Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ - Vistara News

ದೇಶ

Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ

Kangana Ranaut: ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದರು.

VISTARANEWS.COM


on

Kangana Ranaut
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: 2 ದಿನಗಳ ಹಿಂದಷ್ಟೇ ಪ್ಯಾರಿಸ್​ನಲ್ಲಿ 33ನೇ ಒಲಿಂಪಿಕ್ಸ್(Olympics Opening)​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಆದರೆ ಉದ್ಘಾಟನಾ ಸಮಾರಂಭದಲ್ಲಿ ಲಿಯೊನಾರ್ಡೊ ಡಾ ವಿನ್ಸಿಯವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್‌ನ ಸ್ಪಷ್ಟ ವಿಡಂಬನೆಯನ್ನು ಪ್ರದರ್ಶಿಸುವ ಡ್ರ್ಯಾಗ್ ಕ್ವೀನ್‌ಗಳ ಸನ್ನಿವೇಶದ ಕುರಿತು ಬಿಜೆಪಿ ಸಂಸದೆ(BJP MP Kangana Ranaut ) ಕಂಗನಾ ರಣಾವತ್(Kangana Ranaut) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್ ಆಯೋಜಕರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಮೂವರು ಪ್ರಸಿದ್ಧ ಡ್ರ್ಯಾಗ್ ರೇಸ್ ಕ್ವೀನ್ಸ್ ಸೇರಿದಂತೆ 18 ಮಂದಿಯನ್ನು ಒಳಗೊಂಡ ಡ್ರ್ಯಾಗ್ ಆಕ್ಟ್‌ ಒಂದನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಗಿತ್ತು. ಈ ಬಗ್ಗೆ ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಿ ಲಾಸ್ಟ್ ಸಪ್ಪರ್‌ನ ಹೈಪರ್-ಸೆ *ಕ್ಷುವಲೈಸ್ಡ್, ಧರ್ಮನಿಂದೆಯ ಚಿತ್ರಣ” ಎಂದು ಟೀಕಿಸಿದ್ದಾರೆ. “ನೀಲಿ ಬಣ್ಣ ಬಳಿದ ಬೆತ್ತಲೆ ಮನುಷ್ಯನನ್ನು ಯೇಸುವಿನಂತೆ ತೋರಿಸಿ ಕ್ರಿಶ್ಚಿಯನ್ ಧರ್ಮವನ್ನು ಅಪಹಾಸ್ಯ ಮಾಡಿದ್ದಾರೆ. ಎಡಪಂಥೀಯರು ಒಲಂಪಿಕ್ಸ್ ಕ್ರೀಡೆಯನ್ನು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ಇದು ನಾಚಿಕೆಗೇಡು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

“ನಾನು ಸಲಿಂಗಕಾಮಕ್ಕೆ ವಿರುದ್ಧವಾಗಿಲ್ಲ. ಆದರೆ ಒಲಿಂಪಿಕ್ಸ್ ಯಾವುದೇ ಲೈಂಗಿಕತೆಗೆ ಹೇಗೆ ಸಂಬಂಧಿಸಿದೆ ಎಂಬುದು ನನಗೆ ತಿಳಿದಿದಿಲ್ಲ?? ಲೈಂಗಿಕತೆಯ ಮೂಲಕ ಮಾನವ ಶ್ರೇಷ್ಠತೆಯನ್ನು ಹೇಳಿಕೊಳ್ಳಲು ಎಲ್ಲಾ ರಾಷ್ಟ್ರಗಳ ಆಟಗಳು, ಕ್ರೀಡೆಗಳ ಭಾಗವಹಿಸುವಿಕೆ ಏಕೆ ?? ನಮ್ಮ ಮಲಗುವ ಕೋಣೆಗಳಲ್ಲಿ ಲೈಂಗಿಕತೆಯು ಏಕೆ ಉಳಿಯಬಾರದು? ಇದು ರಾಷ್ಟ್ರೀಯ ಗುರುತಾಗಿ ಏಕೆ ಇರಬೇಕು?.. ಇದು ವಿಚಿತ್ರ !!” ಎಂದು ಬರೆದಿದ್ದಾರೆ. ‘ಎಕ್ಸ್’ ಮಾಲಕ ಎಲಾನ್ ಮುಸ್ಕ್ ಅವರು ಕೂಡ ‘ಇದು ಕ್ರೈಸ್ತ ಧರ್ಮಕ್ಕೆ ಅಗೌರವ’ ಎಂದು ಪೋಸ್ಟ್ ಮಾಡಿ ಆಯೋಜಕರ ಈ ನಡೆಯನ್ನು ಖಂಡಿಸಿದ್ದಾರೆ.


ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದರು

“ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ರೈಲ್ವೇ ಪೊಲೀಸ್‌ ಸಿಬ್ಬಂದಿಯ ಹೊಡೆತಕ್ಕೆ ಯುವಕನ ಕರುಳೇ ಹೊರಬಂತು! ಶಾಕಿಂಗ್‌ Video ಇಲ್ಲಿದೆ

Viral News: ಬಿಹಾರದ ಸೀತಮರ್ಹಿ ಜಿಲ್ಲೆಯ ಪುಪ್ರಿ ಪ್ರದೇಶದ ಜನಕ್‌ಪುರ ರೋಡ್ ರೈಲ್ವೆ ನಿಲ್ದಾಣದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕರ್ಮಭೂಮಿ ರೈಲಿನಲ್ಲಿದ್ದ ಯುವಕನ ಮೇಲೆ ಜಿಆರ್‌ಪಿ ಸಿಬ್ಬಂದಿ ಹಲ್ಲೆ ನಡೆಸಿದ್ದು, ಕರುಳು ಕಿತ್ತು ಬಂದಿದೆ. ಗಾಯಗೊಂಡ ವ್ಯಕ್ತಿಯನ್ನು ಗಧಾ ಗ್ರಾಮದ ಮೊಹಮ್ಮದ್ ಗುಲಾಬ್ ಅವರ ಪುತ್ರ 25 ವರ್ಷದ ಮೊಹಮ್ಮದ್ ಫುರ್ಕಾನ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಮೊಹಮ್ಮದ್ ಫುರ್ಕಾನ್‌ನನ್ನು ಪುಪ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

VISTARANEWS.COM


on

Viral News
Koo

ಪಾಟ್ನಾ: ಬಿಹಾರದ ಸೀತಮರ್ಹಿ ಜಿಲ್ಲೆಯ ಪುಪ್ರಿ ಪ್ರದೇಶದ ಜನಕ್‌ಪುರ ರೋಡ್ ರೈಲ್ವೆ ನಿಲ್ದಾಣ (Janakpur Road railway station)ದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕರ್ಮಭೂಮಿ ರೈಲಿನಲ್ಲಿದ್ದ ಯುವಕನ ಮೇಲೆ ಜಿಆರ್‌ಪಿ (Government Railway Police) ಸಿಬ್ಬಂದಿ ಹಲ್ಲೆ ನಡೆಸಿದ್ದು, ಕರುಳು ಕಿತ್ತು ಬಂದಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ವಿಡಿಯೊ ಸದ್ಯ ವೈರಲ್‌ ಆಗಿದ್ದು, ಜಿಆರ್‌ಪಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ (Viral News).

ಗಾಯಗೊಂಡ ವ್ಯಕ್ತಿಯನ್ನು ಗಧಾ ಗ್ರಾಮದ ಮೊಹಮ್ಮದ್ ಗುಲಾಬ್ ಅವರ ಪುತ್ರ 25 ವರ್ಷದ ಮೊಹಮ್ಮದ್ ಫುರ್ಕಾನ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಮೊಹಮ್ಮದ್ ಫುರ್ಕಾನ್‌ನನ್ನು ಪುಪ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡ ಫುರ್ಕಾನ್ ಅನ್ನು ಹೊತ್ತೊಯ್ಯುತ್ತಿರುವುದು ಮತ್ತು ಜನರ ಗುಂಪು ಅವರನ್ನು ಹಿಂಬಾಲಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಜತೆಗೆ “ಪೊಲೀಸರು ಅವನನ್ನು ಎಷ್ಟು ಕೆಟ್ಟದಾಗಿ ಥಳಿಸಿದ್ದಾರೆ ಎನ್ನುವುದನ್ನು ನೋಡಿ” ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ಕೇಳಬಹುದು. ಮೊಹಮ್ಮದ್ ಫುರ್ಕಾನ್‌ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮುಂಬೈಗೆ ಹೋಗುತ್ತಿದ್ದ ತನ್ನ ಚಿಕ್ಕಮ್ಮನನ್ನು ಬೀಳ್ಕೊಡಲು ಆಗಮಿಸಿದ್ದ ವೇಳೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಘಟನೆ ವಿವರ

ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಫುರ್ಕಾನ್‌ನ ಹೊಟ್ಟೆಯ ಮೇಲೆ ಜಿಆರ್‌ಪಿ ಸಿಬ್ಬಂದಿ ಕೋಲಿನಿಂದ ಹಲವು ಬಾರಿ ಹೊಡೆದಿದ್ದಾನೆ. ಇದರಿಂದಾಗಿ ಹೊಟ್ಟೆ ಒಡೆದು ಕರುಳು ಹೊರಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ʼʼನನ್ನ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ನಡೆದಿದೆ. ನೋವಾಗುತ್ತಿದೆ ಎಂದು ಪದೇ ಪದೆ ಹೇಳುತ್ತಿದ್ದರೂ ಜಿಆರ್‌ಪಿ ಸಿಬ್ಬಂದಿ ಕೋಲಿನಿಂದ ಹೊಡೆಯುತ್ತಲೇ ಇದ್ದರುʼʼ ಎಂದು ಮೊಹಮ್ಮದ್ ಫುರ್ಕಾನ್‌ ತಿಳಿಸಿದ್ದಾನೆ.

ಹೊರಬಂದ ಕರುಳು

ಫುರ್ಕಾನ್‌ ಸುಮಾರು ಎರಡು ವರ್ಷಗಳ ಹಿಂದೆ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಶಸ್ತ್ರಚಿಕಿತ್ಸೆಗೊಳಗಾದ ಭಾಗದ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತನ ಹೊಟ್ಟೆ ಎಡಭಾಗ ತೆರೆದುಕೊಂಡಿತು ಮತ್ತು ಅದರಿಂದ ಕರುಳು ಹೊರಬಂದಿದೆ ಎಂದು ಮೂಲಗಳು ತಿಳಿಸಿವೆ.

ಜಿಆರ್‌ಪಿ ಸಿಬ್ಬಂದಿ ವಿರುದ್ಧ ಆಕ್ರೋಶ

ಘಟನೆ ಬೆಳಕಿಗೆ ಬಂದ ಬಳಿಕ ಜಿಆರ್‌ಪಿ ಸಿಬ್ಬಂದಿಯ ಅನಾಗರಿಕ ವರ್ತನೆಯಿಂದ ಕೋಪಗೊಂಡ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಜನಕ್‌ಪುರ ರಸ್ತೆ ನಿಲ್ದಾಣವನ್ನು ಧ್ವಂಸಗೊಳಿಸಿದ್ದಾರೆ. ಉದ್ರಿಕ್ತ ಗುಂಪು ಸ್ಟೇಷನ್‌ ಸೂಪರಿಟೆಂಡೆಂಟ್‌ ಕಚೇರಿಯ ಮುಖ್ಯ ದ್ವಾರದ ಕಬ್ಬಿಣದ ಗ್ರಿಲ್ ಮತ್ತು ಗಾಜಿನ ಗೇಟ್ ಮುರಿದು ಒಳಗೆ ಪ್ರವೇಶಿಸಿ ಗಲಾಟೆ ಮಾಡಿದೆ. ಜಿಆರ್‌ಪಿ ಸಿಬ್ಬಂದಿ ಹಲ್ಲೆ ನಡೆಸಿದ್ದು ಯಾಕೆ ಎನ್ನುವುದು ತಿಳಿದು ಬಂದಿಲ್ಲ. ಸೀಟುಗಳಿಗಾಗಿ ಪ್ರಯಾಣಿಕರ ನಡುವೆ ಜಗಳ ಕಂಡು ಬಂದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆಸಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಗಳೆಂದು ಗುರುತಿಸಲಾದ ಪ್ರಣಿ ದಯಾನಂದ್ ಪಾಸ್ವಾನ್ ಮತ್ತು ಗೋರೆಲಾಲ್ ಚೌಕಿ ಎಂದಿಬ್ಬರನ್ನು ಅಮಾನತುಗೊಳಿಸಲಾಗಿದ್ದು, ಜಗಳದಲ್ಲಿ ಭಾಗಿಯಾಗಿದ್ದ ಹಲವು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Continue Reading

