Site icon Vistara News

Kerala Landslide: ಕೇರಳದಲ್ಲಿ ವರುಣನ ರೌದ್ರ ನರ್ತನ ಶುರು; ಭಾರೀ ಭೂಕುಸಿತಕ್ಕೆ ಐವರು ಬಲಿ

Kerala Landslide

ವಯನಾಡ್‌: ದೇವರನಾಡು ಕೇರಳದಲ್ಲಿ ಭಾರೀ ಮಳೆ(Heavy Rain)ಗೆ ಪ್ರವಾಹ(Kerala Flood) ಸ್ಥಿತಿ ನಿರ್ಮಾಣವಾಗಿದ್ದು, ಭೂಕುಸಿತಕ್ಕೆ(Kerala Landslide) ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ವಯನಾಡಿ(Wayanad)ನ ಮೆಪ್ಪಡಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಲವಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿದ್ದಾರೆ. ಚೂರಲ್‌ಮಾಲಾ ನಗರದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಮಕ್ಕಳು ಹಾಗೂ ತೊಂಡರ್‌ನಾಡು ಗ್ರಾಮದಲ್ಲಿ ನೇಪಾಳಿ ಕುಟುಂಬದ ಮಗು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದೆ ಎನ್ನಲಾಗಿದೆ.

ಮುಂದಕ್ಕೈ, ಚೂರಲ್‌ಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳಾ ಗ್ರಾಮಗಳು ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಮುಂಕ್ಕೈ ಪ್ರದೇಶದಲ್ಲಿ ಅನೇಕ ಜನರನ್ನು ಏರ್‌ಲಿಫ್ಟ್‌ ಮಾಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಎನ್‌ಡಿಆರ್‌ಎಫ್‌ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಹಲವಾರು ಜನರನ್ನು ನಿರಾಶ್ರಿತರ ತಾಣಕ್ಕೆ ರವಾನಿಸಲಾಗಿದೆ.

ಭಾರೀ ಭೂಕುಸಿತದ ನಂತರ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಂಡಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ. ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲಾಗುವುದು ಮತ್ತು ರಕ್ಷಣಾ ಚಟುವಟಿಕೆಗಳ ನೇತೃತ್ವ ವಹಿಸಲು ರಾಜ್ಯದ ಸಚಿವರು ಗುಡ್ಡಗಾಡು ಜಿಲ್ಲೆಗೆ ತಲುಪಲಿದ್ದಾರೆ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳು ಶೀಘ್ರದಲ್ಲೇ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ತಲುಪಲಿವೆ. ಎರಡು ಹೆಲಿಕಾಪ್ಟರ್‌ಗಳು ವಾಯುಪಡೆಯು ಸೂಲೂರಿನಿಂದ ಹಾರಲಿದೆ ಎಂದು ಅದು ಹೇಳಿದೆ.

ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ. ಹೆಚ್ಚುವರಿಯಾಗಿ, ಕೆಎಸ್‌ಡಿಎಂಎ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳಿಗೆ ರಕ್ಷಣಾ ಪ್ರಯತ್ನಗಳಲ್ಲಿ ಸಹಾಯ ಮಾಡಲು ವಯನಾಡ್‌ಗೆ ತೆರಳಲು ಸೂಚನೆ ನೀಡಲಾಗಿದೆ. ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಎಂಐ-17 ಮತ್ತು ಎಎಲ್‌ಹೆಚ್, ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಮತ್ತು ಪ್ರಯತ್ನಗಳನ್ನು ಸಂಘಟಿಸಲು ಸೂಲೂರಿನಿಂದ ಹೊರಡಲಿವೆ.

ಇದನ್ನೂ ಓದಿ: Viral News: ಮದುವೆಯೇ ಆಗಿಲ್ಲ ಎಂದ ಚಾಮರಾಜನಗರ ಸಂಸದ ನಿರ್ದೇಶಕಿ ಹಣೆಗೆ ಕುಂಕುಮ ಇಟ್ಟರು!

Exit mobile version