Site icon Vistara News

Chief Justice of India : ನ್ಯಾಯಾಂಗವು ತಂತ್ರಜ್ಞಾನದ ಮೂಲಕ ನ್ಯಾಯದಾನ ನೀಡಬೇಕು: ಸಿಜೆಐ

CJI Chandrachood

ನವ ದೆಹಲಿ: ನ್ಯಾಯಾಂಗವು ತಂತ್ರಜ್ಞಾನದ ನೆರವಿನ ಮೂಲಕ ಜನತೆಗೆ ನ್ಯಾಯದಾನವನ್ನು ಅಗತ್ಯ ಸೇವೆಯಂತೆ ಒದಗಿಸಬೇಕು ( Chief Justice of India) ಎಂದು ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್‌ ಶನಿವಾರ ಹೇಳಿದ್ದಾರೆ. ಸ್ಮಾರ್ಟ್‌ ಕೋರ್ಟ್‌ಗಳು ಮತ್ತು ಭವಿಷ್ಯದ ನ್ಯಾಯಾಂಗ ವಿಷಯವಾಗಿ ಮಾತನಾಡಿದ ಅವರು, ಆನ್‌ಲೈನ್‌ ಉಪಕ್ರಮಗಳು ಡೇಟಾ ಸುರಕ್ಷತೆಗೂ ಸಹಕಾರಿಯಾಗಿರುತ್ತದೆ ಎಂದರು.

ಕೇಂದ್ರ ಸರ್ಕಾರ ಇತ್ತೀಚೆಗೆ ಇ-ಕೋರ್ಟ್‌ಗಳ ಮೂರನೇ ಹಂತದ ಯೋಜನೆಗೆ ಚಾಲನೆ ನೀಡಿದೆ. ಈ ಉಪಕ್ರಮಕ್ಕೆ ಸಿಜೆಐ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ನ್ಯಾಯದಾನ ಇವತ್ತು ಅಗತ್ಯ ಸೇವೆಯೂ ಹೌದು. ಹೀಗಾಗಿ ಎಲ್ಲ ಜನತೆಗೂ ಅದು ಒದಗುವುದು ಮುಖ್ಯ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ನ್ಯಾಯಾಂಗದ ಮೂಲಭೂತ ಸುಧಾರಣೆಗೆ ಅವಕಾಶ ಸೃಷ್ಟಿಯಾಯಿತು. ಇದು ನ್ಯಾಯಾಂಗದ ದಕ್ಷತೆ ಹೆಚ್ಚಿಸಲಿದೆ. ಸಾಮಾಜಿಕ ನ್ಯಾಯದಾನ ಪ್ರಕ್ರಿಯೆಯು ಹೆಚ್ಚು ಜನರನ್ನು ತಲುಪಲಿದೆ ಎಂದು ಸಿಜೆಐ ಹೇಳಿದರು.

Exit mobile version