Site icon Vistara News

Kerala Governor: ರಾಮಲಲ್ಲಾನಿಗೆ ಶಿರಬಾಗಿ ನಮಸ್ಕರಿಸಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌; ವಿಡಿಯೋ ನೋಡಿ

Kerala Governor

Kerala Governor

ಉತ್ತರಪ್ರದೇಶ: ಒಂದು ವರ್ಷದ ಹಿಂದೆ ತಮ್ಮನ್ನು ಹಿಂದೂ ಎಂದು ಕರೆಯರಿ ಎಂಬ ಹೇಳಿಕೆ ನೀಡಿ ಬಹಳ ಸುದಿಯಾಗಿದ್ದ ಕೇರಳ ರಾಜ್ಯಪಾಲ(Kerala Governor) ಆರಿಫ್‌ ಮೊಹಮ್ಮದ್‌ ಖಾನ್‌(Arif Mohammad Khan) ಅವರು ಅಯೋಧ್ಯೆ(Ayodhya)ಗೆ ತೆರಳಿ ರಾಮಲಲ್ಲಾ(Ramalalla)ನ ದರ್ಶನ ಪಡೆಯುವ ಮೂಲಕ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬುಧವಾರ ರಾಮಮಂದಿರಕ್ಕೆ ಭೇಟಿ ಕೊಟ್ಟ ಆರಿಫ್‌ ರಾಮಲಲ್ಲಾನ ಮೂರ್ತಿ ಎದುರು ತಲೆಬಾಗಿ ನಮಸ್ಕರಿಸಿದ್ದಾರೆ. ಅಲ್ಲದೇ ಹಿನ್ನೆಲೆಯಲ್ಲಿ ಜೈ ಶ್ರೀರಾಮ್‌ ಎಂಬ ನಾಮಸ್ಮರಣೆ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋವನ್ನು ಸ್ವತಃ ಆರಿಫ್‌ ಮೊಹಮ್ಮದ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಜೈಶ್ರೀರಾಮ್‌ ನಾಮಸ್ಮರಣೆ ನಡೆವೆಯೇ ಅವರು ರಾಮಲಲ್ಲಾನ ಎದುದು ಮಂಡಿಯೂರಿ ನಮಸ್ಕರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನು ಅಯೋಧ್ಯೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನವರಿಯಲ್ಲಿನಾನು ಎರಡು ಬಾರಿ ಅಯೋಧ್ಯೆಗೆ ಭೇಟಿಕೊಟ್ಟಿದ್ದೇನೆ. ಅನೇಕ ಬಾರಿ ನಾನು ಇಲ್ಲಿಗೆ ಭೇಟಿಕೊಟ್ಟಿದ್ದೇನೆ. ಅಯೋಶ್ಯೆಗೆ ಬಂದು ಶ್ರೀರಾಮನನ್ನು ಪೂಜಿಸುವುದು ಇದು ಸಂತೋಷದ ವಿಚಾರ ಮಾತ್ರವಲ್ಲದೇ ಹೆಮ್ಮೆಯ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಮೂಲತಃ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ ಆರಿಫ್‌ ಹಿಂದೂ ಸಂಸ್ಕೃತಿ, ಪರಂಪರೆ ಬಗ್ಗೆ ಅತೀವ ನಂಬಿಕೆ ಮತ್ತು ಪ್ರೀತಿ ಇಟ್ಟುಕೊಂಡವರು. ಈ ಹಿಂದೆ ಆರ್ಯ ಸಮಾಜವು ತಮ್ಮನ್ನು ಹಿಂದೂ ಎಂದು ಕರೆಯಲೇಬೇಕು ಎಂದು ಆಗ್ರಹಿಸಿದ್ದರು. ಕೇರಳದ ತಿರುವನಂಥಪುರದ ಕೇರಳ ಹಿಂದೂಸ್ ಆಫ್ ನಾರ್ಥ್ ಅಮೆರಿಕ(ಕೆಎಚ್ಎನ್ಎ) ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ(ಆರ್ಯ ಸಮಾಜ) ನನ್ನದೊಂದು ಗಂಭೀರ ಆರೋಪವಿದೆ. ನೀವೇಕೆ ನನ್ನನ್ನು ಹಿಂದೂ ಎಂದು ಕರೆಯುವುದಿಲ್ಲ. ಹಿಂದೂ ಎಂಬುದನ್ನು ನಾನು ಧಾರ್ಮಿಕವಾಗಿ ಪರಿಗಣಿಸುವುದಿಲ್ಲ. ಅದೊಂದು ಭೌಗೋಳಿಕ ಸೂಚಕಪದವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಹುಟ್ಟಿದವರು, ಇಲ್ಲೇ ವಾಸಿಸುವವರು, ಇಲ್ಲಿ ಹರಿಯುವ ನದಿಗಳು ನೀರು ಕುಡಿಯುವವರು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳಬೇಕು. ಹಾಗಾಗಿ, ನೀವು ನನ್ನನ್ನೂ ಹಿಂದೂ ಎಂದೇ ಕರೆಯಬೇಕು ಎಂದು ಸೈಯರ್ ಸೈಯದ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಭಿಪ್ರಾಯಪಟ್ಟಿದ್ದರು. ವಸಾಹತುಶಾಹಿ ಯುಗದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್‌ನಂತಹ ಪರಿಭಾಷೆಗಳನ್ನು ಬಳಸುವುದು ಓಕೆ. ಏಕೆಂದರೆ ಬ್ರಿಟಿಷರು ನಾಗರಿಕರ ಸಾಮಾನ್ಯ ಹಕ್ಕುಗಳನ್ನು ನಿರ್ಧರಿಸಲು ಸಮುದಾಯಗಳನ್ನು ಆಧಾರವಾಗಿಸಿಕೊಂಡಿದ್ದರು. ಕೇರಳ ಸರ್ಕಾರದ ಜತೆಗಿನ ಸಂಘರ್ಷಕ್ಕೆ ಆಗಾಗ ಸುದ್ದಿಯಾಗುವ ಖಾನ್, ನಾನು ಹಿಂದೂ ಎಂದು ಹೇಳುವುದು ತಪ್ಪು ಎಂಬ ಭಾವನೆ ಮೂಡಿಸುವ ಷಡ್ಯಂತ್ರ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ:Virat Kohli: ಪಂಜಾಬಿ ಮಾತನಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ಕೇರಳ ಸರ್ಕಾರದ ಮತ್ತು ಆರಿಫ್‌ ನಡುವೆ ತೀವ್ರ ವೈಮನಸ್ಸು ಇದ್ದು, ವಿಶೇಷ ಬೆಳವಣಿಗೆಯೊಂದರಲ್ಲಿ ಅವರು ಸರ್ಕಾರದ ವಿರುದ್ಧ ನಡುರಸ್ತೆಯಲ್ಲಿ ಧರಣಿ ಕುಳಿತು ದೇಶದ ಗಮನ ಸೆಳೆದಿದ್ದರು.

Exit mobile version