Site icon Vistara News

Swami Nityananda: ನಮ್ಮದು ಗಡಿಯೇ ಇಲ್ಲದ ದೇಶ, ನಾನು ಹಿಂದು ಧರ್ಮದ ಗುರು; ನಿತ್ಯಾನಂದ ಘೋಷಣೆ

Kailasa is borderless service-oriented nation: Says Nithyananda's press office

Kailasa is borderless service-oriented nation: Says Nithyananda's press office

ನವದೆಹಲಿ: ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ, ಅಲ್ಲಿಯೇ “ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ” ಎಂಬ ದೇಶ ನಿರ್ಮಿಸಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ (Swami Nityananda) ಕುರಿತು ಭಾರತ ಮಾತ್ರವಲ್ಲ, ಅಮೆರಿಕ, ಬ್ರಿಟನ್‌ನಲ್ಲೂ ಚರ್ಚೆಯಾಗುತ್ತಿದೆ. ಅಲ್ಲದೆ, ಈತನು ಅಮೆರಿಕದ 30 ನಗರಗಳಿಗೆ ಒಪ್ಪಂದದ ಹೆಸರಿನಲ್ಲಿ ವಂಚಿಸಿರುವ ಕುರಿತು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಹಾಗೆಯೇ, ಈತನ ದೇಶವು ಕಾಲ್ಪನಿಕ ಸೃಷ್ಟಿ ಎಂದೂ ಕರೆದಿವೆ. ಇದರ ಬೆನ್ನಲ್ಲೇ, “”ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸವು ಗಡಿಗಳೇ ಇಲ್ಲದ, ಸೇವೆಯೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡಿರುವ ದೇಶ. ನಾನು ಹಿಂದು ಧರ್ಮದ ಪ್ರಧಾನ ಗುರು” ಎಂಬುದಾಗಿ ಹೇಳಿದ್ದಾನೆ.

ನಿತ್ಯಾನಂದನ ದೇಶದ ಕುರಿತು ಟ್ವಿಟರ್‌ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ನೋಂದಾಯಿತ ಪತ್ರಕರ್ತರ ಪ್ರಶ್ನೆಗಳಿಗೆನಿತ್ಯಾನಂದನ ಮಾಧ್ಯಮ ಕಾರ್ಯದರ್ಶಿಯು ಪ್ರತಿಕ್ರಿಯಿಸಿದ್ದಾರೆ. “ಕೈಲಾಸ ದೇಶವು ಜಗತ್ತಿನ ಹಲವು ಎನ್‌ಜಿಒಗಳು, ದೇವಾಲಯಗಳು, ಸಂಸ್ಥೆಗಳಿಂದ ನಡೆಯುತ್ತಿದೆ. ಹಾಗಾಗಿ, ಇದಕ್ಕೆ ಗಡಿ ಎಂಬುದಿಲ್ಲ. ಸೇವೆಯನ್ನೇ ಮನೋಧರ್ಮವನ್ನಾಗಿ ಇಟ್ಟುಕೊಂಡು ನಿರ್ಮಿಸಿರುವ ದೇಶ ಇದಾಗಿದೆ” ಎಂದು ತಿಳಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

ಕೈಲಾಸ ದೇಶದ ಜನಸಂಖ್ಯೆ ಎಷ್ಟು?

ನಿತ್ಯಾನಂದನ ದೇಶದ ಲೊಕೇಷನ್‌, ಜನಸಂಖ್ಯೆ ಕುರಿತ ಕೇಳಿದ ಪ್ರಶ್ನೆಗೆ ಕಾರ್ಯದರ್ಶಿ ಉತ್ತರಿಸಿದರು. “ನಾವು ಪುರಾತನ ಹಿಂದು ನಾಗರಿಕತೆಯ ಪುನರುಜ್ಜೀವನದ ಕಾರ್ಯದಲ್ಲಿ ತೊಡಗಿದ್ದೇವೆ. ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಹಲವಾರು ಎನ್‌ಜಿಒಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಜಗತ್ತಿನ ಎನ್‌ಜಿಒಗಳು ನಮ್ಮ ದೇಶದ ಭಾಗವಾಗಿವೆ. ಹಾಗಾಗಿ, ನಮ್ಮ ದೇಶಕ್ಕೆ ಗಡಿಯೇ ಇಲ್ಲ” ಹೇಳಿದ್ದಾರೆ.

ಹಿಂದು ಧರ್ಮದ ಪ್ರಧಾನ ಗುರು

ನಿತ್ಯಾನಂದ ಯಾರು ಎಂದು ಕೇಳಿದ ಪ್ರಶ್ನೆಗೆ, “ನಿತ್ಯಾನಂದ ಪರಮಶಿವಂ ಅವರು ಕೈಲಾಸವನ್ನು ಪುನರುಜ್ಜೀವನಗೊಳಿಸಿದ, ಹಿಂದು ಧರ್ಮದ ಪ್ರಧಾನ ಗುರು ಆಗಿದ್ದಾರೆ. ಅವರು ಹಿಂದು ಧರ್ಮದ ಆಚಾರ-ವಿಚಾರಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವ, ಹಿಂದು ಧರ್ಮದ ಗ್ರಂಥಗಳಲ್ಲಿ ಉಲ್ಲೇಖಿಸುವ ಅಂಶಗಳನ್ನು ಆಧರಿಸಿಯೇ ಬೋಧನೆ ಮಾಡುವ ಧರ್ಮಗುರು ಆಗಿದ್ದಾರೆ” ಎಂದು ಉತ್ತರಿಸಲಾಗಿದೆ.

ಭಾರತದಿಂದ ಓಡಿಬಂದಿದ್ದು ನಿಜವೇ?

ಭಾರತದಲ್ಲಿ ಅಪರಾಧ ಎಸಗಿ, ಪರಾರಿಯಾಗಿರುವ ಕುರಿತ ಆರೋಪ ನಿಜವೇ ಎಂಬ ಪ್ರಶ್ನೆಗೂ ಉತ್ತರಿಸಲಾಗಿದೆ. “ನಿತ್ಯಾನಂದ ಅವರು ಯಾವುದೇ ಅಪರಾಧ ಎಸಗಿಲ್ಲ. ಅವರು ನಿರಪರಾಧಿ ಎಂಬ ಕುರಿತು ಜಗತ್ತಿನ ಸಂಸ್ಥೆಗಳೇ ಹೇಳಿವೆ” ಎಂಬುದಾಗಿ ತಿಳಿಸಲಾಗಿದೆ. ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದನು ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿದ್ದು, 2019ರಲ್ಲಿಯೇ ಭಾರತದಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: Swami Nithyananda: ʻಸಿಸ್ಟರ್‌ ಸಿಟಿʼ ಎಂದು ಅಮೆರಿಕದ 30 ನಗರಗಳನ್ನು ವಂಚಿಸಿದ ಸ್ವಾಮಿ ನಿತ್ಯಾನಂದ!

Exit mobile version