Site icon Vistara News

ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್​ಗೆ ತಮ್ಮ ಕೋಣೆಯನ್ನೇ ಬಿಟ್ಟುಕೊಟ್ಟ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ

America tortured Nikhil Gupta, Petition to the Supreme Court

ನವದೆಹಲಿ: ಚುನಾವಣಾ ಬಾಂಡ್ ವಿಷಯದ ಬಗ್ಗೆ ನಡೆಯುತ್ತಿದ್ದ ಸುಪ್ರೀಂ ಕೋರ್ಟ್​ ಕಲಾಪದ ನಡುವೆ ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ (Kapil Sibal) ಅವರು ಗುರುವಾರ ಅಸ್ವಸ್ಥಗೊಂಡರು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಬ್ಬರೂ ಕೆಲವು ನಿಮಿಷಗಳ ಕಾಲ ಸಿಬಲ್ ಅವರ ಯೋಗಕ್ಷೇಮ ನೋಡಿಕೊಂಡ ಘಟನೆಯೂ ನಡೆಯಿತು.

ವಿಚಾರಣೆಯ ಮೂರನೇ ದಿನವಾದ ಗುರುವಾರ, ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠದ ಮುಂದೆ ಕೇಂದ್ರದ ಪರವಾಗಿ ತುಷಾರ್ ಮೆಹ್ತಾ ವಾದಿಸುತ್ತಿದ್ದರು. ಈ ವೇಳೆ ಸಿಬಲ್ ಎಲ್ಲಿದ್ದಾರೆ ಎಂದು ಮೆಹ್ತಾ ತಿರುಗಿ ನೋಡಿದಾಗ ಅವರು ಕಾಣಲಿಲ್ಲ. ಅರ್ಜಿದಾರರ ಪರವಾಗಿ ಹಾಜರಾಗುತ್ತಿರುವ ಸಿಬಲ್ ಅವರ ತಂಡವು ತಕ್ಷಣ ಮೆಹ್ತಾ ಅವರಿಗೆ ಏನನ್ನೋ ಹೇಳಿತು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಏನಾಯಿತು ಎಂದು ಕೇಳಿದಾಗ, ಅದು ವೈಯಕ್ತಿಕ ವಿಷಯ ಮತ್ತು ವಿಚಾರಣೆಗೆ ಸಂಬಂಧಿಸಿಲ್ಲ ಎಂದು ಅವರು ಹೇಳಿದರು.

ಸಿಬಲ್ ಸ್ವಲ್ಪ ಸಮಯದ ನಂತರ ನ್ಯಾಯಾಲಯಕ್ಕೆ ಕಾಲಿಟ್ಟರು. ಆಗ ಮೆಹ್ತಾ ಅವರು ಸಿಬಲ್ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತಕ್ಷಣ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್​ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಹೇಳಿದರಲ್ಲದೆ, ತಮ್ಮ ಕೊಠಡಿಯನ್ನೇ ಅದಕ್ಕಾಗಿ ಬಳಸುವಂತೆ ಹೇಳಿದರು. ಅವರಿಗೆ ತಿಂಡಿಗಳನ ವ್ಯವಸ್ಥೆ ಮಾಡಿಕೊಟ್ಟರು. ಅದರಂತೆ ಸಿಬಲ್ ಅವರು ಚಂದ್ರಚೂಡ್ ಅವರನ್ನು ಕೊಠಡಿಯಲ್ಲಿ ಮಧ್ಯಾಹ್ನದ ಊಟದವರೆಗೆ ವಿಚಾರಣೆಯಲ್ಲಿ ಭಾಗಿಯಾದರು.

ಮಾತಿನ ಚಕಮಕಿ

ಊಟದ ನಂತರ ಸಿಬಲ್​ ನ್ಯಾಯಾಲಯಕ್ಕೆ ಮರಳಿದರು. ಮೆಹ್ತಾ ಮತ್ತು ಅವರು ತಮ್ಮ ವೃತ್ತಿಪರ ಅನುಭವಗಳನ್ನು ಪ್ರದರ್ಶಿಸಿದರು. ವಿಚಾರಣೆಯ ಕೊನೆಯಲ್ಲಿ, ರಾಜಕೀಯ ಸಂಬಂಧಗಳ ಬಗ್ಗೆ ಇಬ್ಬರು ವಕೀಲರ ನಡುವೆ ಆಸಕ್ತಿದಾಯಕ ಮಾತಿನ ವಿನಿಮಯ ನಡೆಯಿತು. ಮೆಹ್ತಾ ಮಾತನಾಡಿ ಕಾಂಗ್ರೆಸ್​ಗೆ ದೇಣಿಗೆ ನೀಡುವ ವ್ಯಕ್ತಿಯು ಬಿಜೆಪಿಗೆ ಆ ಬಗ್ಗೆ ಮಾಹಿತಿ ತಿಳಿಯುವುದು ಇಷ್ಟ ಪಡುವುದಿಲ್ಲ ಎಂದು ಹೇಳಿದರು.

Adani Group: ಅದಾನಿ ಗ್ರೂಪ್‌ಗೆ 3.5 ಶತಕೋಟಿ ಡಾಲರ್ ಸಾಲ! ಏಷ್ಯಾದ ಅತಿದೊಡ್ಡ ಲೋನ್ ಡೀಲ್

ಗುತ್ತಿಗೆದಾರನಾಗಿರುವ ನಾನು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡುತ್ತೇನೆ ಎಂದು ಭಾವಿಸೋಣ. ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ಬರಬಹುದು ಎಂಬ ಎಚ್ಚರಿಕೆಯಿಂದ ದೇಣಿಗೆ ಮಾಹಿತಿ ಬಯಲಾಗುವುದು ಇಷ್ಟಪಡುವುದಿಲ್ಲ ಎಂದು ಮೆಹ್ತಾ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಬಲ್ “ನಾನು ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ ಎಂಬುದನ್ನು ನನ್ನ ವಿದ್ಯಾವಂತ ಸ್ನೇಹಿತ ಮರೆತಂತೆ ತೋರುತ್ತದೆ” ಎಂದು ಹೇಳಿದರು.

ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರ ಪರವಾಗಿ ಸಿಬಲ್ ನ್ಯಾಯಾಲಯದಲ್ಲಿ ಹಾಜರಾಗಿದ್ದರು ಎಂದು ಸಾಲಿಸಿಟರ್ ಜನರಲ್ ತಕ್ಷಣ ನೆನಪಿಸಿದರು. ಮೆಹ್ತಾ ಅವರು ಸರ್ಕಾರವನ್ನು ಪ್ರತಿನಿಧಿಸುತ್ತಿರುವಾಗ ಅವರು ಬಿಜೆಪಿಯ ಸದಸ್ಯರೇ ಎಂದು ಸಿಬಲ್ ಪ್ರಶ್ನಿಸಿದರು. “ಖಂಡಿತವಾಗಿಯೂ ಇಲ್ಲ” ಎಂದು ಮೆಹ್ತಾ ಉತ್ತರಿಸಿದರು ಮತ್ತು ಶ್ರೀ ಸಿಬಲ್ ಹೇಳಿದರು, “ಆದ್ದರಿಂದ ನಾನು ಕೂಡ ಅಲ್ಲ”.

Exit mobile version