ತಿರುವನಂಥಪುರಂ: ನಮ್ಮ ನೆರೆಯ ಕೇರಳ (Kerala) ರಾಜ್ಯವು 2040ರ ಹೊತ್ತಿಗೆ ಶೇ.100ರಷ್ಟು ಮರು ಬಳಸಬಹುದಾದ ಇಂಧನ (renewable energy) ಬಳಸಿಕೊಂಡರೆ, ವರ್ಷಕ್ಕೆ 9 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಬಹುದು ಎಂದು ಇತ್ತೀಚಿನ ಅಧ್ಯಯನ ವರದಿಯನ್ನು ತಿಳಿಸಿದೆ. ಮರುಬಳಸಬಹುದಾದ ಇಂಧನವನ್ನು ಬಳಸಬಹುದರಿಂದ ಕೇಂದ್ರದ ವಿದ್ಯುತ್ ವಲಯದಿಂದ ಹಂತಹಂತವಾಗಿ ಹೊರ ಬರಬಹುದು. ಇದರಿಂದ ಸುಮಾರು 4505 ರೂ. ಉಳಿಸಬಹುದು. ವರದಿಯ ಪ್ರಕಾರ, ರಾಜ್ಯವು ತನ್ನ ನಿಗದಿತ ಕಲ್ಲಿದ್ದಲು ವಿದ್ಯುತ್ ಖರೀದಿಯನ್ನು ಕೇಂದ್ರೀಯ ಸ್ಥಾವರಗಳಿಂದ ಹೊಸ ನವೀಕರಿಸಬಹುದಾದ ಇಂಧನದೊಂದಿಗೆ ಬದಲಾಯಿಸಬಹುದು. ಕಲ್ಲಿದ್ದಲು ವಿದ್ಯುತ್ ಒಪ್ಪಂದಗಳನ್ನು ನವೀಕರಿಸಬಹುದಾದ ಇಂಧನದೊಂದಿಗೆ ಒಟ್ಟು ಬದಲಾಯಿಸುವುದರಿಂದ ರಾಜ್ಯಕ್ಕೆ ವಾರ್ಷಿಕ ಅಂದಾಜು 1,843 ಕೋಟಿ ರೂ. ಉಳಿತಾಯವಾಗಲಿದೆ(Green Energy).
ಥಿಂಕ್-ಟ್ಯಾಂಕ್ ಕ್ಲೈಮೇಟ್ ರಿಸ್ಕ್ ಹಾರಿಜಾನ್ಸ್ ಹೊರತಂದ ವರದಿಯನ್ನು ತಿರುವನಂಥಪುರದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧಿಕಾರ, ಅರಣ್ಯ ಮತ್ತು ಸಾಮಾನ್ಯ ಆಡಳಿತ ಕೆ ಆರ್ ಜ್ಯೋತಿಲಾಲ್ ಅವರು ಅಸರ್, ಈಕ್ವಿನಾಕ್ಟ್ ಮತ್ತು SEEM ಜಂಟಿಯಾಗಿ ಆಯೋಜಿಸಿದ್ದ ಕೇರಳದ ವಿದ್ಯುತ್ ವಲಯದಲ್ಲಿ ಇಂಧನ ಪರಿವರ್ತನೆಯ ದುಂಡು ಮೇಜಿನಲ್ಲಿ ವರದಿಯನ್ನು ಬಿಡುಗಡೆ ಮಾಡಿದರು.
ಅಗಾಧ ಪ್ರಮಾಣದಲ್ಲಿ ಇಂಧನ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಕೇರಳ ಹೊಂದಿದ್ದು, ದೇಶದ ಹಸಿರು ಇಂಧನ ರಫ್ತು ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಕೆ ಆರ್ ಜ್ಯೋತಿಲಾಲ್ ಅವರು ಹೇಳಿದರು. ಕೇರಳ ಸದ್ಯಕ್ಕೆ ತನ್ನ ಇಂಧನ ಪೈಕಿ ಶೇ.70ರಷ್ಟು ಆಮದು ಮಾಡಿಕೊಳ್ಳುತ್ತಿದೆ. ಈಗ ಇಂಧನ ಸ್ವಾತಂತ್ರ್ಯಕ್ಕೆ ಹೋರಾಡುವ ಸಮಯ ಎದುರಾಗಿದೆ. ನಾವು ಗ್ರೀನ್ ಹೈಡ್ರೋಜೆನ್ ಮತ್ತು ಪವನ ಶಕ್ತಿ ಉತ್ಪಾದನೆಗೆ ಸನ್ನದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Invest Karnataka 2022 | ದೇಶದ ಮೊಟ್ಟ ಮೊದಲ ಗ್ರೀನ್ ಹೈಡ್ರೋಜನ್ ಘಟಕ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಕೇರಳ ಎನರ್ಜಿ ಮ್ಯಾನೇಜ್‌ಮೆಂಟ್ ಸೆಂಟರ್ ಉಪಾಧ್ಯಕ್ಷ ಆರ್ ವಿ ಜಿ ಮೆನನ್ ಅವರು, ಹಸಿರು ಇಂಧನ ಉತ್ಪಾದನೆಗೆ ನಮ್ಮ ಜಲಾಶಯಗಳು ಪ್ರಮುಕ ಪಾತ್ರ ವಹಿಸಲಿವೆ. ಇಲ್ಲಿ ನಾವು ಫ್ಲೋಟಿಂಗ್ ಸೌರ ವಿದ್ಯುತ್ ಮತ್ತು ಪಂಪ್ಡ್ ಸ್ಟೋರೇಜ್ ಆರಂಭಿಸಿದರೆ ಸಾಕಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ. 10 ವರ್ಷಗಳ ಹಿಂದೆ ಕೆಎಸ್‌ಇಬಿ ನಡೆಸಿದ ಪ್ರಾಥಮಿಕ ಅಧ್ಯಯನವು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜಲಾಶಯಗಳ ಮೂಲಕ ಒಟ್ಟು 5000 ಮೆಗಾವ್ಯಾಟ್‌ಗೂ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.