Site icon Vistara News

Journalist Murder Case: ಪತ್ರಕರ್ತೆ ಸೌಮ್ಯ ವಿಶ್ವನಾಥ್ ಕೊಲೆ ಪ್ರಕರಣದ ಐವರು ಆರೋಪಿಗಳು ದೋಷಿ

Journalist Soumya Vishwanathan Murder case and 5 accused convicted

ನವದೆಹಲಿ: 2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣದ (Soumya Vishwanathan Murder case) ಐವರು ಆರೋಪಿಗಳು ದೋಷಿಗಳೆಂದು (5 accused convicted) ದಿಲ್ಲಿ ನ್ಯಾಯಾಲಯವು (Delhi Court) ಬುಧವಾರ ತೀರ್ಪು ನೀಡಿದೆ. ಅಲ್ಲದೇ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ನಿಬಂಧನೆಗಳ ಅಡಿಯಲ್ಲಿ ಆರೋಪಿಗಳು ದರೋಡೆ ಅಪರಾಧ ಎಸಗಿದ್ದಾರೆಂದು ಹೇಳಿದೆ. ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಕೊಲೆ ಮತ್ತು ದರೋಡೆ ದೋಷಿಗಳೆಂದು ಪರಿಗಣಿಸಿರುವ ನ್ಯಾಯಾಲಯವು, ಐದನೇ ಆರೋಪಿ ಅಜಯ್‌ ಸೇಥಿ ಉಳಿದವರಿಗೆ ಸಹಾಯ ಮಾಡಿದ ಅಪರಾಧ ಮಾಡಿದ್ದಾರೆಂದು ಹೇಳಿದೆ(journalist Murder Court).

ಹೆಡ್‌ಲೈನ್ಸ್ ಟುಡೆಯ 25 ವರ್ಷದ ಪತ್ರಕರ್ತೆ ಸೌಮ್ಯಾ, 2008ರ ಸೆಪ್ಟೆಂಬರ್ 30 ರಂದು ದೆಹಲಿಯ ವಸಂತ ವಿಹಾರ್‌ನಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದಾಗ ಹತ್ಯೆಗೀಡಾಗಿದ್ದರು. ಕಾರಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು ಮತ್ತು ತಲೆಗೆ ತೀವ್ರ ಗಾಯವಾಗಿತ್ತು.

ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೌಮ್ಯಾ ಅವರ ತಾಯಿ, ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ಆದರೆ ಈ ತೀರ್ಪು ಇತರರಿಗೆ ಎಚ್ಚರಿಕೆಯಾಗಲಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು ಎಂದು ಬಯಸುತ್ತಿದ್ದೇವೆ ಎಂದು ಹೇಳಿದರು.

ಸೌಮ್ಯ ಕೊಲೆಯಾದ ತಿಂಗಳ ಬಳಿಕ ಫರೀದಾಬಾದ್‌ನಲ್ಲಿ ಐಟಿ ಉದ್ಯೋಗಿ ಜಿಗೀಶಾ ಘೋಸ್ ಅವರ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡಾಗ ಪೊಲೀಸರಿಗೆ ಮೊದಲ ಬಾರಿಗೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣದ ಬಗ್ಗೆಯೂ ಕ್ಲೂ ದೊರೆಯಿತು.

ಈ ಸುದ್ದಿಯನ್ನೂ ಓದಿ: Journalist Killed: ತನ್ನ ವಿರುದ್ಧ ಲೇಖನ ಬರೆದ ಪತ್ರಕರ್ತನ ಮೇಲೆ ಎಸ್‌ಯುವಿ ಹರಿಸಿ ಕೊಂದ ಕಿರಾತಕ!

ಐಟಿ ಉದ್ಯೋಗಿದಯ ಕೊಲೆ ಪ್ರಕರಣ ಸಂಬಂಧ ಕೂಪರ್, ಶುಕ್ಲಾ ಮತ್ತು ಮಲಿಕ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣಕ್ಕೂ ಇವರಿಗೂ ನಂಟು ಇರುವುದು ಗೊತ್ತಾಯಿತು. ಬಳಿಕ ಇನ್ನಿಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿ ತನಿಖೆಯನ್ನು ಮುಂದುವರಿಸಿದರು.

2009ರಲ್ಲಿ ದಿಲ್ಲಿ ಕೋರ್ಟ್‌ಗೆ 620 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ದಿಲ್ಲಿ ಪೊಲೀಸ್, ಸೌಮ್ಯ ವಿಶ್ವನಾಥನ್ ಕೊಲೆ ಹಿಂದೆ ದರೋಡೆಯೇ ಪ್ರಮುಖ ಕಾರಣ ಎಂದು ಹೇಳಿತ್ತು. ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿತ್ತು. ಎಲ್ಲಾ ಐವರು ಆರೋಪಿಗಳ ವಿರುದ್ಧ ಮೋಕಾ ಕಾಯ್ದೆ ಬಳಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಆಗ ಹೇಳಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version