Site icon Vistara News

ಕೋವಿಡ್ ಕಾಲದಲ್ಲಿ ಸರ್ಕಾರಿ ನಿವಾಸಕ್ಕಾಗಿ 45 ಕೋಟಿ ವೆಚ್ಚ! ದಿಲ್ಲಿ ಸಿಎಂ ಕೇಜ್ರಿವಾಲ್ ರಾಜೀನಾಮೆಗೆ ಬಿಜೆಪಿ ಆಗ್ರಹ

ED summons to Arvind Kejriwal about Delhi Liquor scam, Conspiracy to arrest says App

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ವೇಳೆ ದಿಲ್ಲಿಯ ಸಿವಿಲ್ ಲೈನ್‌ನಲ್ಲಿರುವ ಸರ್ಕಾರಿ ಅಧಿಕೃತ ನಿವಾಸ ಸೌಂದರ್ಯೀಕರಣಕ್ಕಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (arvind kejriwal) ಅವರು 45 ಕೋಟಿ ರೂ. ವೆಚ್ಚ ಮಾಡಿದ್ದಾರೆಂದು ಭಾರತೀಯ ಜನತಾ ಪಾರ್ಟಿ(BJP) ಆರೋಪಿಸಿದೆ. ಹಾಗಾಗಿ ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಬಿಜೆಪಿಯ ಈ ಆರೋಪಕ್ಕೆ ಆಮ್ ಆದ್ಮಿ ಪಾರ್ಟಿ(ಆಪ್) ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲವೇ ಸರ್ಕಾರದಿಂದಲೂ ಯಾವುದೇ ಹೇಳಿಕೆ ಬಂದಿಲ್ಲ. ಹೀಗಿದ್ದಾಗ್ಯೂ, ಇದು ನವೀಕರಣವನ್ನು ಮಾಡಿಲ್ಲ. ಹಳೆಯ ಕಟ್ಟಡದ ಸ್ಥಳದಲ್ಲಿ ಹೊಸ ಕಟ್ಟಡವನ್ನೇ ನಿರ್ಮಿಸಲಾಗಿದೆ. ಅವರ ಆಫೀಸ್ ಕೂಡ ಅದರಲ್ಲೇ ಇದೆ. ಇದಕ್ಕಾಗಿ ಸುಮಾರು 44 ಕೋಟಿ ರೂ. ವೆಚ್ಚವಾಗಿದೆ. ಆದರೆ ಹಳೆಯ ಕಟ್ಟಡ ಬದಲಿಗೆ ಹೊಸದನ್ನೇ ನಿರ್ಮಿಸಲಾಗಿದೆ ಎಂಬುದನ್ನು ಗಮನಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಖಲೆಗಳ ಪ್ರಕಾರ, ಒಟ್ಟು ವೆಚ್ಚದಲ್ಲಿ ಒಳಾಂಗಣ ಅಲಂಕಾರಕ್ಕಾಗಿ 11.30 ಕೋಟಿ, ಕಲ್ಲು ಮತ್ತು ಮಾರ್ಬಲ್ ನೆಲಹಾಸುಗಳಿಗೆ 6.02 ಕೋಟಿ, ಒಳಾಂಗಣ ವಿನ್ಯಾಸದ ಸಲಹೆಗಾಗಿ 1 ಕೋಟಿ, ಎಲೆಕ್ಟ್ರಿಯಲ್ ಫಿಟ್ಟಿಂಗ್ ಮತ್ತು ಉಪಕರಣಗಳಿಗೆ 2.58 ಕೋಟಿ, ಅಗ್ನಿಶಾಮಕ ವ್ಯವಸ್ಥೆಗೆ 2.85 ಕೋಟಿ, 2.85 ಕೋಟಿ ವಾರ್ಡ್ ರೋಬ್ ಮತ್ತು ಆಕ್ಸೆಸರೀಸ್ ಫಿಟ್ಟಿಂಗ್‌ಗಳಿಗೆ 1.41 ಕೋಟಿ, ಅಡುಗೆ ಸಲಕರಣೆಗಳಿಗಾಗಿ 1.1 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಅಲ್ಲದೇ, ಮಂಜೂರಾದ 9.99 ಕೋಟಿ ರೂಪಾಯಿಯಲ್ಲಿ ಪ್ರತ್ಯೇಕ 8.11 ಕೋಟಿಯನ್ನು ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದಲ್ಲಿರುವ ಕ್ಯಾಂಪ್ ಕಚೇರಿಗೆ ಖರ್ಚು ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Delhi liquor policy case: ವಿಚಾರಣೆಗೆ ಹಾಜರಾಗಲು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲವೂ ಸ್ಥಗಿತಗೊಂಡಿದ್ದವು. ಆದರೆ, ಕೇಜ್ರಿವಾಲ್ ಅವರು ತಮ್ಮ ಬಂಗಲೆಯನ್ನು ಅಲಂಕರಿಸಲು ಸುಮಾರು 45 ಕೋಟಿ ಖರ್ಚು ಮಾಡಿದ್ದಾರೆ. ಹಾಗಾಗಿ ಅವರು ತಮ್ಮ ನೈತಿಕ ಅಧಿಕಾರದ ಬಗ್ಗೆ ದಿಲ್ಲಿ ಜನರಿಗೆ ಉತ್ತರಿಸಬೇಕು ಎಂದು ಬಿಜೆಪಿಯ ದಿಲ್ಲಿ ಬಿಜೆಪಿಯ ಅಧ್ಯಕ್ಷ ವೀರೇಂದ್ರ ಸಚದೇವ್ ಅವರು ಹೇಳಿದ್ದಾರೆ.

Exit mobile version