ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ತೆಲುಗು ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ಅವರು (Shah-NTR Meeting) ಭಾನುವಾರ ಸಂಜೆ ಭೇಟಿಯಾಗಲಿದ್ದು, ರಾಜಕೀಯ ಬೆಳವಣಿಗೆಗಳ ಕುರಿತು ಕೂತೂಹಲ ಮೂಡಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ತೆಲಂಗಾಣಕ್ಕೆ ಆಗಮಿಸಿದ್ದು, ಸಂಜೆ ಎನ್.ಟಿ.ಆರ್ ಜತೆ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶಂಶಾಬಾದ್ನಲ್ಲಿರುವ ನೋವೊಟೆಲ್ ಹೋಟೆಲ್ನಲ್ಲಿ ಇಬ್ಬರೂ ಊಟ ಮಾಡಲಿದ್ದಾರೆ. ೧೫ ನಿಮಿಷದ ಭೇಟಿ ನಿಗದಿಯಾಗಿದ್ದು, ಅಮಿತ್ ಶಾ ಅವರೇ ವೈಯಕ್ತಿಕವಾಗಿ ಕರೆ ಮಾಡಿ ಭೇಟಿಯಾಗುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಇತ್ತೀಚೆಗೆ ಬಿಡುಗಡೆಯಾದ ಆರ್ಆರ್ಆರ್ ಸಿನಿಮಾ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಭಿನಂದನೆ ತಿಳಿಸಲಿದ್ದಾರೆ ಎನ್ನಲಾಗಿದೆ.
ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗಾಗಿ, ಎನ್.ಟಿ.ಆರ್. ಹಾಗೂ ಅಮಿತ್ ಶಾ ಭೇಟಿ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ. ಆದಾಗ್ಯೂ, ಜೂನಿಯರ್ ಎನ್.ಟಿ.ಆರ್. ಅವರು ೨೦೦೯ರ ಬಳಿಕ ಯಾವುದೇ ರಾಜಕಾರಣಿಗಳ ಜತೆ ಕಾಣಿಸಿಕೊಂಡಿಲ್ಲ. ಈ ಕಾರಣದಿಂದಲೂ ಭೇಟಿ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ | RRR: ರೌದ್ರಂ.. ರಣಂ.. ರುಧಿರಂ.. ಒಂದು ಹೈ ವೊಲ್ಟೇಜ್ ಮೂವಿ