ತಿರುವನಂತಪುರಂ, ಕೇರಳ: ದೇಶಾದ್ಯಂತ ಬೇಸಿಗೆಯ ಬೇಗೆ ಶುರುವಾಗಿದೆ. ಆದರೆ, ನಮ್ಮ ನೆರೆಯ ಕೇರಳದಲ್ಲಿ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದೆ. ಜನರು ಪರಿತಪಿಸುತ್ತಿದ್ದಾರೆ. ಕೇರಳ ನೈಸರ್ಗಿಕ ವಿಪತ್ತು ವ್ಯವಸ್ಥಾಪನಾ ಪ್ರಾಧಿಕಾರ(KSDMA) ಈ ಬಗ್ಗೆ ವರದಿ ತಯಾರಿಸಿದ್ದು, ಗುರುವಾರ ಬಿಡುಗಡೆ ಮಾಡಿದೆ. ಕೇರಳದ ದಕ್ಷಿಣ ಭಾಗದ ಕೆಲವು ಕಡೆ 54 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ. ಇದು ಖಂಡಿತವಾಗಿಯೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾದ ತಾಪಮಾನವಾಗಿದೆ(Kerala Weather:).
ತಿರುವನಂತಪುರಂ ಜಿಲ್ಲೆಯ ದಕ್ಷಿಣ ತುದಿ ಮತ್ತು ಅಳಪ್ಪುಳಾ, ಕೊಟ್ಟಾಯಂ, ಕಣ್ಣೂರು ಜಿಲ್ಲೆಗಳ ಕೆಲವು ಕಡೆ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದೇ ವೇಳೆ, ಕಾಸರಗೋಡು, ಕೋಯಿಕ್ಕೋಡ್, ಮಲಪ್ಪುರಂ, ಕೊಲ್ಲಂ, ಪತ್ತನಂತಿಟ್ಟ, ಮತ್ತು ಎರ್ನಾಕುಲಂನಲ್ಲಿ 40-45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇಷ್ಟೊಂದು ತಾಪಮಾನದಲ್ಲಿ ಜನರು ತಿರುಗಾಡಿದರೆ ಖಂಡಿತವಾಗಿಯೂ ಅನಾರೋಗ್ಯಕ್ಕೆ ತುತ್ತಾಗಲಿದ್ದಾರೆ.
ಇದನ್ನೂ ಓದಿ: Climate Danger : ಕರ್ನಾಟಕ ಸೇರಿ ಒಟ್ಟು 14 ರಾಜ್ಯಗಳಿಗೆ ಗಂಡಾಂತರ! ವಿಶ್ವದಲ್ಲೇ ಅಪಾಯದಲ್ಲಿರುವ ರಾಜ್ಯಗಳಿವು!
ಕೇರಳದ ಹಿಲ್ ಸ್ಟೇಷನ್‌ಗಳಲ್ಲಿ ಮಾತ್ರ ತಾಪಮಾನ ಏರಿಕೆಯಾಗಿಲ್ಲ. ಇದುಕ್ಕಿ, ವಯನಾಡ್ ಮುಂತಾದ ಕೆಲವು ಜಿಲ್ಲೆಗಳಲ್ಲಿ 29 ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಚಿತ್ರ ಎಂದರೆ, ಪಾಲಕ್ಕಾಡ್‌ನಲ್ಲಿ ಸಾಮನ್ಯವಾಗಿ ಪ್ರತಿ ವರ್ಷ ಹೆಚ್ಚು ತಾಪಮಾನವಿರುತ್ತದೆ. ಈ ವರ್ಷ ಮಾತ್ರ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಲ್ಲಿಯವರೆಗೆ ಪಾಲಕ್ಕಾಡ್‌ನಲ್ಲಿ ತಾಪಮಾನವು 30ರಿಂದ 40 ಡಿಗ್ರಿ ಸೆಲ್ಸಿಯಸ್ ಮೀರಿಲ್ಲ.