Site icon Vistara News

JK House: ಮುಂಬೈನ ನಂ.1 ಎತ್ತರದ ಮನೆ ಬಗ್ಗೆ ಎಲ್ಲರಿಗೂ ಗೊತ್ತು! ಆದ್ರೆ 2ನೇ ಅತಿ ಎತ್ತರದ ಮನೆ ಗೊತ್ತಾ?

JK house

ನವದೆಹಲಿ: ಭಾರತೀಯ ಶ್ರೀಮಂತ ಉದ್ಯಮಿಗಳ ಪೈಕಿ ಮುಕೇಶ್ ಅಂಬಾನಿ (Mukesh Ambani) ಅವರು ವಾಸಿಸುವ ಮನೆ ಅತ್ಯಂತ ಎತ್ತರ (Tallest Building in Mumbai) ಹಾಗೂ ಐಷಾರಾಮಿ ಮನೆಯಾಗಿದೆ. ಅಂಬಾನಿ ಇರುವ ಮನೆ ಸಾಲಿನಲ್ಲಿ ಎರಡನೇ ಅತಿ ದೊಡ್ಡ ಹಾಗೂ ಐಷಾರಾಮಿ ಮನೆ ಉದ್ಯಮಿ ಗೌತಮ್ ಸಿಂಘಾನಿಯಾ (Gautam Singhania) ಅವರಿಗೆ ಸೇರಿದೆ. ಈ ಜೆಕೆ ಹೌಸ್ (JK House) ಮನೆಯ ಮೌಲ್ಯ ಅಂದಾಜು 6000 ಕೋಟಿ ರೂ. ಆಗಿದೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಸಿಂಘಾನಿಯಾ ಅವರು ಭಾರತದ ಶ್ರೀಮಂತ ಉದ್ಯಮಿಗಳು. ಸಿಂಘಾನಿಯಾ ಅವರು ಆಸ್ತಿ 12 ಸಾವಿರ ಕೋಟಿ ರೂ.ಗೂ ಅಧಿಕವಾಗಿದ್ದರೆ, ಅಂಬಾನಿ ಅವರ ಆಸ್ತಿ ಮೌಲ್ಯ 7.5 ಲಕ್ಷ ಕೋಟಿ ರೂ.!

ಮುಂಬೈನಲ್ಲಿರುವ ಗೌತಮ್ ಸಿಂಘಾನಿಯ ಅವರ ಮನೆಗೆ ಜೆಕೆ ಹೌಸ್ (JK House) ಎಂದು ಕರೆಯಲಾಗುತ್ತದೆ. ಮುಂಬೈನಲ್ಲಿ ಎರಡನೇ ಅತಿ ದೊಡ್ಡ ಮನೆ ಇದಾಗಿದೆ. ಈ ಮನೆ ಕೂಡ ಮುಕೇಶ್ ಅಂಬಾನಿಯವರ ಅಂಟಿಲಿಯಾ ಇರುವ ಮುಂಬೈನ “ಬಿಲಿಯನೇರ್ ರೋ” ಬೀದಿಯಲ್ಲಿದೆ. ಜೆಕೆ ಹೌಸ್ ಮನೆ ಮೌಲ್ಯ ಅಂದಾಜು 6,000 ಕೋಟಿ ರೂಪಾಯಿ ಆಗಿದೆ.

ರೇಮಂಡ್ಸ್ ಬಟ್ಟೆ ಅಂಗಡಿಗಳನ್ನು ನೀವು ಕಂಡಿರುತ್ತೀರಿ. ಅದೇ ರೇಮಂಡ್ಸ್ ಗ್ರೂಪ್ ಒಡೆತನವನ್ನು ಸಿಂಘಾನಿಯಾ ಫ್ಯಾಮಿಲಿ ಹೊಂದಿದೆ. ಜಗತ್ತಿನಾದ್ಯಂತ ಜವಳಿ ಮತ್ತು ಸೂಟ್ ನೂಲು ರಫ್ತು ಮಾಡುವ ಅತಿದೊಡ್ಡ ಪೂರೈಕಾ ಕಂಪನಿಯು ಇದಾಗಿದೆ. ಜೆಕೆ ಹೌಸ್‌ನಲ್ಲಿ ಮ್ಯೂಸಿಯಂ ಕೂಡ ಇದ್ದು, ರೇಮಂಡ್ಸ್ ಗ್ರೂಪ್‌ನ ಇತಿಹಾಸವನ್ನು ಅಲ್ಲಿ ಪ್ರತಿಬಿಂಬಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ವಸ್ತುಸಂಗ್ರಹಾಲಯವು ಬಟ್ಟೆಯ ಸ್ಕ್ರ್ಯಾಪ್‌ಗಳು, ಕುಟುಂಬದ ಆರಂಭಿಕ ದಿನಗಳ ಚಿತ್ರಗಳು, ಪ್ರಮಾಣಪತ್ರಗಳು ಮತ್ತು ಬಳಸಿದ ನಿಜವಾದ ಉಪಕರಣಗಳು ಸೇರಿದಂತೆ ಫ್ಯಾಬ್ರಿಕ್ ಉದ್ಯಮದಿಂದ ಕಲಾಕೃತಿಗಳನ್ನು ಸಂಗ್ರಹಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Mukesh Ambani | ಮುಕೇಶ್‌ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ, ಒಬ್ಬನ ಸೆರೆ

ಮಾಧ್ಯಮ ವರದಿಗಳ ಪ್ರಕಾರ, ವಸ್ತುಸಂಗ್ರಹಾಲಯವು ಜೇಡ್‌(ಹಸಿರು ಬಣ್ಣದ ರತ್ನ) ಸಾಕಷ್ಟು ಸಂಗ್ರಹವನ್ನು ಹೊಂದಿದೆ. ಜೆಕೆ ಹೌಸ್‌ನಲ್ಲಿ ಹಲವಾರು ಕುಟುಂಬ ಸದಸ್ಯರು ವಾಸಿಸುತ್ತಿದ್ದು, ಇದನ್ನು ಫ್ಲಾಟ್‌ಗಳಾಗಿ ವಿಂಗಡಿಸಲಾಗಿದೆ. ಹೆಲಿಪ್ಯಾಡ್, ಜಿಮ್, ಎರಡು ಪೂಲ್‌ಗಳು ಮತ್ತು ಇತರ ಸೌಕರ್ಯಗಳನ್ನು ಒಳಗೊಂಡಿದೆ. ಪ್ರತಿ ವಸತಿ ಘಟಕವು ಖಾಸಗಿ ತಾರಸಿ ಮತ್ತು ಉದ್ಯಾನವನ್ನು ಹೊಂದಿದೆ. ಭಾರತದಲ್ಲಿ ಜೆಕೆ ಹೌಸ್ ಎರಡನೇ ಅತಿದೊಡ್ಡ ಎತ್ತರದ ಖಾಸಗಿ ಕಟ್ಟಡವಾಗಿದೆ. ಈ ಕಟ್ಟಡವು ಸುಮಾರು 145 ಮೀಟರ್ ಎತ್ತರವಾಗಿದ್ದು, ಒಟ್ಟು 30 ಮಜಲುಗಳಿವೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version