Site icon Vistara News

Kedarnath Landslide: ಕೇದಾರನಾಥದಲ್ಲಿ ಭೀಕರ ಭೂಕುಸಿತ; ಮೂವರು ಯಾತ್ರಿಕರು ದುರ್ಮರಣ

Kedarnath Landslide

ಉತ್ತರಾಖಂಡ: ಭಾರೀ ಮಳೆಗೆ ಕೇದಾರನಾಥ(Kedarnath Landslide)ದಲ್ಲಿ ಭೀಕರ ಭೂಕುಸಿತ(Landslide) ಸಂಭವಿಸಿದ್ದು, ಮೂವರು ಯಾತ್ರಿಕರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಕೆಲವು ಯಾತ್ರಿಕರಿಗೆ ಗಂಭೀರ ಗಾಯಗಳಾಗಿವೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾತ್ರಿಕರು ಇಂದು ಬೆಳಗ್ಗೆ ಗೌರಿಕುಂಡಾದಿಂದ ತಮ್ಮ ಪ್ರಯಾಣವನ್ನು ಆರಂಭಿಸಿದ್ದರು. ಚಿರ್‌ಬಾಸಾ ಪ್ರದೇಶದ ಸಮೀಪ ಭಾರೀ ಭೂ ಕುಸಿತ ಸಂಭವಿಸಿದ್ದು, ಮೂವರು ಯಾತ್ರಿಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ ಎಂದಿದ್ದಾರೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಮೃತರಲ್ಲಿ ಇಬ್ಬರು ಮಹಾರಾಷ್ಟ್ರ ಮೂಲದವರರಾಗಿದ್ದು, ಅರುಣ್‌ ಪರಾಠೆ ಮತ್ತು ಸುನಿಲ್‌ ಮಹಾದೇವ್‌ ಕಾಲೆ ಎಂದು ಗುರುತಿಸಲಾಗಿದೆ. ಮತ್ತೊರ್ವನನ್ನು ರುದ್ರಪ್ರಯಾಗ್‌ ಮೂಲದ ಅನುರಾಗ್‌ ಬಿಶ್ತ್‌ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Karnataka HC: ನ್ಯಾಯಮೂರ್ತಿಗಳು ಕೂಡ ಮನುಷ್ಯರೇ; ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಅಪರಾಧವಲ್ಲ ಆದೇಶ ಹಿಂಪಡೆದ ಹೈಕೋರ್ಟ್

Exit mobile version