ಉದ್ಯೋಗ

RRB Recruitment 2024: ರೈಲ್ವೇ ಇಲಾಖೆಯಲ್ಲಿದೆ ಬರೋಬ್ಬರಿ 7,951 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

RRB Recruitment 2024: ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೇ ರಿಕ್ರೂಟ್‌ಮೆಂಟ್‌ ಬೋರ್ಡ್‌ ಅರ್ಜಿ ಆಹ್ವಾನಿಸಿದೆ. ಬರೋಬ್ಬರಿ 7,951 ಜೂನಿಯರ್‌ ಎಂಜಿನಿಯರ್‌, ಕೆಮಿಕಲ್‌ ಸೂಪರ್‌ವೈಸರ್‌ ಹುದ್ದೆಗಳು ಇದಾಗಿದ್ದು, ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಜುಲೈ 30ರಿಂದ ಅರ್ಜಿ ಸಲ್ಲಿಬೇಕಿದ್ದು, ಕೊನೆಯ ದಿನ ಆಗಸ್ಟ್‌ 29. ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

VISTARANEWS.COM


on

RRB Recruitment 2024
Koo

ಬೆಂಗಳೂರು: ಶಿಕ್ಷಣ ಮುಗಿಸಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ರೈಲ್ವೇ ರಿಕ್ರೂಟ್‌ಮೆಂಟ್‌ ಬೋರ್ಡ್‌ (Railway Recruitment Board) ಗುಡ್‌ನ್ಯೂಸ್‌ ನೀಡಿದೆ. ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿನಿಸಿದೆ (RRB Recruitment 2024). ಬರೋಬ್ಬರಿ 7,951 ಜೂನಿಯರ್‌ ಎಂಜಿನಿಯರ್‌, ಕೆಮಿಕಲ್‌ ಸೂಪರ್‌ವೈಸರ್‌ ಹುದ್ದೆಗಳು ಇದಾಗಿದ್ದು, ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಜುಲೈ 30ರಿಂದ ಅರ್ಜಿ ಸಲ್ಲಿಬೇಕಿದ್ದು, ಕೊನೆಯ ದಿನ ಆಗಸ್ಟ್‌ 29 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕೆಮಿಲ್‌ ಮೇಲ್ವಿಚಾರಕ / ಸಂಶೋಧನೆ ಮತ್ತು ಮೆಟಲರ್ಜಿಕಲ್ ಮೇಲ್ವಿಚಾರಕ / ಸಂಶೋಧನೆ (Chemical Supervisor / Research and Metallurgical Supervisor / Research)- 17 ಹುದ್ದೆ, ವಿದ್ಯಾರ್ಹತೆ: ಕೆಮಿಕಲ್ ಟೆಕ್ನಾಲಜಿ, ಮೆಟಲರ್ಜಿ ಎಂಜಿನಿಯರಿಂಗ್‌ನಲ್ಲಿ ಪದವಿ.
ಕಿರಿಯ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಮತ್ತು ಕೆಮಿಕಲ್ ಹಾಗೂ ಮೆಟಲರ್ಜಿಕಲ್ ಅಸಿಸ್ಟೆಂಟ್ (Junior Engineer, Depot Material Superintendent and Chemical & Metallurgical Assistant)- 7,934 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ ಇನ್ ಇಂಜಿನಿಯರಿಂಗ್, ಬಿ.ಎಸ್‌ಸಿ, ಪದವಿ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 36 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ (ಯುರ್‌ & ಇಡಬ್ಲ್ಯುಎಸ್‌) ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪಿಡಬ್ಲ್ಯುಬಿಡಿ (ಎಸ್‌ಸಿ / ಎಸ್‌ಟಿ) ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಮಹಿಳಾ ಅಭ್ಯರ್ಥಿಗಳು / ತೃತೀಯ ಲಿಂಗಿಗಳು / ಅಲ್ಪಸಂಖ್ಯಾತರು / ಇಬಿಸಿ ವಿಭಾಗದ ಅಭ್ಯರ್ಥಿಗಳು 250 ರೂ. ಮತ್ತು ಇತರ ವಿಭಾಗದ ಅಭ್ಯರ್ಥಿಗಳು 500 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಉದ್ಯೋಗದ ಸ್ಥಳ: ಭಾರತದಾದ್ಯಂತ.

