Site icon Vistara News

Guruvayur Temple Gold: ಕೇರಳದ ಗುರುವಾಯೂರು ದೇಗುಲದಲ್ಲಿದೆ 263 ಕೆಜಿ ಚಿನ್ನ, ಹಣ ಎಷ್ಟು ಸಾವಿರ ಕೋಟಿ?

Guruvaur Sree Krishna Temple Gold

ತಿರುವನಂತಪುರಂ: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ 263 ಕೆಜಿ ಚಿನ್ನ (Guruvayur Temple Gold) ಇದೆ ಎಂದು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕೇಳಿದ ಪ್ರಶ್ನೆಗೆ ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಆದರೆ, ದೇಗುಲ ಆಡಳಿತ ಮಂಡಳಿಯು ಚಿನ್ನದ ಒಟ್ಟು ಮೌಲ್ಯ ಎಂಬುದನ್ನು ಮಾಹಿತಿ ನೀಡಿಲ್ಲ.

“ದೇವಾಲಯದಲ್ಲಿ 263 ಕೆಜಿ ಚಿನ್ನ, 6,605 ಕೆಜಿ ಬೆಳ್ಳಿ, ಬ್ಯಾಂಕ್‌ನಲ್ಲಿ 1,700 ಕೋಟಿ ರೂ. ಠೇವಣಿ ಇಡಲಾಗಿದೆ. ಹಾಗೆಯೇ, 19,981 ಚಿನ್ನದ ಲಾಕೆಟ್‌ಗಳು, 5,359 ಬೆಳ್ಳಿಯ ಲಾಕೆಟ್‌ಗಳು ಇವೆ. ಹಾಗೆಯೇ, ಅಮೂಲ್ಯ ರತ್ನಗಳು, ಚಿನ್ನದ ನಾಣ್ಯಗಳೂ ಇವೆ. ದೇವಾಲಯಕ್ಕೆ ಸಂಬಂಧಿಸಿದ 271 ಎಕರೆ ಭೂಮಿ ಇದೆ” ಎಂದು ತಿಳಿಸಿದೆ.

ಗುರುವಾಯೂರಿನ ನಿವಾಸಿ ಹಾಗೂ ಪ್ರಾಪರ್‌ ಚಾನೆಲ್‌ ಎಂಬ ಸಂಘಟನೆಯ ಅಧ್ಯಕ್ಷ ಎಂ.ಕೆ.ಹರಿದಾಸ್‌ ಎಂಬುವರು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದರು. ಇದಕ್ಕೂ ಮೊದಲು, ಭದ್ರತಾ ಕಾರಣಗಳಿಂದಾಗಿ ಮಾಹಿತಿ ನೀಡಲು ಆಗುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿತ್ತು. ಮಧ್ಯ ಕೇರಳದಲ್ಲಿರುವ ದೇವಾಲಯಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುತ್ತಾರೆ.

ಇದನ್ನೂ ಓದಿ | Sabarimala Temple : ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗಿದ ಗೃಹ ಸಚಿವ ಆರಗ ಜ್ಞಾನೇಂದ್ರ

Exit mobile version