Site icon Vistara News

Khalistan : ಖಲಿಸ್ತಾನಿ ಘಟಕಗಳೊಂದಿಗೆ ಪತ್ರಕರ್ತರ ಸಂಬಂಧ, ಹೊಸ ಮಾರ್ಗದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಉಗ್ರರು

khalistan

ನವದೆಹಲಿ: ಖಲಿಸ್ತಾನಿ (Khalistan) ಪರ ಘಟಕಗಳು ಭಾರತದಲ್ಲಿ ಕಾರ್ಯಪ್ರವರ್ತರಾಗಿದ್ದು, ವಿವಿಧ ರೂಪದಲ್ಲಿ ತಮ್ಮ ಅಜೆಂಡಾಗಳನ್ನು ದೇಶದಲ್ಲಿ ಪ್ರಚಾರ ಮಾಡಲಾರಂಭಿಸಿವೆ. ಹಲವು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳೂ ಕೂಡ ಈ ಘಟಕಗಳೊಂದಿಗೆ ಸಂಪರ್ಕದಲ್ಲಿವೆ ಎನ್ನುವ ಅಘಾತಕಾರಿ ವರದಿಯೊಂದು ಇದೀಗ ಹೊರಬಿದ್ದಿದೆ.

ಇದನ್ನೂ ಓದಿ: Temple Attack in Australia | ಆಸ್ಟ್ರೇಲಿಯಾದಲ್ಲಿ ಹಿಂದು ದೇಗುಲ ಮೇಲೆ ಖಲಿಸ್ತಾನ್ ಉಗ್ರರ ದಾಳಿ, ಮೋದಿ ವಿರುದ್ಧ ಬರಹ

ಗುಪ್ತಚರ ಇಲಾಖೆಯ ಇ-ಬುಕ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪಂಜಾಬ್‌ನ ಪೊಲೀಸ್‌ ಅಧಿಕಾರಿಯಾಗಿರುವ ಗುಲ್ನೀತ್‌ ಸಿಂಗ್‌ ಖೌರಾನಾ ಅವರು ಈ ವರದಿ ನೀಡಿದ್ದಾರೆ. ವರದಿಯ ಪ್ರಕಾರ ಖಲಿಸ್ತಾನಿ ಪರ ಘಟಕಗಳು ಫೇಸ್‌ಬುಕ್‌, ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿವೆ. ಅವುಗಳ ಮೂಲಕ ತಮ್ಮ ಅಜೆಂಡಾಗಳನ್ನು ಸಾಮಾನ್ಯ ಜನರಿಗೆ ಪ್ರಚಾರ ಮಾಡುತ್ತಿವೆ. ಹಾಗೆಯೇ ಕೆಲವು ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು ಕೂಡ ಅವರೊಂದಿಗೆ ಕೈ ಜೋಡಿಸಿದ್ದು, ಅವರ ಸಂದರ್ಶನ ತೆಗೆದುಕೊಂಡು ಪ್ರಸಾರ ಮಾಡುತ್ತಿವೆ ಎಂದು ಹೇಳಲಾಗಿದೆ.‌

ಹಾಗೆಯೇ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಸಂಘಟನೆಗಳು ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಮಾಡಿಕೊಂಡಿದ್ದು, ಅದರ ಮೂಲಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿವೆ. ಖಲಿಸ್ತಾನಿ ಭಯೋತ್ಪಾದಕರು ಆನ್‌ಲೈನ್ ಪ್ರಚಾರ ಚಾನೆಲ್‌ಗಳನ್ನು ನಡೆಸುತ್ತಿದ್ದಾರೆ ಮತ್ತು ಈ ಚಾನಲ್‌ಗಳ ಮೂಲಕ ಉತ್ಪತ್ತಿಯಾಗುವ ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Temple Attack in Australia | ಆಸ್ಟ್ರೇಲಿಯಾದಲ್ಲಿ ಹಿಂದು ದೇಗುಲ ಮೇಲೆ ಖಲಿಸ್ತಾನ್ ಉಗ್ರರ ದಾಳಿ, ಮೋದಿ ವಿರುದ್ಧ ಬರಹ
ಹಲವು ವಾಹಿನಿಗಳು ಮೃತ ಭಯೋತ್ಪಾದಕರು, ಮಾಜಿ ಭಯೋತ್ಪಾದಕರ ಸಂದರ್ಶನಗಳನ್ನು ಪ್ರಸಾರ ಮಾಡುತ್ತಿವೆ. ಈ ಚಾನೆಲ್‌ಗಳು ಪ್ರಾಯೋಜಕತ್ವಗಳು, ಜಾಹೀರಾತುಗಳು ಪಡೆಯುವ ಮೂಲಕ ದೊಡ್ಡ ಪ್ರಮಾಣದ ಹಣವನ್ನು ಸಂಪಾದಿಸುತ್ತಿವೆ. ಈ ಹಣವನ್ನು ಭಯೋತ್ಪಾದಕ ನಿಧಿಯಾಗಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version