RRB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.rrbapply.gov.in/)
  • ಹೆಸರು ನೋಂದಾಯಿಸಿ ಲಾಗಿನ್‌ ಆಗಿ.
  • ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: indianrailways.gov.inಗೆ ಭೇಟಿ ನೀಡಿ ಅಥವಾ ಹೆಲ್ಪ್‌ಲೈನ್‌ ನಂಬರ್‌: Helpline No: 9592001188, 01725653333ಕ್ಕೆ ಕರೆ ಮಾಡಿ.

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

Continue Reading

ದೇಶ

Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Delhi Floods: ರಾಷ್ಟ್ರ ರಾಜಧಾನಿ ದೆಹಲಿಯ ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ಮೃತಪಟ್ಟಿದ್ದಾರೆ. ಸಂಜೆ 7.19ಕ್ಕೆ ಏಕಾಏಕಿ ನೀರು ನುಗ್ಗಿದ ಕಾರಣ ದುರಂತ ಸಂಭವಿಸಿದೆ. ಇದೀಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

VISTARANEWS.COM


on

Delhi Floods
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ಸ್ಥಿತಿ (Delhi Floods) ಉಂಟಾಗಿದೆ. ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ (Rau’s IAS Coaching Institute) ನೀರು ನುಗ್ಗಿ ಅನಾಹುತ ಸಂಭವಿಸಿದ್ದು, ಮೃತರ ಸಂಖ್ಯೆ 3ಕ್ಕೆ ಏರಿದೆ.

ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರ ನಗರದಲ್ಲಿ ಭಾರಿ ಪ್ರವಾಹದ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಇಲ್ಲಿನ ರಾವ್‌ ಐಎಎಸ್‌ ಸ್ಟಡಿ ಸರ್ಕಲ್‌ನ ನೆಲಮಹಡಿಗೆ ನೀರು ನುಗ್ಗಿದೆ. ಸಂಜೆ 7.19ಕ್ಕೆ ಏಕಾಏಕಿ ನೀರು ನುಗ್ಗಿದ ಕಾರಣ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ.

ಬೇಸ್‌ಮೆಂಟ್‌ನಲ್ಲಿ ಸಂಸ್ಥೆಯ ಲೈಬ್ರರಿ ಇದ್ದು, ಇಲ್ಲಿ ಸುಮಾರು 150-180 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡಲಾಗಿದೆ. ಲೈಬ್ರರಿಯಲ್ಲಿ ಕುಳಿತು ಓದುತ್ತಿರುವಾಗ ಚರಂಡಿ ಮೋರಿಯ ತಡೆಗೋಡೆ ಒಡೆದು ಮಳೆ ನೀರು ನುಗ್ಗಿದ ಹಿನ್ನಲೆ ದುರ್ಘಟನೆ ಸಮಭವಿಸಿದೆ. “ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೋಚಿಂಗ್‌ ಸೆಂಟರ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದೆ. ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಹೊರಬರಲು ಆಗದೆ, ಮೇಲಿನ ಮಹಡಿಗೂ ಹೋಗಲು ಆಗದೆ ನೀರಿನಲ್ಲೇ ಸಿಲುಕಿರುವ ಸಾಧ್ಯತೆ ಇದೆ. ಇದರಿಂದಾಗಿ ಮೂವರು ವಿದ್ಯಾರ್ಥಿಗಳ ಸಾವುಂಟಾಗಿದೆ. ಕೂಡಲೇ ಎನ್‌ಡಿಆರ್‌ಎಫ್‌ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ” ಎಂದು ಸೆಂಟ್ರಲ್‌ ದೆಹಲಿ ಡಿಸಿಪಿ ಎಂ. ಹರ್ಷವರ್ಧನ್‌ ತಿಳಿಸಿದ್ದಾರೆ.

