ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಶ್ಶೇರಿಯಲ್ಲಿರುವ ಕ್ರೈಸ್ತ ಸಮುದಾಯದ ಕನ್ವೆನ್ಶನ್ ಸೆಂಟರ್‌ನಲ್ಲಿ ಬಾಂಬ್ ಸ್ಫೋಟ (Kochi Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಮಾಹಿತಿ ಬಹಿರಂಗವಾಗುತ್ತಿದೆ. ಸಾವಿರಾರು ಕ್ರೈಸ್ತರು ಭಾನುವಾರ ಬೆಳಗ್ಗೆ (ಅಕ್ಟೋಬರ್ 29) ಪ್ರಾರ್ಥನೆ ಸಲ್ಲಿಸುವ ವೇಳೆ ಸುಧಾರಿತ ಸ್ಫೋಟಕ ಸಾಧನ (IED) ಮೂಲಕ ಸ್ಫೋಟಗೊಳಿಸಲಾಗಿದೆ. ಅದರಲ್ಲೂ, 9.40ರ ಸುಮಾರಿಗೆ ಟಿಫಿನ್ ಬಾಕ್ಸ್‌ನಲ್ಲಿ ಐಇಡಿ ಇಟ್ಟು ಮೊದಲ ಬಾರಿಗೆ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, 40ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿಯೇ 10ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸುಧಾರಿತ ಸ್ಫೋಟಕಗಳ ಮೂಲಕವೇ ಸ್ಫೋಟಿಸಲಾಗಿದೆ ಎಂಬುದನ್ನು ಕೇರಳ ಪೊಲೀಸ್ ಮಹಾ ನಿರ್ದೇಶಕ ಡಾ.ಶೇಖ್ ದರ್ವೇಶ್ ಸಾಹೇಬ್ ಅವರು ಖಚಿತಪಡಿಸಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
#WATCH | Kerala DGP Dr Shaik Darvesh Saheb says "…Preliminary investigation shows it is an IED device and we are investigating it…" pic.twitter.com/CBM2C6asJq
— ANI (@ANI) October 29, 2023
ಸ್ಫೋಟ ಸಂಭವಿಸುತ್ತಲೇ ತನಿಖೆಗಾಗಿ ಕೇರಳ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಲಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ 9.40 ಸುಮಾರಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಐಇಡಿಗಳನ್ನು ಇಟ್ಟು, ಸ್ಫೋಟಿಸಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ನಾಲ್ಕೈದು ಬಾರಿ ಸ್ಫೋಟಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದು ಉಗ್ರರೇ ನಡೆಸಿದ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ.
A Day After Pro-Palestine Rally in Malappuram, Kerala..
— ᎠeeթtᎥ 🇮🇳 (@SaffronJivi) October 29, 2023
4 #Blast took place in Kalamassery, Kochi where mostly JEWISH lives, reportedly 1 D¡ed & several Injured. 💔
KERALA IS D0OMED !!pic.twitter.com/7bCud52wV6
ಇದನ್ನೂ ಓದಿ: Kochi Blast: ಕೇರಳದಲ್ಲಿ ಭಾರಿ ಸ್ಫೋಟಕ್ಕೆ ಮಹಿಳೆ ಬಲಿ, 23 ಮಂದಿಗೆ ಗಾಯ; ಉಗ್ರರ ಕೃತ್ಯ?
ಪಿಣರಾಯಿ-ಅಮಿತ್ ಶಾ ಚರ್ಚೆ
ಸ್ಫೋಟದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಘಟನೆ ಕುರಿತು ತನಿಖೆ ನಡೆಸಲು ಎನ್‌ಐಎ ಹಾಗೂ ಎನ್‌ಎಸ್‌ಜಿ ಪಡೆಗಳು ಸ್ಥಳಕ್ಕೆ ತೆರಳಲು ಅಮಿತ್ ಶಾ ಸೂಚನೆ ನೀಡಿದ್ದಾರೆ. ಪಿಣರಾಯಿ ವಿಜಯನ್ ಅವರು ಕೂಡ ದಾಳಿಯನ್ನು ಖಂಡಿಸಿದ್ದು, ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.