ಜೈಪುರ: ವಿದ್ಯಾರ್ಥಿಗಳನ್ನು ಇಸ್ಲಾಂಗೆ ಮತಾಂತರ (religious conversion), ಲವ್ ಜಿಹಾದ್ (Love Jihad) ಪ್ರೇರೇಪಣೆ ಮತ್ತು ನಿಷೇಧಿತ ಜಿಹಾದಿ ಸಂಘಟನೆಗಳೊಂದಿಗೆ (link with Jihadi outfits) ನಂಟು ಹೊಂದಿರುವ ಆರೋಪದಲ್ಲಿ ಕೋಟಾದ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು (Kota teachers) ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅಮಾನತು (teachers suspend) ಮಾಡಿದ್ದಾರೆ. ಶಿಕ್ಷಕರ ವಿರುದ್ಧ ವಿಚಾರಣೆ ಪ್ರಾರಂಭಿಸಲಾಗಿದೆ.
ಕೋಟಾದ ಸಂಗೋಡು ಬ್ಲಾಕ್‌ನಲ್ಲಿರುವ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರ ಅಮಾನತು ಆದೇಶವನ್ನು ಕೋಟ ಶಿಕ್ಷಣಾಧಿಕಾರಿ ಗುರುವಾರ ಹೊರಡಿಸಿದ್ದಾರೆ. ಸಚಿವ ಮದನ್ ದಿಲಾವರ್ ಅವರು ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಕೋಟಾ ಜಿಲ್ಲೆಯ ಸಂಗೋಡು ಪಂಚಾಯತ್ ಸಮಿತಿಯ ಖಜೂರಿ ಗ್ರಾಮದಲ್ಲಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ, ಹಿಂದೂ ಆಗಿರುವ ಬಾಲಕಿಯ ಧರ್ಮವನ್ನು ವರ್ಗಾವಣೆ ಪ್ರಮಾಣ ಪತ್ರದಲ್ಲಿ ಇಸ್ಲಾಂ ಎಂದು ನಮೂದಿಸಲಾಗಿದೆ. ಇಲ್ಲಿ ಧಾರ್ಮಿಕ ಮತಾಂತರದ ಸಂಚು ಮತ್ತು ಲವ್ ಜಿಹಾದ್ ನಡೆಯುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಇದು ನಮ್ಮ ಗಮನಕ್ಕೆ ಬಂದಿದೆ” ಎಂದರು.
“ಇದು ನನ್ನ ಗಮನಕ್ಕೆ ಬಂದ ತಕ್ಷಣ, ನಾನು ಮೂವರು ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನಾನು ಫಿರೋಜ್ ಖಾನ್ ಮತ್ತು ಮಿರ್ಜಾ ಮುಜಾಹಿದ್ದೀನ್ ಎಂಬ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿದ್ದೇನೆ. ಶಬಾನಾ ಎಂಬ ಶಿಕ್ಷಕಿಯ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುತ್ತಿದೆ. ಮೂವರನ್ನೂ ಬಿಕಾನೇರ್‌ಗೆ ಕಳುಹಿಸಲಾಗಿದೆ. ವಿವರವಾದ ತನಿಖೆಯ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಗತ್ಯವಿದ್ದರೆ ಅವರನ್ನು ಉಚ್ಛಾಟಿಸುತ್ತೇವೆ” ಎಂದಿದ್ದಾರೆ.
ʼಸರ್ವ ಹಿಂದೂ ಸಮಾಜʼ ಎಂಬ ಸ್ಥಳೀಯ ಹಿಂದೂ ಗುಂಪು ಈ ವಿಷಯದ ಬಗ್ಗೆ ಸಚಿವರಿಗೆ ಒತ್ತಾಯಿಸಿ ಪತ್ರ ನೀಡಿದ ನಂತರ ಸಚಿವರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಅಮಾನತುಗೊಂಡ ಶಿಕ್ಷಕರನ್ನು ಮಿರ್ಜಾ ಮುಜಾಹಿದ್ ಮತ್ತು ಫಿರೋಜ್ ಖಾನ್ ಎಂದು ಗುರುತಿಸಲಾಗಿದೆ. ಶಬಾನಾ ಎಂಬಾಕೆಯ ವಿರುದ್ಧ ಕ್ರಮ ಬಾಕಿ ಇದೆ.
ಮೂವರು ಶಿಕ್ಷಕರು ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಪಾಕಿಸ್ತಾನಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಜ್ಞಾಪಕ ಪತ್ರದಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಸಂಗೋಡು ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಎಫ್‌ಐಆರ್ ದಾಖಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.
ಹಿಂದೂ ಮಹಿಳೆಯರನ್ನು ವಿವಾಹವಾಗುವ ಮೂಲಕ ಇಸ್ಲಾಂಗೆ ಧಾರ್ಮಿಕ ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ತೊಡಗುವ ಮುಸ್ಲಿಂ ಪುರುಷರ ಲವ್ ಜಿಹಾದ್ ಸಂಚು ವ್ಯಾಪಕವಾಗಿದೆ ಎಂಬುದು ಹಿಂದೂ ಬಲಪಂಥೀಯ ಕಾರ್ಯಕರ್ತರ ದೂರು.
ಇದನ್ನೂ ಓದಿ: Love Jihad: ಹಿಂದೂ ಬಾಲಕಿ ಜೊತೆ ಮುಸ್ಲಿಂ ಯುವಕ ಪರಾರಿ; ಲವ್ ಜಿಹಾದ್ ಆರೋಪ, ಪ್ರತಿಭಟನೆ