Site icon Vistara News

Joshimath Sinking | ಉತ್ತರಾಖಂಡದ ಜೋಶಿಮಠ ಪಟ್ಟಣ ಶೀಘ್ರವೇ ಕುಸಿಯಲಿದೆ, ಆತಂಕ ಹೆಚ್ಚಿಸಿದ ತಜ್ಞರ ಎಚ್ಚರಿಕೆ

Joshimath Is Sinking

ಡೆಹ್ರಾಡೂನ್‌: ಉತ್ತರಾಖಂಡದ ಜೋಶಿಮಠ ಪಟ್ಟಣ (Joshimath Sinking) ಮುಳುಗುತ್ತಿರುವಂತೆ ಭಾಸವಾಗುತ್ತಿದೆ ಎಂದು ಪಟ್ಟಣದ ಜನರೇ ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲೂ ಇದೇ ವರದಿಯಾಗುತ್ತಿದೆ. ದೇವಾಲಯಗಳು ಕುಸಿದಿವೆ. ಮನೆಗಳು ಶಿಥಿಲಗೊಂಡಿವೆ. ರಸ್ತೆಗಳು ಬಿರುಕುಬಿಟ್ಟಿವೆ. ನೂರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಇದರ ಬೆನ್ನಲ್ಲೇ, ಪಟ್ಟಣವು ಇನ್ನೂ ಹೆಚ್ಚು ದಿನ ಈ ಒತ್ತಡ ಸಹಿಸಿಕೊಳ್ಳುವುದಿಲ್ಲ ಎಂದು ಹಿರಿಯ ಭೂ ವಿಜ್ಞಾನಿ ಡಾ. ಕಾಲಚಂದ್‌ ಸೈನ್‌ ಎಚ್ಚರಿಕೆ ನೀಡಿದ್ದಾರೆ.

“ತಗ್ಗು ಪ್ರದೇಶದಲ್ಲಿ ಭೂಮಿಯ ಮುಳುಗುವಿಕೆ ಮೊದಲಿನಿಂದಲೇ ನಡೆಯುತ್ತಿದೆ. ಇದು ಈಗಲೂ ನಡೆಯುತ್ತಿದೆ. ಭೂಕುಸಿತದ ಅವಶೇಷಗಳ ಮೇಲೆ ಪಟ್ಟಣವನ್ನು ನಿರ್ಮಿಸಿದರೆ ಇಂತಹ ಪರಿಸ್ಥಿತಿಯೇ ಎದುರಾಗಲಿದೆ. ಪಟ್ಟಣವು ಭೂಕಂಪ ವಲಯ 5ರ ಹಂತ ತಲುಪಿದ ಕಾರಣ ಅಪಾಯ ಹೆಚ್ಚಿದೆ. ಜೋಶಿಮಠ ಪಟ್ಟಣವು ಇನ್ನೂ ಹೆಚ್ಚಿನ ಒತ್ತಡವನ್ನು, ಭಾರವನ್ನು ಸಹಿಸಿಕೊಳ್ಳುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

“ಜೋಶಿಮಠ ಪಟ್ಟಣವು 6 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿದೆ. ಇದರ ಮೇಲೆ ಮಾನವನ ಚಟುವಟಿಕೆಗಳು, ಕಟ್ಟಡ ನಿರ್ಮಾಣ ಮಾಡಿರುವುದರಿಂದ ಒತ್ತಡ ಅತಿಯಾಗಿದೆ. ಹಾಗಾಗಿ, ಪಟ್ಟಣದ ಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಬೇಕು” ಎಂದು ಸಲಹೆ ನೀಡಿದ್ದಾರೆ. ಡಾ.ಕಾಲಚಂದ್‌ ಸೈನ್‌ ಅವರು ಡೆಹ್ರಾಡೂನ್‌ ಮೂಲದ ವಾಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಹಿಮಾಲಯನ್‌ ಜಿಯೋಲಜಿಯ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ | Joshimath Sinking | ಉತ್ತರಾಖಂಡದ ಜೋಶಿಮಠ ಪಟ್ಟಣ ಮುಳುಗುತ್ತಿರುವುದೇಕೆ? 600 ಮನೆ ಬಿರುಕು ಬಿಟ್ಟಿರುವುದೇಕೆ?

Exit mobile version