Site icon Vistara News

Karthyayani Amma: 96ನೇ ವಯಸ್ಸಲ್ಲಿ ಸಾಕ್ಷರತಾ ಪರೀಕ್ಷೆ ಪಾಸಾಗಿದ್ದ ಕಾರ್ತ್ಯಾಯಿನಿ ಅಮ್ಮ ಇನ್ನಿಲ್ಲ!

Karthyayani Amma

Kerala State Literacy Mission's oldest student Karthyayani Amma passes away at 101

ತಿರುವನಂತಪುರಂ: ಕೇರಳದ ರಾಜ್ಯ ಸಾಕ್ಷರತಾ ಮಿಷನ್‌ ಮಿಷನ್ (Kerala State Literacy Mission) ಅಡಿಯಲ್ಲಿ ನಡೆಯುವ ಪರೀಕ್ಷೆಯಲ್ಲಿ 96ನೇ ವಯಸ್ಸಿನಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದ, ರಾಜ್ಯದ ಮನೆಮಾತಾಗಿದ್ದ ಕಾರ್ತ್ಯಾಯಿನಿ ಅಮ್ಮ (101) (Karthyayani Amma) ಅವರು ನಿಧನರಾಗಿದ್ದಾರೆ. ‌ಅಲಪ್ಪುಳದಲ್ಲಿ ಅಕ್ಟೋಬರ್‌ 10ರಂದು ಕಾರ್ತ್ಯಾಯಿನಿ ಅಮ್ಮ ನಿಧನರಾಗಿದ್ದಾರೆ.

ಚೆಪ್ಪಡ್‌ ಗ್ರಾಮದ ಮನೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಕೊನೆಯುಸಿರೆಳೆದಿದ್ದಾರೆ. ಇವರು ಕೆಲ ವರ್ಷಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಇವರು 2018ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ಅಥಾರಿಟಿ (KSLMA) ನಡೆಸುವ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಅವರು ಉತ್ತೀರ್ಣರಾಗಿದ್ದರು. ಸುಮಾರು 40 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 100 ಅಂಕಗಳ ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ 98 ಅಂಕ ಪಡೆದು ಉತ್ತೀರ್ಣರಾಗಿದ್ದರು. ಹಾಗೆಯೇ, ಯೋಜನೆ ಅಡಿಯಲ್ಲಿ ನಡೆದ ಪರೀಕ್ಷೆ ಪಾಸಾದ ರಾಜ್ಯದ ಹಿರಿಯ ‘ಅಭ್ಯರ್ಥಿ’ ಎನಿಸಿದ್ದರು. ಆಗ ಅವರಿಗೆ 96 ವರ್ಷ ವಯಸ್ಸಾಗಿತ್ತು.

ಸಂತಾಪ ಸೂಚಿಸಿದ ಸಿಎಂ ಪಿಣರಾಯಿ ವಿಜಯನ್

“ಕಾರ್ತ್ಯಾಯಿನಿ ಅಮ್ಮ ಅವರು ಅಗಲಿದ ಸುದ್ದಿ ತಿಳಿದು ಅತೀವ ದುಃಕವಾಗಿದೆ. ಅವರು ಕೇರಳದ ಸಾಕ್ಷರತಾ ಪರೀಕ್ಷೆ ಬರೆದು, ಉತ್ತೀರ್ಣರಾಗಿ ಜನರಿಗೆ ಮಾದರಿ ಎನಿಸಿದ್ದರು. ಯಾವುದೇ ಸವಾಲುಗಳ ಮಧ್ಯೆಯೂ ಶಿಕ್ಷಣ ಕಲಿಯಬೇಕು ಎಂಬುದನ್ನು ಕಾರ್ತ್ಯಾಯಿನಿ ಅಮ್ಮ ಸಾರಿದ್ದರು” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಾರಿಶಕ್ತಿ ಪ್ರಶಸ್ತಿ ಪ್ರದಾನ

ಶಿಕ್ಷಣಕ್ಕಾಗಿ ಒಲವು ತೋರಿದ, ವಯಸ್ಸಿನ ಹಂಗು ತೊರೆದು ದಿಟ್ಟತನ ಮೆರೆದ ಕಾರ್ತ್ಯಾಯಿನಿ ಅಮ್ಮ ಅವರಿಗೆ ಕೇಂದ್ರ ಸರ್ಕಾರವು 2020ರಲ್ಲಿ ನಾರಿಶಕ್ತಿ ಪ್ರಶಸ್ತಿ ನೀಡಲಾಗಿತ್ತು. ‌

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಆಗಿನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಕೇರಳ ರಾಜ್ಯ ಪರೀಕ್ಷೆ ಉತ್ತೀರ್ಣರಾದ ಬಳಿಕ ಕಾರ್ತ್ಯಾಯಿನಿ ಅಮ್ಮ ಅವರಿಗೆ ರಾಜ್ಯ ಸರ್ಕಾರವು ಲ್ಯಾಪ್‌ಟಾಪ್‌ ಉಡುಗೊರೆ ನೀಡಿತ್ತು.

ಇದನ್ನೂ ಓದಿ: Vishnu Bhat: ಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿ ವಿಷ್ಣು ಗಜಾನನ ಭಟ್‌ ಇನ್ನಿಲ್ಲ

Exit mobile version