ಹೇಳಿದೆ. 138 ರೂ, 1380 ರೂ, 13,800 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡಬಹುದು ಎಂದು ತಿಳಿಸಿದೆ. ಕಾಂಗ್ರೆಸ್ನ 138ನೇ ಸಂಸ್ಥಾಪನಾ ದಿನಾಚರಣೆ ಡಿಸೆಂಬರ್ 18ರಂದು ನಡೆಯಲಿದ್ದು ಅಂದು ಅಭಿಯಾನಕ್ಕೆ ಚಾಲನೆ ಸಿಗಲಿದೆ ಹಾಗೂ ಮೊತ್ತವನ್ನು 138ರಿಂದ ಆರಂಭಗೊಳ್ಳುವಂತೆ ಮಾಡಲಾಗಿದೆ.
ಇದನ್ನೂ ಓದಿ : Rahul Gandhi : ರಾಹುಲ್ ಗಾಂಧಿಗೆ ಉತ್ತರ ಪ್ರದೇಶದ ಕೋರ್ಟ್ನಿಂದ ಸಮನ್ಸ್
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ಇಂದು ನಾವು ‘ದೇಶಕ್ಕಾಗಿ ದೇಣಿಗೆ ಎಂಬ ಆನ್ಲೈನ್ ಕ್ರೌಡ್ ಫಂಡಿಂಗ್ ಕಾರ್ಯಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಯೋಜನೆಯು ಮಹಾತ್ಮ ಗಾಂಧಿಯವರ ಐತಿಹಾಸಿಕ “ತಿಲಕ್ ಸ್ವರಾಜ್ ನಿಧಿ” ಯಿಂದ 1920-21 ರಲ್ಲಿ ಸ್ಫೂರ್ತಿ ಪಡೆದಿದೆ. ಸಮಾನ ಸಂಪನ್ಮೂಲ ವಿತರಣೆ ಮೂಲಕ ಸಮೃದ್ಧವಾದ ಭಾರತವನ್ನು ರಚಿಸುವ ಯೋಜನೆಯೊಂದಿಗೆ ನಮ್ಮ ಪಕ್ಷವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.
‘ಉತ್ತಮ ಭಾರತಕ್ಕಾಗಿ ದೇಣಿಗೆ’ ಎಂಬಯದಾಗಿ ಕ್ರೌಡ್ ಫಂಡಿಂಗ್ನ ಉದ್ಘಾಟನಾ ಅಭಿಯಾನ ನಡೆಯಲಿದೆ. ಇದು ಭಾರತೀಯ ರಾಷ್ಟ್ರೀಯ ಕಾಂಗ್ರಸ್ನ 138 ವರ್ಷಗಳ ಪ್ರಯಾಣವನ್ನು ಸ್ಮರಿಸುತ್ತದೆ ನಮ್ಮ ಇತಿಹಾಸವನ್ನು ಸ್ವೀಕರಿಸಿ, ಉತ್ತಮ ಭಾರತಕ್ಕಾಗಿ ಪಕ್ಷದ ನಿರಂತರ ಬದ್ಧತೆಯನ್ನು ಸಂಕೇತಿಸುವ 138 ಅಥವಾ 1380 ಅಥವಾ 13,800 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನ ಮಾಡಲು ನಾವು ಬೆಂಬಲಿಗರನ್ನು ಕೋರುತ್ತೇವೆ ಎಂದು ವೇಣುಗೋಪಾಲ್ ಮಾಹಿತಿ ಹೇಳಿದ್ದಾರೆ.
ಈ ಆನ್ಲೈನ್ ಕ್ರೌಡ್ಫಂಡಿಂಗ್ಗಾಗಿ ಎರಡು ಚಾನೆಲ್ಗಳನ್ನು ರಚಿಸಲಾಗಿದೆ. ಒಂದು ಅದಕ್ಕೆಂದೇ ಮೀಸಲಾದ ಆನ್ಲೈನ್ ಪೋರ್ಟಲ್ ಆಗಿದ್ದು donateinc.in ಮೂಲಕ ದೇಣಿಗೆ ನೀಡಬಹುದು. ಎರಡನೆಯದು ಅಧಿಕೃತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವೆಬ್ಸೈಟ್ www.inc.in ಮೂಲಕ ದೇಣಿಗೆ ನೀಡಬಹುದು ಎಂದು ಅವರು ಹೇಳಿದ್ದಾರೆ.