Site icon Vistara News

Sukhdev Singh Gogamedi: ರಜಪೂತ್ ಕರ್ಣಿ ಸೇನಾ ಮುಖಂಡ ಸುಖ್​ದೇವ್​​ ಗೋಗಮೇಡಿ ಗುಂಡಿಟ್ಟು ಹತ್ಯೆ

Kanisena Sukhdeva

ಜೈಪುರ: ರಾಜಸ್ಥಾನದ ಜೈಪುರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ರಾಷ್ಟ್ರೀಯ ರಜಪೂತ್​ ಕರ್ಣಿ ಸೇನಾದ (Karni Sena) ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮೇಡಿ (Sukhdev Singh Gogamedi) ಅವರನ್ನು ಮಂಗಳವಾರ ಹಾಡಹಗಲೇ ಅಪರಿಚಿತ ಬಂದೂಕುಧಾರಿಗಳು ಹತ್ಯೆ (Murder Case) ಮಾಡಿದ್ದಾರೆ. ಅಪರಿಚಿತರು ಗೋಗಮೇಡಿ ಅವರು ಮನೆಗೆ ನುಗ್ಗಿ ಮತ್ತು ಗನ್ ಮ್ಯಾನ್ ನರೇಂದ್ರ ಸೇರಿದಂತೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾನಾ ಪಾನಿ ರೆಸ್ಟೋರೆಂಟ್ ಹಿಂಭಾಗದ ಶ್ಯಾಮ್ ನಗರದಲ್ಲಿ ಈ ಘಟನೆ ನಡೆದಿದೆ. ಗುಂಡೇಟಿನಿಂದ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಶ್ಯಾಮ್ ನಗರ ಪೊಲೀಸರು ಘಟನೆಯ ಸ್ಥಳಕ್ಕೆ ತಲುಪಿ ದುಷ್ಕರ್ಮಿಗಳ ಸುಳಿವುಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರ ಪ್ರಕಾರ, ದಾಳಿಯ ಸಮಯದಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದಾರೆ.\

ಇದನ್ನೂ ಓದಿ : Lakhbir Singh: ಸಿಖ್​ ಪ್ರತ್ಯೇಕತವಾದಿ ಸಂಘಟನೆ ಮುಖ್ಯಸ್ಥ ಲಖ್ಬೀರ್ ಸಿಂಗ್ ಸಾವು

ಸುಖದೇವ್ ಸಿಂಗ್ ಗೋಗಮೇಡಿ ಈ ಹಿಂದೆ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಸಹಚರ ಸಂಪತ್ ನೆಹ್ರಾನಿಂದ ಬೆದರಿಕೆಗಳನ್ನು ಸ್ವೀಕರಿಸಿದ್ದರು ಬೆದರಿಕೆಯ ಬಗ್ಗೆ ಅವರು ಜೈಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕರ್ಣಿ ಸೇನಾ ರಾಜಸ್ಥಾನ ಮೂಲದ ಸಂಘಟನೆಯಾಗಿದ್ದು, ಲೋಕೇಂದ್ರ ಸಿಂಗ್ ಕಲ್ವಿ ಸ್ಥಾಪಿಸಿದ ಮತ್ತು ಮಹಿಪಾಲ್ ಸಿಂಗ್ ಮಕ್ರಾನಾ, ವಿಶ್ವಬಂಧು ಸಿಂಗ್ ರಾಥೋಡ್ ಮುನ್ನಡೆಸುತ್ತಿದ್ದಾರೆ.

“ಪ್ರಾಥಮಿಕ ವರದಿಗಳ ಪ್ರಕಾರ, ನಾಲ್ಕು ಜನ ದುಷ್ಕರ್ಮಿಗಳ ಗುಂಪು ಗೋಗಮೇಡಿ ಅವರಿದ್ದ ಮನೆಗೆ ಪ್ರವೇಶಿಸಿ ಗುಂಡು ಹಾರಿಸಿದ್ದರು. ಗುಂಡಿನ ದಾಳಿಯಲ್ಲಿ ಗೋಗಮೇಡಿಯ ಭದ್ರತಾ ಸಿಬ್ಬಂದಿಯೊಬ್ಬರು ಮತ್ತು ಇನ್ನಿಬ್ಬರು ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Exit mobile version