Site icon Vistara News

ಮಲಯಾಳಂ ಖಾಸಗಿ ವಾಹಿನಿಯ ಆ್ಯಂಕರ್ ವಿಚಾರಣೆ ನಡೆಸಿದ ಕೇರಳ ಪೊಲೀಸ್, ಟಿವಿ ಚರ್ಚೆಯಲ್ಲಿ ಧಮ್ಕಿ ಹಾಕಿದ ಪ್ರಕರಣ

Kerala Police interrogates Malayalam news anchor in case of threats during TV debate

ತಿರುವನಂಥಪುರಂ, ಕೇರಳ: ಚರ್ಚೆಯ ವೇಳೆ ಸಂಸದನಿಗೆ ಧಮ್ಕಿ ಹಾಕಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಕೇರಳ ಖಾಸಗಿ ಸುದ್ದಿ ವಾಹಿನಿಯ ಸಹ ಸಂಪಾದಕ ಹಾಗೂ ಪ್ರೈಮ್ ಟೈಮ್ ಆ್ಯಂಕರೊಬ್ಬರನ್ನು (Malayalam news anchor) ಠಾಣೆಗೆ ಕರೆಯಿಸಿ, ವಿಚಾರಣೆ ನಡೆಸಿದ ಘಟನೆ ಕೇರಳದಲ್ಲಿ ನಡೆದಿದೆ. ಏಷ್ಯಾನೆಟ್ ಟಿವಿಯಲ್ಲಿ ಪ್ರೈಮ್ ಟೈಮ್ ಆ್ಯಂಕರ್ ಆಗಿರುವ ವಿನು ವಿ ಜಾನ್ ಅವರು, ಚರ್ಚೆಯ ವೇಳೆ ರಾಜ್ಯಸಭಾ ಸದಸ್ಯ ಎಳಮರಮ್ ಕರೀಮ್ (Rajya Sabha MP Elamaram Kareem) ಅವರನ್ನು ಟೀಕಿಸಿದ್ದಾರೆಂಬ ಎಂಬ ಕಾರಣಕ್ಕೆ ಅವರ ವಿರುದ್ಧ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ವಿಚಾರಣೆ ನಡೆಸಿದ್ದಾರೆ.

ಏಷ್ಯಾನೆಟ್‌ ನ್ಯೂಸ್‌ನಲ್ಲಿ 2022ರ ಮಾರ್ಚ್ 28 ರಂದು ಪ್ರಸಾರವಾದ, ವಿನು ಆ್ಯಂಕರ್ ಮಾಡಿದ ಚರ್ಚೆಯ ಸಂದರ್ಭದಲ್ಲಿ, ಬೆದರಿಕೆ ಹಾಕಲಾಗಿತ್ತು. ಅವಮಾನ ಮಾಡಲಾಗಿತ್ತು. ಅಲ್ಲದೇ, ತನ್ನ ಮತ್ತು ತಮ್ಮ ಕುಟುಂಬದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸಿದ್ದರು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿಯಾಗಿರುವ ಕರೀಮ್ ದೂರು ನೀಡಿದ್ದರು.

ಇದನ್ನೂ ಓದಿ: Hate Speech Row | ಸಮಾಜ ವಿಭಜಕ ಟಿವಿ ಆ್ಯಂಕರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ, ಸುಪ್ರೀಂ ಕೋರ್ಟ್‌ ಸೂಚನೆ

2022ರ ಏಪ್ರಿಲ್ 28ರಂದು, ತಿರುವನಂಥಪುರಂನ ಕಂಟೋನ್ಮೆಂಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ಪತ್ರಕರ್ತ ವಿರುದ್ಧ ದೂರು ನೀಡಿದ್ದನ್ನು ಕೇರಳ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಖಂಡಿಸಿದ್ದವು. ವಿನು ವಿರುದ್ಧ ಭಾರತೀಯ ದಂಡ ಸಂಹಿತೆ ನಾನಾ ಸೆಕ್ಷನ್‌ಗಳ ಅಡಿ ಅಪರಾಧಕ್ಕೆ ಕುಮ್ಮಕ್ಕು ನೀಡುವುದು, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮಾಡುವುದು ಮತ್ತು ಕ್ರಿಮಿನಲ್ ಬೆದರಿಕೆಯಂಥ ಆರೋಪಗಳನ್ನು ಹೊರಿಸಲಾಗಿದೆ.

Exit mobile version