Site icon Vistara News

New York Times List Of Places | ನ್ಯೂಯಾರ್ಕ್‌ ಟೈಮ್ಸ್‌ 52 ಪ್ರವಾಸಿ ತಾಣಗಳ ಪೈಕಿ ಭಾರತದ ಒಂದೇ ರಾಜ್ಯಕ್ಕೆ ಸ್ಥಾನ, ಯಾವುದದು?

New York Times List Of Places

ನ್ಯೂಯಾರ್ಕ್:‌ ಪ್ರತಿ ವರ್ಷದಂತೆ ಈ ವರ್ಷವೂ ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯು 2023ರಲ್ಲಿ ಭೇಟಿ ನೀಡಲೇಬೇಕಾದ 52 ತಾಣಗಳ (New York Times List Of Places ) ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಒಂದೇ ಒಂದು ರಾಜ್ಯ ಸ್ಥಾನ ಪಡೆದಿದ್ದು, ದೇಶದ ಯಾವುದೇ ತಾಣಗಳು ಪಟ್ಟಿಯಲ್ಲಿಲ್ಲ.

ಹೌದು, ದೇವರ ಸ್ವಂತ ನಾಡು ಎಂದೇ ಖ್ಯಾತಿಯಾಗಿರುವ ಕೇರಳವು ನ್ಯೂಯಾರ್ಕ್‌ ಟೈಮ್ಸ್‌ 52 ತಾಣಗಳ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದೆ. “ದಕ್ಷಿಣ ಭಾರತದ ರಾಜ್ಯವಾದ ಕೇರಳದ ಕಡಲ ತೀರಗಳು, ಹಿನ್ನೀರಿನ ನಯನ ಮನೋಹರ ದೃಶ್ಯಗಳು, ಇಲ್ಲಿನ ಆಹಾರ ಪದ್ಧತಿ, ವೈಕಥಾಷ್ಟಮಿ ಹಬ್ಬಗಳ ಸಿರಿಯು ಹೆಚ್ಚಿದೆ” ಎಂದು ನ್ಯೂಯಾರ್ಕ್‌ ಟೈಮ್ಸ್‌ ತಿಳಿಸಿದೆ.

ಅದರಲ್ಲೂ, ಹಿನ್ನೀರಿನ ದೃಶ್ಯಗಳಿಗೆ ಖ್ಯಾತಿ ಪಡೆದ ಕೇರಳದ ಗ್ರಾಮ ಕುಮಾರಕೋಮ್‌ ಬಗ್ಗೆಯೂ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ನ್ಯೂಯಾರ್ಕ್‌ ಟೈಮ್ಸ್‌ ತಾಣಗಳ ಪಟ್ಟಿಯಲ್ಲಿ ಲಂಡನ್‌, ಜಪಾನ್‌, ಆಸ್ಟ್ರೇಲಿಯಾದ ಕಾಂಗರೂ ದ್ವೀಪ, ಭೂತಾನ್‌ ಸೇರಿ ಹಲವು ದೇಶಗಳ ತಾಣಗಳು ಸ್ಥಾನ ಪಡೆದಿವೆ. ಟೈಮ್‌ ಮ್ಯಾಗಜಿನ್‌ 2022ರಲ್ಲಿ ತಯಾರಿಸಿದ ಜಗತ್ತಿನ ಅಗ್ರ 50 ತಾಣಗಳ ಪೈಕಿಯೂ ಕೇರಳ ಸ್ಥಾನ ಪಡೆದಿತ್ತು.

ಇದನ್ನೂ ಓದಿ | Sabarimala Temple | ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಸೆಲೆಬ್ರಿಟಿಗಳ, ರಾಜಕಾರಣಿಗಳ ಫೋಟೊಗಳಿಗೆ ನೊ ಎಂಟ್ರಿ; ಕೇರಳ ಹೈಕೋರ್ಟ್​ ನಿರ್ದೇಶನ

Exit mobile version