Site icon Vistara News

Arjun Ram Meghwal: ಕಿರೆನ್ ರಿಜಿಜುಗೆ ಕೊಕ್, ಅರ್ಜುನ್ ರಾಮ್ ಮೇಘ್ವಾಲ್ ನೂತನ ಕೇಂದ್ರ ಕಾನೂನು ಸಚಿವ

Kiren Rijiu droped and arjun ram meghwa is new law minister

ನವದೆಹಲಿ: ಕೇಂದ್ರ ಸರ್ಕಾರದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಿರೆನ್ ರಿಜಿಜು (Kiren Rijiju) ಅವರಿಗೆ ಕಾನೂನು ಖಾತೆಯಿಂದ ಕೊಕ್ ನೀಡಲಾಗಿದ್ದು, ಆ ಹೊಣೆಯನ್ನು ಅರ್ಜುನ್ ರಾಮ್ ಮೇಘ್ವಾಲ್ (Arjun Ram Meghwal) ಅವರಿಗೆ ವಹಿಸಲಾಗಿದೆ. ಕಾನೂನು ಖಾತೆಯಿಂದ (Law Ministry) ಹೊರ ಬಿದ್ದಿರುವ ಕಿರೆನ್ ರಿಜಿಜು ಅವರಿಗೆ ಕೇವಲ ಭೂ ವಿಜ್ಞಾನ ಸಚಿವಾಲಯ ಹೊಣೆಯನ್ನು ವಹಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನವು ಆದೇಶವನ್ನು ಹೊರಡಿಸಿದೆ.

ಇದರ ಬೆನ್ನಲ್ಲೇ, ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವ ಎಸ್‌ಪಿ ಸಿಂಗ್‌ ಬಘೇಲ್‌ ಅವರ ಖಾತೆಯನ್ನೂ ಬದಲಾಯಿಸಲಾಗಿದೆ. ಇವರನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರನ್ನಾಗಿ ನೇಮಿಸಲಾಗಿದೆ.

ಕಿರೆನ್ ರಿಜಿಜು ಅವರ ಕಾನೂನು ಇಲಾಖೆಯ ಸಚಿವರಾಗಿ ಹಲವು ವಿವಾದಗಳಿಗೆ ಕಾರಣವಾಗಿದ್ದರು. ನ್ಯಾಯಾಂಗ ಜತೆ ಸಂಘರ್ಷಕ್ಕಿಳಿದಿದ್ದರು. ವಿಶೇಷವಾಗಿ ನ್ಯಾಯಮೂರ್ತಿಗಳ ನೇಮಕ ಅಧಿಕಾರವನ್ನು ಸರ್ಕಾರಕ್ಕೆ ನೀಡಬೇಕು ಎಂದು ಹೇಳಿದ್ದರು. ಅಲ್ಲದೇ, ಜಡ್ಜ್ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆ ಸಂವಿಧಾನ ವ್ಯಾಪ್ತಿ ಮೀರಿದ್ದಾಗಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವು, ಕೊಲಿಜಿಯಂ ವ್ಯವಸ್ಥೆ ವಿರುದ್ಧ ಇದೆ ಎಂದು ಬಹಿರಂಗವಾಗಿಯೇ ಹೇಳಿದ್ದರು.

ಇದನ್ನೂ ಓದಿ: Kiren Rijiju: ಕಾನೂನು ಸಚಿವ ರಿಜಿಜು ವಿರುದ್ಧ 300 ವಕೀಲರ ಬಹಿರಂಗ ಪತ್ರ, ಕಾರಣ ಏನು?

ನ್ಯಾಯಾಂಗಕ್ಕೆ ಮುಜಗರವಾಗುವ ರೀತಿಯಲ್ಲಿ ಮಾತನಾಡುತ್ತಿದ್ದ ಕಿರೆನ್ ರಿಜಿಜು ಅವರ ವಿರುದ್ಧ ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ಗರಮ್ ಆಗಿತ್ತು. ಜವಾಬ್ದಾರಿಯ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ವರ್ತಿಸಬೇಕೆಂದು ಹೇಳಿತ್ತು. ಕೆಲವು ನಿವೃತ್ತ ಜಡ್ಜ್‌ಗಳು ರಾಷ್ಟ್ರ ವಿರೋಧಿ ಗುಂಪಿನ ಜತೆ ಗುರುತಿಸಿಕೊಂಡಿದ್ದಾರೆಂದು ಆರೋಪಿಸಿದ್ದರು. ಆಗ 300ಕ್ಕೂ ಹೆಚ್ಚು ವಕೀಲರು ಬಹಿರಂಗ ಪತ್ರ ಬರೆದು ರಿಜಿಜು ಅವರ ನಡುವಳಿಕೆಯನ್ನು ಖಂಡಿಸಿದ್ದರು. ಕಿರೆನ್ ರಿಜಿಜು ಬದಲಾವಣೆಗೆ ಪ್ರಮುಖ ಕಾರಣಗಳು ತಿಳಿದು ಬಂದಿಲ್ಲ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version