ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ (supreme court collegium:) ವಿಶಿಷ್ಟ ವ್ಯಕ್ತಿಗಳನ್ನು, ಭಿನ್ನ ವರ್ಗದ ವ್ಯಕ್ತಿಗಳನ್ನು ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿದೆ. ಈ ಬಾರಿ ಶಿಫಾರಸು ಮಾಡಿರುವ ಪಟ್ಟಿಯಲ್ಲಿ ವಿಶೇಷ ಚೇತನ ವಕೀಲೆ, ಟ್ರಯಲ್ ಕೋರ್ಟ್ ಲಾಯರ್, ಸಣ್ಣ ಜಾತಿಗೆ ಸೇರಿದ ವಕೀಲರಿದ್ದಾರೆ. ಸಿಜೆಐ ಡಿ ವೈ ಚಂದ್ರಚೂಡ ಹಾಗೂ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟೀಸ್ ಕೆ ಎಂ ಜೋಸೆಫ್ ಅವರಿದ್ದ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ.
ವಿಶೇಷಚೇತನ ವಕೀಲೆ ಆಗಿರುವ ಮೋಕ್ಸಾ ಕಿರನ್ ಥಕ್ಕರ್ ಅವನ್ನು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಅವರು ಸಿವಿಲ್ ಮತ್ತು ಕ್ರಿಮಿನಲ್ ಲಾ ಪ್ರಾಕ್ಟಿಸ್‌ನಲ್ಲಿ ಪರಿಣತರಾಗಿದ್ದಾರೆ. ಅದೇ ರೀತಿ, ಟ್ರಯಲ್ ಕೋರ್ಟ್ ಲಾಯರ್ ಆಗಿರುವ ದೇವನ್ ಮಹೇಂದ್ರ ಭಾಯಿ ದೇಸಾಯಿ ಅವರನ್ನೂ ಗುಜರಾತ್ ಹೈಕೋರ್ಟ್‌ಗೆ ನೇಮಕ ಮಾಡಲಾಗಿದೆ. ಅವರು ಅಹ್ಮಬಾಬಾದ್‌ನ ಸಿಟಿ ಕೋರ್ಟ್‌ನಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರು. ಟ್ರಯಲ್ ಕೋರ್ಟ್‌ನಲ್ಲಿನ ಅನೇಕ ವರ್ಷಗಳ ಅನುಭವವು, ಹೈಕೋರ್ಟ್‌ನ ಸಿವಿಲ್ ಮತ್ತು ಕಮರ್ಷಿಯಲ್ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚು ನೆರವು ದೊರೆಯಲಿದೆ ಎಂದು ಸಮಿತಿ ಹೇಳಿದೆ.
ಮತ್ತೊಂದೆಡೆ, ತೀರಾ ಸಣ್ಣ ಜಾತಿಗೆ ಸೇರಿದೆ ಬುಡಕಟ್ಟು ಜನಾಂಗದ ವಕೀಲರಾಗಿರುವ ಕರ್ದಕ್ ಏಟೆ ಅವರನ್ನು ಗುಹಾಹಟಿ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಏಟೆ ಅವರ ನೇಮಕದಿಂದ ಹೈಕೋರ್ಟ್‌ನಲ್ಲಿ ವೈವಿಧ್ಯತೆಗೆ ದಾರಿ ಮಾಡಿ ಕೊಡಲಿದೆ ಎಂದು ಸಮಿತಿ ಹೇಳಿದೆ.
ಇವರ ಜೊತೆಗೆ, ಸೂಸಾನ್ ವ್ಯಾಲಂಟೈನ್ ಪಿಂಟೋ, ಹಸ್ಮುಖಭಾಯ್ ದಲ್ಸುಮುಖಭಾಯಿ ಸುತಾರ್, ಜಿತೇಂದ್ರ ಚಂಪಕಲಾಲ್ ದೋಷಿ, ಮಂಗೇಶ್ ರಮೇಶ್‌ಚಂದ್ರ ಮೆಂಗ್ಡೆ ಮತ್ತು ದಿವ್ಯೇಶಕುಮಾರ್ ಅಮೃತಲಾಲ್ ಜೋಶಿ ಅವರನ್ನು ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.