Site icon Vistara News

Joshimath Sinking | ಕೇವಲ 12 ದಿನದಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ ಪಟ್ಟಣ, ಆತಂಕ ಹೆಚ್ಚಿಸಿದ ಸ್ಯಾಟಲೈಟ್‌ ಫೋಟೊಗಳು

Joshimath Sinking

ಡೆಹ್ರಾಡೂನ್‌/ನವದೆಹಲಿ: ಉತ್ತರಾಖಂಡದ ಮುಳುಗುತ್ತಿರುವ ಪಟ್ಟಣ (Joshimath Sinking) ಎಂದೇ ಖ್ಯಾತಿಯಾಗಿರುವ ಜೋಶಿಮಠ ಪಟ್ಟಣದ ಪರಿಸ್ಥಿತಿಯು ದಿನೇದಿನೆ ಬಿಗಡಾಯಿಸುತ್ತಿದೆ. ಊರು ತುಂಬ ಮನೆಗಳು ಹಾಗೂ ರಸ್ತೆಗಳು ಬಿರುಕು ಬಿಟ್ಟಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಹಾಗೆಯೇ, ಸ್ಥಳಾಂತರದ ಜತೆಗೆ ಪ್ರತಿ ಕುಟುಂಬಕ್ಕೆ 1.5 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಇದರ ಬೆನ್ನಲ್ಲೇ, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಜೋಶಿಮಠದ ಸ್ಯಾಟಲೈಟ್‌ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಕೇವಲ 12 ದಿನದಲ್ಲಿ ಪಟ್ಟಣವು 5.4 ಸೆಂಟಿಮೀಟರ್‌ ಕುಸಿದಿದೆ ಎಂದು ಮಾಹಿತಿ ನೀಡಿದೆ.

ಇಸ್ರೊದ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ ಜೋಶಿಮಠದ ಸ್ಯಾಟಲೈಟ್‌ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್‌ 27ರಿಂದ ಜನವರಿ 8ರ 12 ದಿನದಲ್ಲಿ ಪಟ್ಟಣವು 5.4 ಸೆಂಟಿಮೀಟರ್‌ ಮುಳುಗಿದೆ. ಪಟ್ಟಣವು ಕ್ಷಿಪ್ರವಾಗಿ ಕುಸಿಯುತ್ತಿದ್ದು, ಶೀಘ್ರದಲ್ಲಿಯೇ ಇಡೀ ಪಟ್ಟಣ ಮುಳುಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಪಟ್ಟಣದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ಜನವರಿ 2ರಂದು ಪಟ್ಟಣವು ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಮಣ್ಣಿನ ಕುಸಿತದ ತೀವ್ರತೆ ಹೆಚ್ಚಾಗುತ್ತಿದೆ ಎಂದು ಇಸ್ರೊ ಮಾಹಿತಿ ನೀಡಿದೆ. ಇದರಿಂದಾಗಿ ಇಡೀ ನಗರವೇ ಮುಳುಗುವ ಭೀತಿ ಎದುರಾಗಿದೆ. ಪಟ್ಟಣ ಮುಳುಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉನ್ನತ ಸಭೆ ನಡೆಸಿದೆ. ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರು ಕೂಡ ಪರಿಹಾರ ಕಾರ್ಯಕ್ಕೆ ಕ್ಷಿಪ್ರಗತಿ ನೀಡಿದ್ದಾರೆ.

ಇದನ್ನೂ ಓದಿ | Joshimath Sinking | ಜೋಶಿಮಠ ಪಟ್ಟಣದ ತುಂಬ ಬಿರುಕು, ಇಲ್ಲಿವೆ ಭೀಕರ ಕತೆ ಹೇಳುವ ʼಛಿದ್ರ ಚಿತ್ರʼಗಳು

Exit mobile version