Site icon Vistara News

Judge Marriage | ಲಾಲುರನ್ನು ಜೈಲಿಗಟ್ಟಿದ್ದ ಜಡ್ಜ್‌ಗೆ ಮತ್ತೊಂದು ಮದ್ವೆ, ಇವರನ್ನು ವರಿಸಿದ ಆ ಮಹಿಳೆ ಯಾರು?

Judge

ನವ ದೆಹಲಿ: ಮೇವು ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸಿದ್ದ ಸಿಬಿಐ ವಿಶೇಷ ಕೋರ್ಟ್‌ನ ಮಾಜಿ ನ್ಯಾ. ಶಿವಪಾಲ್ ಸಿಂಗ್ ಅವರು ತಮ್ಮ 59ನೇ ವಯಸ್ಸಿನಲ್ಲಿ ಮತ್ತೊಂದು ಮದುವೆ(Judge Marriage)ಯಾಗಿದ್ದಾರೆ. ತಮಗಿಂತ 9 ವರ್ಷ ಚಿಕ್ಕವರಾದ ಹಾಗೂ ಜಾರ್ಖಂಡ್‌ನ ಸ್ಥಳೀಯ ಬಿಜೆಪಿಯ ಜನಪ್ರಿಯ ನಾಯಕಿ, ಲಾಯರ್ ನೂತನ್ ತಿವಾರಿ(50) ಅವರನ್ನು ವರಿಸಿದ್ದಾರೆ!

ಜಾರ್ಖಂಡ್‌ನ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ನೂತನ್ ತಿವಾರಿ ಅವರು ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಬಿಜೆಪಿಯ ಪ್ರಸಿದ್ಧ ನಾಯಕಿಯೂ ಹೌದು. ನ್ಯಾ. ಶಿವಪಾಲ್ ಸಿಂಗ್ ಅವರೂ ಈ ಗೊಡ್ಡಾ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ.

ನ್ಯಾ. ಶಿವಪಾಲ್ ಸಿಂಗ್ ಮತ್ತು ನ್ಯಾಯವಾದಿ ನೂತನ್ ತಿವಾರಿ ಅವರು ಕೆಲವು ದಿನಗಳ ಹಿಂದೆ ದುಮ್ಕಾ ಜಿಲ್ಲೆಯ ಪ್ರಸಿದ್ಧ ಬಸುಕಿನಾಥ ದೇಗುಲದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಜಡ್ಜ್ ಸಿಂಗ್ ಅವರ ಮೊದಲ ಪತ್ನಿ 2006ರಲ್ಲಿ ನಿಧನರಾಗಿದ್ದಾರೆ. ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆಯಿಂದಲೇ ಈ ವಿವಾಹ ನಡೆದಿದೆ ಎನ್ನಲಾಗಿದೆ.

ಮೂಲತಃ ಉತ್ತರ ಪ್ರದೇಶದವರಾದ ಜಡ್ಜ್ ಶಿವಪಾಲ್ ಸಿಂಗ್ ಅವರು ಜಾರ್ಖಂಡ್ ನ್ಯಾಯಾಂಗ ಸೇವೆಯಿಂದ ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಇಳಿಗಾಲದಲ್ಲಿ ಆಸರೆ ಇರಲೆಂದು ಜಡ್ಜ್ ಅವರು ಮತ್ತೊಂದು ಮದುವೆಯಾದಂತಿದೆ!

ಇದನ್ನೂ ಓದಿ | ಅನುಬ್ರತಾ ಮಂಡಲ್​​ ಕೇಸ್​ ವಿಚಾರಣೆ ನಡೆಸುತ್ತಿರುವ ಸಿಬಿಐ ಜಡ್ಜ್​​ಗೆ ಬೆದರಿಕೆ; ಎನ್​ಡಿಪಿಎಸ್ ಉಲ್ಲೇಖಿಸಿ ಎಚ್ಚರಿಕೆ

Exit mobile version