Site icon Vistara News

Kerala Boat Tragedy : ಕೇರಳದಲ್ಲಿ ಪ್ರವಾಸಿ ದೋಣಿ ಮುಳುಗಿ 18 ಮಂದಿ ಸಾವು, ಮುಂದುವರಿದ ಶೋಧ

Kerala: 18 dead as tourist boat capsizes, search underway

#image_title

ಮಲಪ್ಪುರಂ: ಇಲ್ಲಿನ ತಾನೂರ್ ತುವಾಲ್ ಬೀಚ್​ ಬಳಿ ಪ್ರವಾಸಿಗರಿದ್ದ ದೋಣಿ ಮುಳುಗಿ (Kerala Boat Tragedy) 18 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಪ್ರವಾಸಿಗರಿದ್ದ ದೋಣಿ ಸಂಜೆ ಏಳು ಗಂಟೆಯ ವೇಳೆಗೆ ಮುಳುಗಿದೆ ಘಟನೆಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಮಧ್ಯರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದಾರೆ.

ನೀರಿನಲ್ಲಿ ಮುಳುಗಿ ಮೃತರಲ್ಲಿ ನಾಲ್ಕು ಮಕ್ಕಳೂ ಸೇರಿದ್ದಾರೆ. ಗಾಯಾಳುಗಳನ್ನು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರಲ್ಲಿ ಬಹುತೇಕರು ಮಲಪ್ಪುರಂ ಜಿಲ್ಲೆಯ ವಿವಿಧ ಭಾಗದವರಾಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಪ್ರವಾಸಿ ಡಬಲ್ ಡೆಕರ್ ಬೋಟ್​ನಲ್ಲಿ 40 ಪ್ರಯಾಣಿಕರಿದ್ದರು. ಘಟನೆ ನಡೆದ ತಕ್ಷಣ ಎಂಟು ಮಂದಿಯನ್ನು ಮಾತ್ರ ರಕ್ಷಿಸಲಾಗಿತ್ತು. ಉಳಿದವರ ಬಗ್ಗೆ ಮಾಹಿತಿ ದೊರಕಿಲ್ಲ. ಘಟನೆಯಲ್ಲಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭಿರವಾಗಿದೆ ಎಂದು ಹೇಳಲಾಗಿದೆ.

ಘಟನೆ ನಡೆದ ತಕ್ಷಣವೇ ಸ್ಥಳೀಯ ಮೀನುಗಾರರು ರಕ್ಷಣೆ ಕಾರ್ಯ ನಡೆಸಿದ್ದರು. ಆದರೆ, ಬೀಚ್​​ನಲ್ಲಿ ಸೇರಿದ್ದ ಜನರು ಹಾಗೂ ಕುತೂಹಲಕ್ಕೆ ವೀಕ್ಷಿಸಲು ಬರುವವರ ಸಂಖ್ಯೆ ಹೆಚ್ಚಾದ ಕಾರಣ ರಕ್ಷಣಾ ಕಾರ್ಯಕ್ಕೂ ಅಡಚಣೆ ಉಂಟಾಯಿತು. ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ದೋಣಿಯನ್ನು ದಡದವರೆಗೆ ಎಳೆದಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ.

ಕೆಸರು ತುಂಬಿದ ಜಾಗದಲ್ಲಿ ಮುಳುಗಿತ್ತು

ದೋಣಿ ಮುಳುಗಿದ ಜಾಗದಲ್ಲಿ ಕೆಸರು ತುಂಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗೂ ಸಮಸ್ಯೆ ಉಂಟಾಯಿತು ಎನ್ನಲಾಗಿದೆ. ಆ ಪ್ರದೇಶ ಹೆಚ್ಚು ಆಳವಾಗಿತ್ತು ಎಂದು ಹೇಳಲಾಗಿದೆ. ಆದಾಗ್ಯೂ ಸ್ಥಳೀಯರು ಎಂಟು ಮಂದಿಯನ್ನು ರಕ್ಷಿಸಿ ದಡಕ್ಕೆ ಎಳೆದುಕೊಂಡು ಬಂದಿದ್ದಾರೆ.

ಭಾನುವಾರದ ರಜೆಯನ್ನು ಸವಿಯಲು ತಾನೂರ್ ಬೀಚ್​ಗೆ ಜನರು ಬಂದಿದ್ದರು. ಸಂಜೆಯ ವೇಳೆ ಜನ ಸಂದಣಿಯೂ ಜೋರಾಗಿತ್ತು. ಈ ವೇಳೆ ಘಟನೆ ನಡೆದ ಕಾರಣ ಘಟನಾ ಸ್ಥಳಕ್ಕೆ ತಲುಪಲು ಅಗ್ನಿ ಶಾಮಕ ದಳದ ಸಿಬ್ಬಂದಿಗೂ ತೊಂದರೆ ಉಂಟಾಯಿತು ಎಂದು ಪೊಲೀಸರು ಹೇಳಿದ್ದಾರೆ.

Exit mobile version