Site icon Vistara News

Hijbul Commander Amir Khan | ಕಾಶ್ಮೀರದಲ್ಲಿ ಉಗ್ರರಿಗಿಲ್ಲ ಉಳಿಗಾಲ, ಹಿಜ್ಬುಲ್‌ ಕಮಾಂಡರ್‌ ಮನೆ ಧ್ವಂಸ

Hizbul Mujahideen commander Amir Khan

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿರ್ನಾಮ ಮಾಡುವ ದಿಸೆಯಲ್ಲಿ ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಉಗ್ರರನ್ನು ಪಟ್ಟಿ ಮಾಡಿ ಹೊಡೆದುರುಳಿಸುವುದು, ಅವರ ಆಸ್ತಿ ಜಪ್ತಿ, ಹಣಕಾಸು ವಹಿವಾಟು ನಿರ್ಬಂಧ ಸೇರಿ ಹಲವು ಕ್ರಮಕ್ಕೆ ಸೇನೆ, ಪೊಲೀಸರು ಮುಂದಾಗಿದ್ದಾರೆ. ಹೀಗಿರುವಾಗಲೇ, ಜಮ್ಮು-ಕಾಶ್ಮೀರ ಆಡಳಿತವು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್‌ ಆಮೀರ್‌ ಖಾನ್‌ನ (Hijbul Commander Amir Khan) ಮನೆಯನ್ನು ಧ್ವಂಸಗೊಳಿಸಿದೆ.

ಅನಂತನಾಗ್‌ ಜಿಲ್ಲೆ ಪಹಲ್‌ಗಾಮ್‌ ಪ್ರದೇಶದ ಲೆವಾರ್‌ ಗ್ರಾಮದಲ್ಲಿದ್ದ ಒಂದು ಅಂತಸ್ತಿನ ಕಟ್ಟಡವನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಲಾಗಿದೆ. ಗುಲಾಮ್‌ ನಬಿ ಖಾನ್‌ ಅಲಿಯಾಸ್‌ ಆಮೀರ್‌ ಖಾನ್‌ ಉಗ್ರ ಸಂಘಟನೆಯ ಟಾಪ್‌ ಆಪರೇಷನಲ್‌ ಕಮಾಂಡರ್‌ ಆಗಿದ್ದಾನೆ. ಈತ 1990ರ ದಶಕದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಿಂದ ನುಸುಳಿ ಕಣಿವೆಗೆ ಬಂದಿದ್ದಾನೆ ಎಂದು ಸೇನೆ ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರ ಆಡಳಿತದ ಜಂಟಿ ಕಾರ್ಯಾಚರಣೆ ತಂಡವು ಅನಂತನಾಗ್‌ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ಉಪಸ್ಥಿತಿಯಲ್ಲಿ ಕಟ್ಟಡವನ್ನು ಕೆಡವಿದೆ. ಸರ್ಕಾರದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದ ಕಾರಣ ಅದನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Year End 2022 | ಕಾಶ್ಮೀರದಾದ್ಯಂತ 2022ರಲ್ಲಿ 172 ಉಗ್ರರ ಹತ್ಯೆ, ಪಂಡಿತರು ಸೇರಿ 29 ನಾಗರಿಕರ ಬಲಿ

Exit mobile version