ನವದೆಹಲಿ: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಯೂನಿಯನ್ (National Students Union of India – NSUI)ನ ಉಸ್ತುವಾರಿಯನ್ನು ಕಾಂಗ್ರೆಸ್ ಪಕ್ಷವು (Congress Party), ಯುವ ನಾಯಕ ಕನ್ಹಯ್ಯಕುಮಾರ್ (Kanhaiya Kumar) ಅವರನ್ನು ನೇಮಕ ಮಾಡಿದೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಹಿಂದಿ ಭಾಷಿಕ ಪ್ರದೇಶದ ಯುವ ನಾಯಕನಿಗೆ ಕಾಂಗ್ರೆಸ್ ಮಹತ್ವದ ಜವಾಬ್ದಾರಿ ವಹಿಸಿದೆ. ಕನ್ಹಯ್ಯ ಕುಮಾರ್ ಅವರು ತಮ್ಮ ಭೀತಿರಹಿತ ಭಾಷಣಗಳಿಗೆ ಹೆಸರುವಾಸಿಯಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕನ್ಹಯ್ಯ ಕುಮಾರ್ ಅವರನ್ನು ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಎಐಸಿಸಿ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ತಕ್ಷಣದಿಂದ ಅವರ ಜವಾಬ್ದಾರಿ ಶುರುವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕನ್ಹಯ್ಯ ಕುಮಾರ್‌ಗೆ ಕಾಂಗ್ರೆಸ್ ವಕ್ತಾರ ಹುದ್ದೆ, ಹಿಂದಿ ಮಾತುಗಾರಿಕೆಯೇ ಕಾರಣ!
ಎನ್‌ಎಸ್‌ಯುಐ 1971 ಏಪ್ರಿಲ್ 9ರಂದು ಆರಂಭವಾಯಿತು. ಇದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾಗಿದೆ. ಇಂದಿರಾ ಗಾಂಧಿ ಅವರು ಕೇರಳ ವಿದ್ಯಾರ್ಥಿ ಸಂಘ ಮತ್ತು ಪಶ್ಚಿಮ ಬಂಗಾಳ ರಾಜ್ಯ ಛತ್ರ ಪರಿಷತ್‌ಗಳನ್ನು ವಿಲೀನ ಮಾಡಿ, ಎನ್‌ಎಸ್‌ಯುಐ ಆರಂಭಿಸಿದರು. ಈ ಸಂಸ್ಥೆಯನ್ನು ನೀರಜ್ ಕುಂದನ್ ಅವರು ಮುನ್ನಡೆಸುತ್ತಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.