Site icon Vistara News

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

Joshimath Teshil Now Jyotirmath

ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ಜೋಶಿಮಠ ತಾಲೂಕು (Joshimath tehsil) ಅನ್ನು ‘ಜ್ಯೋತಿರ್ಮಠ’ (Joshimath Teshil Now Jyotirmath) ಎಂಬ ಹೊಸ ಹೆಸರಿನಿಂದ ಕರೆಯಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಜ್ಯೋತಿರ್ಮಠವು ಜೋಶಿಮಠದ ಪ್ರಾಚೀನ ಹೆಸರಾಗಿದೆ.

ತಹಸಿಲ್‌ನ ಹೆಸರು ಬದಲಾವಣೆ ಕುರಿತು ಉತ್ತರಾಖಂಡ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರವು ಅನುಮೋದಿಸಿದೆ.

ಸ್ಥಳೀಯರಿಂದ ಸ್ವಾಗತ

ಜೋಶಿಮಠ ತಹಸಿಲ್ ಅನ್ನು ‘ಜ್ಯೋತಿರ್ಮಠ’ ಎಂದು ಹೆಸರು ಬದಲಾವಣೆ ಮಾಡಿರುವುದನ್ನು ಜೋಶಿಮಠದ ನಿವಾಸಿಗಳು ಸ್ವಾಗತಿಸಿದ್ದಾರೆ. ಯಾಕೆಂದರೆ ತಹಸಿಲ್ ಅನ್ನು ಅದರ ಮೂಲ ಹೆಸರಿಗೆ ಹಿಂತಿರುಗಿಸುವುದರಿಂದ ಅದರ ಪ್ರಾಚೀನ ಮೂಲವನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲದೆ ಅದರ ವಿಶಾಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುತ್ತದೆ ಎಂದಿದ್ದಾರೆ.

ಕಳೆದ ವರ್ಷ ಚಮೋಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಹಸಿಲ್ ಅನ್ನು ಮರುನಾಮಕರಣ ಮಾಡುವ ಸರ್ಕಾರದ ನಿರ್ಣಯದ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಮಾಡಿದರು. ಆ ಮೂಲಕ ಅದರ ಐತಿಹಾಸಿಕ ವೈಭವವನ್ನು ಮರುಸ್ಥಾಪನೆಗೆ ಯೋಚಿಸಿರುವುದಾಗಿ ಹೇಳಿದ್ದರು.

ಬಹುಕಾಲದ ಬೇಡಿಕೆ

ಜೋಶಿ ಮಠದ ಸ್ಥಳೀಯರು ಬಹಳ ಹಿಂದಿನಿಂದಲೂ ಹೆಸರು ಬದಲಾವಣೆಗೆ ಒತ್ತಾಯಿಸುತ್ತಿದ್ದರು. ಜನರ ಭಾವನೆಗಳಿಗೆ ಸ್ಪಂದಿಸಿ ಧಾಮಿ ಸರ್ಕಾರ ತಹಸಿಲ್ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬುಧವಾರ ಅನುಮೋದನೆ ಪಡೆದಿದೆ.

ಇದನ್ನೂ ಓದಿ: Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!


ಶಂಕರಾಚಾರ್ಯರಿಗೂ ಇದೆ ನಂಟು

8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದಿದ್ದರು ಎಂಬುದು ಸ್ಥಳೀಯರ ನಂಬಿಕೆ. ಅವರು ಅಮ6ರ ಕಲ್ಪ ವೃಕ್ಷದ ಕೆಳಗೆ ತಪಸ್ಸು ಕೈಗೊಂಡರು ಎಂದು ಹೇಳಲಾಗುತ್ತದೆ. ಇದರಿಂದಾಗಿ ದೈವಿಕ ಜ್ಞಾನೋದಯ ಮತ್ತು ಜ್ಞಾನವನ್ನು ಸಾಧಿಸಿದರು. ಈ ಸ್ಥಳವನ್ನು ಮೂಲತಃ ಜ್ಯೋತಿರ್ಮಠ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲಾನಂತರದಲ್ಲಿ ಇದು ಜೋಶಿಮಠ ಎಂಬ ಬೇರೆ ಹೆಸರಿನಲ್ಲಿ ಜನಪ್ರಿಯತೆಯನ್ನು ಗಳಿಸಿತು.

ಜ್ಯೋತಿರ್ಮಠವು 6,150 ಅಡಿ ಅಂದರೆ ಸರಿಸುಮಾರು 1,875 ಮೀಟರ್ ಎತ್ತರದಲ್ಲಿದೆ. ಹಲವಾರು ಹಿಮಾಲಯ ಪರ್ವತಾರೋಹಣ, ಚಾರಣ ಮತ್ತು ಬದರಿನಾಥದಂತಹ ಯಾತ್ರಾ ಕೇಂದ್ರಗಳಿಗೆ ಇದು ಹೆಬ್ಬಾಗಿಲಾಗಿದೆ.

Exit mobile version