Site icon Vistara News

Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ

Kangana Ranaut

Kangana Ranaut: "Why Can't Sex Stay In Bedrooms"; Kangana Ranaut On Olympics Opening Act

ನವದೆಹಲಿ: 2 ದಿನಗಳ ಹಿಂದಷ್ಟೇ ಪ್ಯಾರಿಸ್​ನಲ್ಲಿ 33ನೇ ಒಲಿಂಪಿಕ್ಸ್(Olympics Opening)​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಆದರೆ ಉದ್ಘಾಟನಾ ಸಮಾರಂಭದಲ್ಲಿ ಲಿಯೊನಾರ್ಡೊ ಡಾ ವಿನ್ಸಿಯವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್‌ನ ಸ್ಪಷ್ಟ ವಿಡಂಬನೆಯನ್ನು ಪ್ರದರ್ಶಿಸುವ ಡ್ರ್ಯಾಗ್ ಕ್ವೀನ್‌ಗಳ ಸನ್ನಿವೇಶದ ಕುರಿತು ಬಿಜೆಪಿ ಸಂಸದೆ(BJP MP Kangana Ranaut ) ಕಂಗನಾ ರಣಾವತ್(Kangana Ranaut) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್ ಆಯೋಜಕರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಮೂವರು ಪ್ರಸಿದ್ಧ ಡ್ರ್ಯಾಗ್ ರೇಸ್ ಕ್ವೀನ್ಸ್ ಸೇರಿದಂತೆ 18 ಮಂದಿಯನ್ನು ಒಳಗೊಂಡ ಡ್ರ್ಯಾಗ್ ಆಕ್ಟ್‌ ಒಂದನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಗಿತ್ತು. ಈ ಬಗ್ಗೆ ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಿ ಲಾಸ್ಟ್ ಸಪ್ಪರ್‌ನ ಹೈಪರ್-ಸೆ *ಕ್ಷುವಲೈಸ್ಡ್, ಧರ್ಮನಿಂದೆಯ ಚಿತ್ರಣ” ಎಂದು ಟೀಕಿಸಿದ್ದಾರೆ. “ನೀಲಿ ಬಣ್ಣ ಬಳಿದ ಬೆತ್ತಲೆ ಮನುಷ್ಯನನ್ನು ಯೇಸುವಿನಂತೆ ತೋರಿಸಿ ಕ್ರಿಶ್ಚಿಯನ್ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಎಡಪಂಥೀಯರು ಒಲಂಪಿಕ್ಸ್ ಕ್ರೀಡೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ಇದು ನಾಚಿಕೆಗೇಡು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

“ನಾನು ಸಲಿಂಗಕಾಮಕ್ಕೆ ವಿರುದ್ಧವಾಗಿಲ್ಲ. ಆದರೆ ಒಲಿಂಪಿಕ್ಸ್ ಯಾವುದೇ ಲೈಂಗಿಕತೆಗೆ ಹೇಗೆ ಸಂಬಂಧಿಸಿದೆ ಎಂಬುದು ನನಗೆ ತಿಳಿದಿದಿಲ್ಲ?? ಲೈಂಗಿಕತೆಯ ಮೂಲಕ ಮಾನವ ಶ್ರೇಷ್ಠತೆಯನ್ನು ಹೇಳಿಕೊಳ್ಳಲು ಎಲ್ಲಾ ರಾಷ್ಟ್ರಗಳ ಆಟಗಳು, ಕ್ರೀಡೆಗಳ ಭಾಗವಹಿಸುವಿಕೆ ಏಕೆ ?? ನಮ್ಮ ಮಲಗುವ ಕೋಣೆಗಳಲ್ಲಿ ಲೈಂಗಿಕತೆಯು ಏಕೆ ಉಳಿಯಬಾರದು? ಇದು ರಾಷ್ಟ್ರೀಯ ಗುರುತಾಗಿ ಏಕೆ ಇರಬೇಕು?.. ಇದು ವಿಚಿತ್ರ !!” ಎಂದು ಬರೆದಿದ್ದಾರೆ. ‘ಎಕ್ಸ್’ ಮಾಲಕ ಎಲಾನ್ ಮುಸ್ಕ್ ಅವರು ಕೂಡ ‘ಇದು ಕ್ರೈಸ್ತ ಧರ್ಮಕ್ಕೆ ಅಗೌರವ’ ಎಂದು ಪೋಸ್ಟ್ ಮಾಡಿ ಆಯೋಜಕರ ಈ ನಡೆಯನ್ನು ಖಂಡಿಸಿದ್ದಾರೆ.


ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದರು

“ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

Exit mobile version