ನವ ದೆಹೆಲಿ: ಇಲ್ಲಿನ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲದ ಕ್ಯಾಂಪಸ್ (JNU Campus ) ಪ್ರತಿಭಟನೆಗಳ ಕಾರಣಕ್ಕೆ ಖ್ಯಾತಿ ಹಾಗೂ ಕುಖ್ಯಾತಿ ಎರಡನ್ನೂ ಗಳಿಸಿಕೊಂಡಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಅಂತಾರಾಷ್ಟ್ರೀಯ ವಿಷಯಗಳು ಸೇರಿದಂತೆ ಎಲ್ಲ ವಿಷಯಗಳಿಗೂ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಾರೆ. ಒಂದು ರೀತಿಯಲ್ಲಿ ಎಲ್ಲ ಪ್ರತಿಭಟನೆಗಳಿಗೆ ಕಿಡಿ ಹಚ್ಚುವ ಕುಲುಮೆ ಇದ್ದಂತೆ. ಕೆಲವರು, ವಿದ್ಯಾರ್ಥಿಗಳ ಹೋರಾಟವನ್ನು ಸಮರ್ಪಕ ಹಾಗೂ ಪ್ರಜಾಪ್ರಭುತ್ವ ಎಂದರೆ, ಇನ್ನೂ ಕೆಲವರು ಇಲ್ಲಿನ ವಿದ್ಯಾರ್ಥಿ ಸಂಘಟನೆಗಳಲ್ಲಿ ದೇಶದ್ರೋಹಿಗಳು ಎಂದು ಜರೆಯುತ್ತಾರೆ. ಈ ವಾದ ವಿವಾದಗಳ ನಡುವೆ ಇಲ್ಲಿ ನಿತ್ಯವೂ ನಡೆಯುವ ಪ್ರತಿಭಟನೆಗಳಿಗೆ ಬ್ರೇಕ್ ಹಾಕಲೇಬೇಕು ಎಂದು ಒತ್ತಾಯಿಸಿದ್ದರು. ಆ ಕಾಲ ಕೂಡಿ ಬಂದಿದೆ. ವಿವಿ ಆಡಳಿತವು ಇಲ್ಲಿ ಪ್ರತಿಭಟನೆಗಳಿಗೆ ಸಂಪೂರ್ಣ ನಿಷೇಧ ಹೇರಿದೆ. ಒಂದು ವೇಳೆ ಪ್ರತಿಭಟನೆ ಮಾಡಿದರೆ 20 ಸಾವಿರ ರೂಪಾಯಿ ದಂಡ ಕಟ್ಟುವ ಮತ್ತು ಡಿಬಾರ್ ಆಗು ಕಠಿಣ ಶಿಕ್ಷೆ ವಿಧಿಸಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಕ್ಯಾಂಪಸ್ನಲ್ಲಿ ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ಗಮನಾರ್ಹವಾಗಿ ನಿರ್ಬಂಧಿಸುವ ಹೊಸ ನಿಯಮಗಳನ್ನು ವಿಶ್ವ ವಿದ್ಯಾಲಯ ವಿಧಿಸಿದೆ. ಜೆಎನ್ಯು ಕ್ಯಾಂಪಸ್ ಪ್ರತಿಭಟನೆಯನ್ನು ಉಲ್ಲಂಘಿಸುವ ವಿದ್ಯಾರ್ಥಿಗಳು, ನಿರ್ಬಂಧಗಳನ್ನು ಉಲ್ಲಂಘಿಸುವ ವಿದ್ಯಾರ್ಥಿಗಳು ಉಚ್ಛಾಟನೆ ನಿಯಮಗಳನ್ನು ಎದುರಿಸಬೇಕಾಗುತ್ತದೆ.
