ಲೇಹ್: ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಕ್ಕಾಗಿ ಲಡಾಕ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದ ಸ್ಥಾನಮಾನದ ಜತೆಗೆ, ಸಂವಿಧಾನ 6ನೇ ಅನುಬಂಧ ಪ್ರಕಾರ ವಿಶೇಷ ಮಾನ್ಯತೆ ನೀಡಬೇಕೆಂದು ಒತ್ತಾಯ ಮಾಡಲಾಗುತ್ತಿದೆ. ಲೇಹ್‌ನ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಕ್ಕೋತ್ತಾಯ ಮಾಡಲಾಗುತ್ತಿದೆ(Ladakh State).
ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ನೂರಾರು ಜನರು ಲೇಹ್‌ನಲ್ಲಿ ಆಯೋಜಿಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜತೆಗೆ, ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳಿಗೆ ಪ್ರತ್ಯೇಕ ಸಂಸತ್ ಕ್ಷೇತ್ರಗಳನ್ನು ನೀಡುವಂತೆ ಒತ್ತಾಯಿಸಲಾಯಿತು. ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಾವೇನೂ ಭಿಕ್ಷೆ ಕೇಳುತ್ತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇದೇ ರೀತಿಯ ಕಾರ್ಗಿಲ್ ಜಿಲ್ಲೆಯಲ್ಲೂ ಕಾರ್ಗಿಲ್ ಪ್ರಜಾಸತ್ತಾತ್ಮಕ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿವೆ.
ಆರಂಭದಲ್ಲಿ ಈ ಹೋರಾಟದಲ್ಲಿ ಬಿಜೆಪಿ ಕೂಡ ಪಾಲ್ಗೊಂಡಿತ್ತು. ಆದರೆ, ದ್ವಿಮುಖ ನೀತಿಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಹೋರಾಟದಿಂದ ಹಿಂದೆ ಸರಿದಿದೆ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಲೇಹ್ ಪ್ರದೇಶವನ್ನು ಪ್ರತ್ಯೇಕಗೊಳಿಸಿದಾಗ, ಲಡಾಕ್ ಬುದ್ಧಿಸ್ಟ್ ಅಸೋಯೇಷನ್ ಸಂಭ್ರಮಪಟ್ಟಿತ್ತು. ಈಗ ಅದೇ ಅಸೋಯೇಷನ್ ಈ ಹೋರಾಟದ ಭಾಗವೂ ಆಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಮ್ ಬಹುಸಂಖ್ಯಾತವಾಗಿರುವ ಕಾರ್ಗಿಲ್ ಮತ್ತು ಬುದ್ಧರು ಹೆಚ್ಚಿರುವ ಲೇಹ್ ಒಟ್ಟಿಗೆ ಕೂಡಿ ರಾಜ್ಯ ಸ್ಥಾನಮಾನಕ್ಕೆ ಹೋರಾಟ ಮಾಡುತ್ತಿವೆ.
ಇದನ್ನೂ ಓದಿ | India China Conflict | ಲಡಾಕ್‌ನ ವ್ಯೂಹಾತ್ಮಕ ಸ್ಥಳಗಳಿಂದ ಸೇನೆ ವಾಪಸ್, ಭಾರತ-ಚೀನಾ ಬಿಕ್ಕಟ್ಟು ಅಂತ್ಯ?