Site icon Vistara News

Delhi Politics | ದೆಹಲಿಯಲ್ಲಿ ರಾಜಕೀಯ ಹೈಡ್ರಾಮಾ, ಕೇಜ್ರಿವಾಲ್‌ ಸಭೆಯಲ್ಲಿ ಭಾಗಿಯಾದ ಆಪ್‌ ಶಾಸಕರೆಷ್ಟು?

Arvind Kejriwal

What Next After Arvind Kejriwal Skips 3rd Probe Agency Summons? Here Is Explained

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಇದುವರೆಗೆ ಅಬಕಾರಿ ನೀತಿ ಜಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದ (Delhi Politics) ಕುರಿತು ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದ ಆಮ್‌ ಆದ್ಮಿ ಸರಕಾರವೀಗ, ಬಿಜೆಪಿಯು ಆಪ್‌ ಸರಕಾರವನ್ನು ಕೆಡವಲು ಯತ್ನಿಸುತ್ತಿದೆ, ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿದೆ. ಹಾಗಾಗಿ, ಅಬಕಾರಿ ನೀತಿ ಪ್ರಕರಣವು ಈಗ ದಿನಕ್ಕೊಂದು ತಿರುವು ಪಡೆಯುವುದರ ಜತೆಗೆ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗುತ್ತಿದೆ.

ಬಿಜೆಪಿಯು ದೆಹಲಿ ಸರಕಾರವನ್ನು ಕೆಡವಲು ಯತ್ನಿಸುತ್ತಿದೆ, ಪಕ್ಷದ ಹಲವು ಶಾಸಕರ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸುತ್ತಲೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರ ಜತೆ ಸಭೆ ನಡೆಸಿದ್ದಾರೆ. ಆದರೆ, ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ಅಬಕಾರಿ ನೀತಿ ಪ್ರಕರಣಕ್ಕೆ ಆಮ್‌ ಆದ್ಮಿ ಪಕ್ಷವೇ ತಿರುವು ನೀಡುತ್ತಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ಹಾಜರಾದ ಶಾಸಕರೆಷ್ಟು?

ಅರವಿಂದ ಕೇಜ್ರಿವಾಲ್‌ ಸಭೆಗೆ ೫೩ ಶಾಸಕರು ಹಾಜರಾಗಿದ್ದಾರೆ. ದಿಲ್ಲಿಗೆ ಆಗಮಿಸಲು ಆಗದ ಶಾಸಕರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಭೆಗೂ ಮುನ್ನ ಹಲವು ಶಾಸಕರ ಜತೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಆಪ್‌ ಶಾಸಕಿ ಆತಿಶಿ ಹೇಳಿದ್ದರು. ಆದರೆ, ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ೭೦ ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ ೬೨ ಶಾಸಕರನ್ನು ಹೊಂದಿರುವ ಆಪ್‌ಗೇಕೆ ಇಷ್ಟೊಂದು ಭಯ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಬಿಜೆಪಿ ಕೇವಲ ಏಂಟು ಶಾಸಕರನ್ನು ಹೊಂದಿದೆ.

ಸಭೆಗೆ ಗೈರಾದವರು ಯಾರು?

ರಾಮ್‌ ನಿವಾಸ್‌ ಗೋಯಲ್‌, ಗುಲಾಬ್‌ ಮಟಿಯಾಲ, ವಿನಯ್‌ ಮಿಶ್ರಾ, ಶಿವಚರಣ್‌ ಗೋಯಲ್‌, ಮನೀಷ್‌ ಸಿಸೋಡಿಯಾ. ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯೇಂದ್ರ ಜೈನ್‌ ಜೈಲಿನಲ್ಲಿರುವ ಕಾರಣ ಸಭೆಯಲ್ಲಿ ಪಾಲ್ಗೊಂಡಿಲ್ಲ. ಆಮ್‌ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದರೆ ಒಬ್ಬ ಶಾಸಕರಿಗೆ ೨೦ ಕೋಟಿ ರೂ. ನೀಡುವುದಾಗಿ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಬುಧವಾರ ಆಪ್‌ ಆರೋಪಿಸಿತ್ತು.

ಇದನ್ನೂ ಓದಿ | ಬಿಜೆಪಿಯಿಂದ ಬಂದಿತ್ತು ಸಿಎಂ ಪೋಸ್ಟ್​ ಆಫರ್​, ಶಾಸಕರಿಗೆ 20 ಕೋಟಿ ಆಮಿಷ: ಮನೀಷ್​ ಸಿಸೋಡಿಯಾ ಆರೋಪ

Exit mobile version