Site icon Vistara News

Lalan Singh: ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಲಲನ್‌ ಸಿಂಗ್‌ ರಾಜೀನಾಮೆ; ಮತ್ತೆ ನಿತೀಶ್‌ ಕುಮಾರ್ ಆಧಿಪತ್ಯ

Lalan Singh And Nitish Kumar

Lalan Singh resigns as JDU chief at party's meet in Delhi, Nitish Kumar is new chief

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸಿ, 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ (India Bloc) ಗೆದ್ದರೆ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಬೆನ್ನಲ್ಲೇ ಸಂಯುಕ್ತ ಜನತಾದಳ ಪಕ್ಷದಲ್ಲಿ (JDU) ನಾಯಕತ್ವ ಬದಲಾವಣೆಯ ಗಾಳಿ ಬೀಸಿದೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಲಲನ್‌ ಸಿಂಗ್‌ (Lalan Singh) (ರಾಜೀವ್‌ ರಂಜನ್‌ ಸಿಂಗ್‌ ಪೂರ್ಣ ಹೆಸರು) ಅವರು ಕೆಳಗಿಳಿದಿದ್ದು, ಲೋಕಸಭೆ ಚುನಾವಣೆಗೂ ಮೊದಲೇ ಜೆಡಿಯು ಪಕ್ಷದಲ್ಲಿ ಭಿನ್ನಮತದ ಬಿರುಗಾಳಿ ಎದ್ದಿದೆ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನಿತೀಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮಧ್ಯೆಯೇ ಲಲನ್‌ ಸಿಂಗ್‌ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದರ ಬೆನ್ನಲ್ಲೇ ನಿತೀಶ್‌ ಕುಮಾರ್‌ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆ ಹಾಗೂ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆಗೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ನಾಯಕತ್ವ ಬದಲಾವಣೆಯಾಗಬೇಕು ಎಂಬ ಅಭಪ್ರಾಯ ವ್ಯಕ್ತವಾಗಿದ್ದವು. ಹಾಗಾಗಿ, ಲಲನ್‌ ಸಿಂಗ್‌ ಅವರ ಬದಲಾಗಿ ನಿತೀಶ್‌ ಕುಮಾರ್‌ ಅವರನ್ನೇ ಜೆಡಿಯು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

ಜೆಡಿಯುನಲ್ಲಿ ನಾಯಕತ್ವ ಬಿಕ್ಕಟ್ಟು?

ಲಲನ್‌ ಕುಮಾರ್‌ ಅವರು ನಿತೀಶ್‌ ಕುಮಾರ್‌ ಅವರ ಅತ್ಯಾಪ್ತರಾಗಿದ್ದು, ಇದೇ ಕಾರಣಕ್ಕಾಗಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಇತ್ತೀಚೆಗೆ ಲಲನ್‌ ಸಿಂಗ್ ಹಾಗೂ ನಿತೀಶ್‌ ಕುಮಾರ್‌ ಮಧ್ಯೆ ಭಿನ್ನಾಭಿಪ್ರಾಯ ಮೂಡಿವೆ ಎನ್ನಲಾಗಿದೆ. ಅದರಲ್ಲೂ, ನಿತೀಶ್‌ ಕುಮಾರ್‌ ಅವರು ರಾಜ್ಯದಲ್ಲಿ ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವುದು ಲಲನ್‌ ಸಿಂಗ್‌ ಅವರಿಗೆ ಇಷ್ಟವಾಗಿಲ್ಲ. ಅಲ್ಲದೆ, ಆರ್‌ಜೆಡಿ ಪಕ್ಷವು ಜೆಡಿಯು ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂಬುದು ಲಲನ್‌ ಸಿಂಗ್‌ ಅವರ ಅಭಿಪ್ರಾಯವಾಗಿದೆ. ಹಾಗಾಗಿಯೇ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿತೀಶ್‌ ಕುಮಾರ್‌ ಪರ ಬೆಂಬಲಿಗರ ಘೋಷಣೆ

ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ನೀವು ಖರೀದಿಸಲೇಬೇಕಾದ ಸ್ಮಾರ್ಟ್‌ಫೋನ್ಸ್!

ಚುನಾವಣೆ ಗೆಲ್ಲಲು ರಣತಂತ್ರ?

ಲಲನ್‌ ಸಿಂಗ್‌ ಅವರು ಪ್ರಮುಖ ನಾಯಕರಾಗಿದ್ದರೂ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರ ವರ್ಚಸ್ಸು ಹೆಚ್ಚಿದೆ. ಹಾಗಾಗಿ, 2024ರಲ್ಲಿ ಲೋಕಸಭೆ ಹಾಗೂ ಬಿಹಾರದಲ್ಲಿ 2025ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸುವುದು, ಅದಕ್ಕಾಗಿ ಸಮರ್ಥವಾಗಿ ಪಕ್ಷ ಸಂಘಟನೆ ಮಾಡುವುದು ಸೇರಿ ಹಲವು ಕಾರಣಗಳಿಂದಾಗಿ ನಿತೀಶ್‌ ಕುಮಾರ್‌ ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ ಎಂಬ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version