ಅಯೋಧ್ಯೆ: ಕನ್ನಡಿಗ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತಿದ ರಾಮಲಲ್ಲಾನ ಮೂರ್ತಿಯನ್ನು ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಇರಿಸಲಾಗಿದೆ. ನಗುಮೊಗದ ಬಾಲರಾಮನ ಫೋಟೊ ಬಿಡುಗಡೆಯಾಗುತ್ತಲೇ ಜನ ಸಂತಸ ವ್ಯಕ್ತಪಡಿಸಿದ್ದಾರೆ. ರಾಮಲಲ್ಲಾನ (Ram Lalla) ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರ ಬೆನ್ನಲ್ಲೇ, ರಾಮಮಂದಿರದ ಭವ್ಯ ಒಳಾಂಗಣದ ವಿಡಿಯೊ ಕೂಡ ಲಭ್ಯವಾಗಿದೆ. ರಾಶಿ ರಾಶಿ ಹೂಗಳಿಂದ ಅಲಂಕಾರಗೊಂಡಿರುವ, ದ್ವೀಪಗಳಿಂದ ಜಗಮಗಿಸುವ ವಿಡಿಯೊ ನೋಡಿ ಭಕ್ತರು ಪುಳಕಿತರಾಗಿದ್ದಾರೆ.
ಇಲ್ಲಿದೆ ರಾಮಮಂದಿರದ ವಿಡಿಯೊ
….. आए गए रघुनन्दन 🙏 pic.twitter.com/4ZE5U86bYK
— Dr. Shalabh Mani Tripathi (@shalabhmani) January 19, 2024
ರಾಮಮಂದಿರ ನಿರ್ಮಾಣದ ವೈಶಿಷ್ಟ್ಯಗಳು
- ರಾಮಮಂದಿರದ ಬುನಾದಿಯನ್ನು ರಾತ್ರಿ ವೇಳೆ ಮಾತ್ರ ನಿರ್ಮಿಸಲಾಗಿದೆ. ತಾಪಮಾನದ ಕಾರಣದಿಂದಾಗಿ ರಾತ್ರಿ ಮಾತ್ರ ಬುನಾದಿ ಹಾಕಲಾಗಿದೆ.
- ಬುನಾದಿಗೆ 21 ಅಡಿ ದಪ್ಪದ ಗ್ರಾನೈಟ್ ಬಳಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಬಳಸುವ ಪಿಲ್ಲರ್ಗಳನ್ನು ಬುನಾದಿಗೆ ಹಾಕಲಾಗಿದೆ.
- ಧೂಳು, ಕೆಮಿಕಲ್ ಮಿಶ್ರಣ ಮಾಡಿ, 56 ಲೇಯರ್ಗಳ ಮೂಲಕ ರಾಮಮಂದಿರ ನಿರ್ಮಿಲಾಗಿದೆ. ಇದಕ್ಕಾಗಿ ವಿಶೇಷ ಕಾಂಕ್ರೀಟ್ ಹಾಕಲಾಗಿದೆ.
- ಕನ್ಸ್ಟ್ರಕ್ಷನ್ ದೈತ್ಯ ಲಾರ್ಸೆನ್ ಆ್ಯಂಡ್ ಟರ್ಬೊ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಲಿಮಿಟೆಂಡ್ ಕಂಪನಿಗಳು ನಿರ್ಮಾಣದ ಹೊಣೆ ಹೊತ್ತುಕೊಂಡಿವೆ.
- ನಾಗರ ಶೈಲಿಯಿಂದ ಸ್ಫೂರ್ತಿ ಪಡೆದು, 360 ಪಿಲ್ಲರ್ಗಳನ್ನು ಬಳಸಿ ರಾಮಮಂದಿರ ನಿರ್ಮಿಸಲಾಗಿದೆ. ಇಡೀ ಮಂದಿರವನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಸಿಮೆಂಟ್, ಕಬ್ಬಿಣ, ಸ್ಟೀಲ್ ಬಳಸಿಲ್ಲ.
- ಭೂಕಂಪ, ಪ್ರವಾಹ, ಚಂಡಮಾರುತ ಅಪ್ಪಳಿಸಿದರೂ ರಾಮಮಂದಿರಕ್ಕೆ ಏನೂ ಆಗುವುದಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Ram Mandir: ಅಮೆಜಾನ್‌ನಲ್ಲಿ ರಾಮಮಂದಿರ ಪ್ರಸಾದ ಸಿಗುತ್ತದೆಯೇ? ಕೇಂದ್ರ ಕೆಂಡವಾಗಿದ್ದೇಕೆ?
The rhythmic beats of Ayodhya's heart sync with the inauguration of Ram Mandir. A monumental day etched in the city's soul. #AyodhaRamMandir pic.twitter.com/AQpKw5ZUUc
— Anu Mishra (@Anu_MishraGS) January 20, 2024
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