ಪ್ರತಿಭಟನೆ

ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಮುನ್ಸಿಪಾಲ್‌ ಕಾರ್ಪೋರೇಷನ್‌ ಆಫ್‌ ದಿಲ್ಲಿ (MCD)ಯನ್ನು ನಿಯಂತ್ರಿಸುವ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ಮೇಲೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. “ಇದು ಸರ್ಕಾರ ಮತ್ತು ಪುರಸಭೆಯ ವೈಫಲ್ಯ. ಇದು ಈ ದೇಶದ ಅತ್ಯಂತ ಸಂವೇದನಾರಹಿತ ಸರ್ಕಾರ. ಇದು ವಿದ್ಯಾರ್ಥಿಗಳ ಸಾವಲ್ಲ, ಕೊಲೆ” ಎಂದು ಬಿಜೆಪಿ ವಕ್ತಾರ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ. ಇನ್ನು ಈ ಆರೋಪಕ್ಕೆ ತಿರುಗೇಟು ನೀಡಿದ ಆಪ್‌, ʼʼಇದಕ್ಕೆ ಬಿಜೆಪಿ ಕೂಡ ಉತ್ತರಿಸಬೇಕು. ಕಳೆದ 15 ವರ್ಷಗಳಿಂದ ಈ ಪ್ರದೇಶದಲ್ಲಿ ಬಿಜೆಪಿ ಕೌನ್ಸಿಲರ್‌ಗಳಿದ್ದರು. ಅವರೇಕೆ ಚರಂಡಿಯನ್ನು ದುರಸ್ತಿ ಮಾಡಲಿಲ್ಲ? ಎಲ್ಲ ಚರಂಡಿಗಳನ್ನು ಒಂದು ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ಮಾಡಬಾರದು” ಎಂದು ಹೇಳಿದೆ.

ಇನ್ನು ಹಲವು ವಿದ್ಯಾರ್ಥಿಗಳು ಶನಿವಾರ ರಾತ್ರಿಯಿಂದಲೇ ಸಂಸ್ಥೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸ್ಥೆಯ ಹೊರಗಿನ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು ‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. “ಎಂಸಿಡಿ ಇದು ವಿಪತ್ತು ಎಂದು ಹೇಳುತ್ತದೆ. ಆದರೆ ಇದು ಸಂಪೂರ್ಣ ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ. ಅರ್ಧ ಗಂಟೆ ಮಳೆ ಬಂದರೆ ಸಾಕು ಮೊಣಕಾಲುವರೆಗೆ ನೀರು ನಿಲ್ಲುತ್ತದೆ. ಅಸಮರ್ಪಕ ಒಳಚರಂಡಿಯಿಂದಾಗಿ ಇದು ಸಂಭವಿಸುತ್ತಿದೆ. ಚರಂಡಿಯನ್ನು ಸ್ವಚ್ಛಗೊಳಿಸಬೇಕು 10-12 ದಿನಗಳಿಂದ ಕೌನ್ಸಿಲರ್‌ಗೆ ಮನವಿ ಸಲ್ಲಿಸುತ್ತಿದ್ದೇನೆ ಎಂದು ಮಾಲೀಕರು ತಿಳಿಸಿದ್ದಾರೆ” ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಭಾರಿ ಮಳೆ; ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಸಾವು!

“ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಮೊದಲ ಬೇಡಿಕೆ. ಘಟನೆಯಿಂದಾದ ಸಾವುಗಳು ಮತ್ತು ಗಾಯಾಳುಗಳ ನಿಜವಾದ ಸಂಖ್ಯೆಯನ್ನು ಬಹಿರಂಗಪಡಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಸದ್ಯ ಘಟನಾ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Continue Reading

ಪ್ರಮುಖ ಸುದ್ದಿ

CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ

CH Vijayashankar: ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

VISTARANEWS.COM


on

CH Vijayashankar
Koo

ಮೈಸೂರು: ಮೇಘಾಲಯದ (Meghalaya) ರಾಜ್ಯಪಾಲರಾಗಿ (Meghalaya Governor) ರಾಜ್ಯದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ (CH Vijayashankar) ಅವರನ್ನು ನೇಮಕ ಮಾಡಲಾಗಿದೆ.

ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್‌ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಆದೇಶ ಹೊರಡಿಸಿದ್ದಾರೆ. ನಿನ್ನೆ ತಡರಾತ್ರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಜಯಶಂಕರ್‌ ಅವರು ಮೈಸೂರಿನ ಮಾಜಿ ಸಂಸದ ಹಾಗೂ ಮಾಜಿ ಸಚಿವರಾಗಿದ್ದಾರೆ.

ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 1994ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ 12ನೇ ಲೋಕಸಭೆಗೆ ಆಯ್ಕೆಯಾದರು. ಮೈಸೂರಿನ ಒಡೆಯರ್ ರಾಜವಂಶದ ಮುಖ್ಯಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಿಂತು ಮರು ಆಯ್ಕೆಯಾದರು.

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಅರಣ್ಯ, ಪರಿಸರ ಇಲಾಖೆ, ಸಣ್ಣ ಪ್ರಮಾಣದ ಕೈಗಾರಿಕೆಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 15 ಜೂನ್ 2010ರಿಂದ ಜನವರಿ 2016ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.

6 ಮಂದಿ ನೂತನ ರಾಜ್ಯಪಾಲರ ನೇಮಕ

ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್‌ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ಸರ್ಕಾರ ಮೂವರು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಪಂಜಾಬ್‌ನಲ್ಲಿ ಭಗವಂತ ಮಾನ್‌ ನೇತೃತ್ವದ ಎಎಪಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸಲಾಗಿದೆ. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಜತೆಗೆ ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್‌

Continue Reading
Advertisement
Actor Darshan Ganesh Rao Visits Renukaswamy Family and spport In Chitradurga
ಸ್ಯಾಂಡಲ್ ವುಡ್9 mins ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್‌ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!

karnataka Rain
ಮಳೆ16 mins ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Paris Olympics 2024 Day 2
ಕ್ರೀಡೆ28 mins ago

Paris Olympics 2024 Day 2: ನೀಗಲಿ 36 ವರ್ಷಗಳ ಪದಕ ಬರ; ಚಿನ್ನಕ್ಕೆ ಗುರಿ ಇರಿಸಲಿ ಭಾರತೀಯ ಮಹಿಳಾ ಆರ್ಚರಿ ತಂಡ

Disha Patani Slips Into a Bikini For a Dip in the Ocean
ಬಾಲಿವುಡ್34 mins ago

Disha Patani: ಕಡಲಲ್ಲಿ ಮಿಂದೆದ್ದ ದಿಶಾ ಪಟಾನಿ; ಬಿಕಿನಿಯಲ್ಲಿ ಬಿಸಿ ಹೆಚ್ಚಿಸಿದ ಹಾಟ್‌ ಬೆಡಗಿ!

Viral News
ವೈರಲ್ ನ್ಯೂಸ್37 mins ago

Viral News: ರೈಲ್ವೇ ಪೊಲೀಸ್‌ ಸಿಬ್ಬಂದಿಯ ಹೊಡೆತಕ್ಕೆ ಯುವಕನ ಕರುಳೇ ಹೊರಬಂತು! ಶಾಕಿಂಗ್‌ Video ಇಲ್ಲಿದೆ

sunil bose savitha viral news
ವೈರಲ್ ನ್ಯೂಸ್1 hour ago

Viral News: ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು!

Geyser Blast
ತಂತ್ರಜ್ಞಾನ1 hour ago

Geyser Blast: ಬಾಂಬ್‌‌ನಂತೆ ಬ್ಲಾಸ್ಟ್ ಆಗಬಹುದು ಗೀಸರ್! ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಇರಲಿ

Mysuru News
ಕ್ರೈಂ1 hour ago

Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ

Actor Darshan case Police Serve Notice To Siddarudha Who Claimed To Met Darshan
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್​ ಭೇಟಿ ಮಾಡಿ, ಯೋಗ, ಧ್ಯಾನ ಹೇಳಿಕೊಟ್ಟೆ ಎಂದ ಸಿದ್ಧಾರೂಢನಿಗೆ ಸಂಕಷ್ಟ! ನೋಟಿಸ್‌ ಕೊಟ್ಟ ಪೊಲೀಸರು!

hd kumaraswamy nanjanagudu
ಪ್ರಮುಖ ಸುದ್ದಿ2 hours ago

HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ16 mins ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ18 hours ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ23 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ24 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ2 days ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ3 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್3 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

ಟ್ರೆಂಡಿಂಗ್‌