ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗಸಂಸ್ಥೆ, ಕಣಿವೆಯಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲಿ ನಿರತವಾಗಿದ್ದ ದಿ ರೆಸಿಸ್ಟನ್ಸ್ ಫ್ರಂಟ್‌ಅನ್ನು (The Resistance Front Banned) ಕೇಂದ್ರ ಸರ್ಕಾರ ನಿಷೇಧಿಸಿದೆ.
“ಕಳೆದ ಕೆಲವು ವರ್ಷಗಳಿಂದ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು, ವಲಸಿಗರು ಸೇರಿ ನಾಗರಿಕರ ಹತ್ಯೆಯಲ್ಲಿ ದಿ ರೆಸಿಸ್ಟನ್ಸ್ ಫ್ರಂಟ್ ಕೈವಾಡವಿದೆ. ಇದು ನಿಷೇಧಿತ ಲಷ್ಕರೆ ತಯ್ಬಾದ ಅಂಗ ಸಂಸ್ಥೆಯೇ ಆಗಿದೆ. ಹಾಗಾಗಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಅಂಗ ಸಂಸ್ಥೆಯನ್ನು ನಿಷೇಧಿಸಲಾಗಿದೆ” ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
“ಲಷ್ಕರೆ ತಯ್ಬಾದ ಪರ್ಯಾಯ ಸಂಘಟನೆಯಾಗಿ ದಿ ರೆಸಿಸ್ಟನ್ಸ್ ಫ್ರಂಟ್ 2019ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದನ್ನೂ ಕೂಡ ಯುಪಿಪಿಎ ಕಾಯ್ದೆ ಅನ್ವಯ ಮೊದಲ ಪರಿಚ್ಛೇದದ ಐದನೇ ಅನುಕ್ರಮದಂತೆ ಉಗ್ರ ಸಂಘಟನೆ ಎಂಬುದಾಗಿ ಘೋಷಿಸಲಾಗಿದೆ. ಇದು ಕಣಿವೆಯಲ್ಲಿ ಉಗ್ರ ಚಟುವಟಿಕೆ, ಉಗ್ರ ಸಂಘಟನೆಗೆ ಯುವಕರ ನೇಮಕ ಸೇರಿ ಹಲವು ಕೃತ್ಯಗಳಲ್ಲಿ ತೊಡಗಿದೆ” ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ | Terror Attack In Kashmir | ಕಾಶ್ಮೀರದ ರಾಮ ಮಂದಿರ ಬಳಿ ಉಗ್ರರ ದಾಳಿ, ಮೂವರ ಸಾವು, 6 ಮಂದಿಗೆ ಗಾಯ