ಹೈಕೋರ್ಟ್ ಆದೇಶದ ಪ್ರಕಾರ ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಪ್ರೊಕ್ಟರ್ಗಳ ಕಚೇರಿಗಳನ್ನು ಹೊಂದಿರುವ ಆಡಳಿತಾತ್ಮಕ ಬ್ಲಾಕ್ಗಳ 100 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿತ್ತು. ಆದಾಗ್ಯೂ, ನವೆಂಬರ್ 2023 ರಲ್ಲಿ ಅನುಮೋದಿಸಲಾದ ಪರಿಷ್ಕೃತ ನಿಯಮದ ಪ್ರಕಾರ ಮುಖ್ಯ ಪ್ರೊಕ್ಟರ್ ಕಚೇರಿ (ಸಿಪಿಒ) ಕೈಪಿಡಿ, ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳು ಸೇರಿದಂತೆ ಶೈಕ್ಷಣಿಕ ಕಟ್ಟಡಗಳ 100 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಇದು ಆಡಳಿತಾತ್ಮಕ ಬ್ಲಾಕ್ ಗಳ ಸುತ್ತಲೂ ಈ ಹಿಂದೆ ವಿಧಿಸಲಾದ ನಿರ್ಬಂಧಗಳ ವಿಸ್ತರಣೆಯಾಗಿದೆ.
ದೇಶ ವಿರೋಧಿ ಕೃತ್ಯಕ್ಕೆ ಬ್ರೇಕ್
ನಿರ್ಬಂಧಗಳನ್ನು ಉಲ್ಲಂಘಿಸಿದಿರೆ 20,000 ರೂ.ಗಳ ದಂಡ ಅಥವಾ ಕ್ಯಾಂಪಸ್ನಿಂ ಹೊರಹಾಕಬಹುದು. ಇದಲ್ಲದೆ, “ರಾಷ್ಟ್ರ ವಿರೋಧಿ” ಅಥವಾ ಧರ್ಮ, ಜಾತಿ ಅಥವಾ ಸಮುದಾಯದ ವಿರುದ್ಧ ಅಸಹಿಷ್ಣುತೆಯನ್ನು ಪ್ರಚೋದಿಸುವ ಯಾವುದೇ ಚಟುವಟಿಕೆಗಳಿಗೆ 10,000 ರೂ.ಗಳ ದಂಡ ವಿಧಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಹೊಸ ನಿಯಮಗಳ ಕೈಪಿಡಿ ತಿಳಿಸಿದೆ.
ಇದನ್ನೂ ಓದಿ : Article 370: ಕಾಶ್ಮೀರ ಕುರಿತ ಸುಪ್ರೀಂ ತೀರ್ಪಿಗೆ ಪಾಕಿಸ್ತಾನದ ಅಧಿಕಪ್ರಸಂಗ ಹೇಳಿಕೆ!
ಅಕ್ಟೋನರ್ನಲ್ಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಕಟ್ಟಡದ ಗೋಡೆಯ ಮೇಲೆ “ರಾಷ್ಟ್ರ ವಿರೋಧಿ” ಘೋಷಣೆ ಬರೆಯಲಾಗಿತ್ತು. ನಂತರ ಮತ್ತು ಅದರ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವುದಾಗಿ ಆಡಳಿತವು ಘೋಷಿಸಿದ ನಂತರ ಹೊಸ ರೂಲ್ಸ್ಗಳು ಜಾರಿಗೆ ಬಂದಿದೆ.
ವಿದ್ಯಾರ್ಥಿ ಸಂಘದ ಆಕ್ಷೇಪ
ಜೆಎನ್ಯು ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಹೊಸ ನಿಯಮಗಳನ್ನು ಟೀಕಿಸಿದ್ದು, ಇದು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮತ್ತು ಕ್ಯಾಂಪಸ್ ಚಟುವಟಿಕೆಯನ್ನು ನಿರ್ಬಂಧಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ. ಪರಿಷ್ಕೃತ ಕೈಪಿಡಿಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ರಮವನ್ನು ಕಾಪಾಡಿಕೊಳ್ಳಲು ಮತ್ತು ಅಡೆತಡೆಗಳನ್ನು ತಡೆಗಟ್ಟಲು ಹೊಸ ನಿಯಮಗಳು ಅವಶ್ಯಕ ಎಂದು ವಿಶ್ವವಿದ್ಯಾಲಯದ ಆಡಳಿತವು ಸಮರ್ಥಿಸಿದೆ. ವಿದ್ಯಾರ್ಥಿಗಳ ಕಳವಳಗಳನ್ನು ವ್ಯಕ್ತಪಡಿಸಲು ಕ್ಯಾಂಪಸ್ ಒಳಗೆ ನಿಗದಿಪಡಿಸಿದ ಪ್ರತಿಭಟನಾ ಪ್ರದೇಶಗಳು ಸಾಕು ಎಂದು ಅವರು ವಾದಿಸಿದ್ದಾರೆ.